ಅನುದಾನ ಬಳಕೆ ಶ್ವೇತ ಪತ್ರ ಹೊರಡಿಸಿ, ಇಲ್ಲದಿದ್ದರೆ ಕರಾಳ ಪತ್ರ ಹೊರಡಿಸಲಾಗುತ್ತದೆ : ಶಾಸಕ ಲಿಂಬಾವಳಿ

0
40

ಬೆಳಗಾವಿ : ಮೋದಿ ನೇತೃತ್ವ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ
ಒಟ್ಟು 2 ಲಕ್ಷ ಕೋಟಿ ಹಣ ಅನುದಾನ ನೀಡಿದೆ .ಅದರ ಬಳಕೆ ಬಗ್ಗೆ ಸಿಎಂ ಸ್ವೇತ್ರ ಪತ್ರ ಹೊರಡಿಸಿ ಇಲ್ಲದಿದ್ದರೆ ನಾವು ಕರಳ ಪತ್ರವನ್ನು ಹೊರಡಿಸಲಾಗುತ್ತದೆ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಸಭೆಯಲ್ಲಿ ಮೋದಿ ಮೋದಿ ಎಂಬ ಘೋಷಣೆಯಿಂದ ಭಯ ಪ್ರಾರಂಭವಾಗಿದೆ. ಬಿಜೆಪಿ‌ ಸರ್ಕಾರ ವಿದ್ದಾ,ಕಾಂಗ್ರೆಸ್ ಸರ್ಕಾರವಿದ್ದ ವೇಳೆ ಕರ್ನಾಟಕ ಕ್ಕೆ ನೀಡಿದ ಅನುದಾನ ಬಗ್ಗೆ ಸ್ವೇತ ಪತ್ರ ಹೊರಡಿಸಿ 134 ಕೋಟಿ, ಅವಾಸ್ ಯೋಜನೆಯಲ್ಲಿ 2640ಕೋಟಿ ಬಳಕೆಯಾಗಿಲ್ಲ ಹಣ ಎಲ್ಲಿ ಹೊಯ್ತು, ನಿರ್ಭಯಾ ಯೋಜನೆಗೆ 650ಕೋಟಿ ಹಣ ಕೋಟಿದೆ. ಆ ಸಿಸಿಟಿವಿ ಬೆಂಗಳೂರು ನಲ್ಲಿ‌ಕಾಣುತ್ತಿಲ್ಲ.5650ಕೋಟಿ ಮೇಟ್ರೋ, ಕುಡಿಯುವ ನೀರಿನ ಯೋಜನೆ, ಬರ ನಿರ್ವಹಣೆ ಗೆ 7170 ಕೋಟಿ , ರಾಜ್ಯದಲ್ಲಿ ಕೇಂದ್ರ ಸರ್ಕಾರ ಹೆದ್ದಾರಿಗೆ 17550 ಕೋಟಿ ಹಣ ನೀಡಿದೆ. 10833 ಕೋಟಿ, ಸೇರಿದಂತೆ ಒಟ್ಟು 2 ಲಕ್ಷ ಕೋಟಿ ಹಣ ನೀಡಿದೆ. ಅದರ ಬಳಕೆ ಎಲ್ಲಿಯೂ ಆಗಿಲ್ಲ ಆ ಹಣ ಎಲ್ಲ ಹೋಗಿದೆ ಎನ್ನುವುದನ್ನು ಸ್ವೇತ ಪತ್ರದ ಮೂಲಕ ತಿಳಿಸಬೇಕು, ಇಲ್ಲದಿದ್ದರೆ ನಾವೇ ಕರಳ ಪತ್ರ ಹೊರಡಿಸಲಾಗುತ್ತದೆ ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಹೇಳಿರುವ ಹೇಳಿಕೆಯಿಂದ ಕಾಂಗ್ರೆಸ್ ನಾಯಕರಲ್ಲಿಯೇ ಸಂಚಲ ಮೂಡಿಸಿದ್ದು, ಅವರಲ್ಲಿಗೆ ಒಡಕು ಉಂಟಾಗಿದೆ. ಈ ಬಾರಿ
ಕರ್ನಾಟಕ ರಾಜ್ಯದಲ್ಲಿ
20 ರಿಂದ 22 ಕ್ಷೇತ್ರಗಳನ್ನು ಬಿಜೆಪಿ ಗೆಲುವು ಸಾಧಿಸಲಿದ್ದೆವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ಈರಣ್ಣಾ ಕಡಾಡಿ, ಬಸವರಾಜ ರೊಟ್ಟಿ, ರಾಜು ಚಿಕ್ಕನಗೌಡ್ರ ಸೇರಿದಂತೆ ಇತರರು ಇದ್ದರು.

loading...