ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಬೃಹತ್ ಶಕ್ತಿ ಪ್ರದರ್ಶನ

0
21

ಕನ್ನಡಮ್ಮ ಸುದ್ದಿ- ಧಾರವಾಡ: ಮಾಜಿ ಸಚಿವ ಸಂತೋಷ ಲಾಡ್ ಅವರ ಮಡಕಿ ಹೊನ್ನಿಹಳ್ಳಿ ಬಯಲಿನಲ್ಲಿ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಬೃಹತ್ ಶಕ್ತಿ ಪ್ರದರ್ಶನ ಮಾಡಿ ಮಾತನಾಡಿದರು.
ಈ ಸಾರಿ ಬಿಜೆಪಿ ಸೋಲಿಸಿ ಮೈತ್ತಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಲೋಕಸಭೆಗೆ ಕಳಿಸಬೇಕು ಎಂದು ಮತದಾರರಲ್ಲಿ ಜೆಡಿಎಸ್ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡರು. ಮೂರು ಬಾರಿ ಸಂಸದರಾದರೂ ಧಾರವಾಡ ಗ್ರಾಮೀಣಕ್ಕೆ ಸಂಸದ ಪ್ರಹ್ಲಾದ ಜೋಶಿ ಕೊಡುಗೆ ಏನು, ಬಿ.ಇ ಕಲಿತ ವಿದ್ಯಾರ್ಥಿಗಳಿಗೆ ಕೂಡ ಇಂದು ಉದ್ಯೋಗ ಸಿಗದೇ ಪರಿತಪಿಸುತ್ತಿದ್ದಾರೆ. ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಬೇಕು ಎನ್ನುತ್ತಾರೆ. ಇಂತವರನ್ನು ಲೋಕಸಭೆಗೆ ಕಳಿಸಬೇಕಾ ಇದಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕಾ ಎಂದರು.
ವಿನಯ ಕುಲಕರ್ಣಿ ಮಾತನಾಡಿ, ಅಧಿಕಾರಕ್ಕೆ ರಾಜಕಾರಣ ಮಾಡುವ ರಾಜಕಾರಣಿಗಳನ್ನು ಎಂದೂ ನಂಬಬೇಡಿ. ಸಾಮಾನ್ಯ ರೈತನಾಗಿದ್ದ ನನ್ನನ್ನು ಎಂ ಎಲ್ ಎ ಮಾಡಿ ರಾಜ್ಯಕ್ಕೆ ತೋರಿಸಿದ್ದಾರೆ. ಸಂಸದ ಪ್ರಹ್ಲಾದ ಜೋಶಿ ಅವರಂತಹ ಕುತಂತ್ರಿ ಮತ್ತೊಬ್ಬರಿಲ್ಲ. ನನ್ನ ವಿರುದ್ಧ ಜೋಶಿ ಅವರು ನಮ್ಮ ಸಮುದಾಯದವರನ್ನು ಎತ್ತಿ ಕಟ್ಟಿ ಹೇಳಿಕೆ ಕೊಡಿಸುತ್ತಾರೆ ಎಂದರು.
ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಮೂರು ಜನ ಸಿಎಂ ಆದ್ರು ಅವರ ಕೊಡುಗೆ ಏನೂ ಇಲ್ಲ. ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವ ಕೆಲಸ ಮಾಡಿದ್ದಾರೆ ಎಂದರು.ಮಾವೇಶದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್ ಎಚ್ ಕೋನರಡ್ಡಿ, ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ, ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಎಂ ಡಿ ಲಕ್ಷ್ಮಿನಾರಾಯಣ, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಗಂಗಾಧರ ಚಿಕ್ಕಮಠ, ಶಾಂತವ್ವ ಗುಜ್ಜಳ, ಇಸ್ಮಾಯಿಲ್ ತಮಟಗಾರ ಸೇರಿದಂತೆ ಕಲಘಟಗಿ, ಅಳ್ನಾವರ ಭಾಗದ ಕಾಂಗ್ರೆಸ್ ಜೆಡಿಎಸ್ ಮುಖಂಡರು ಇದ್ದರು

loading...