ಮೋದಿ ಇರದಿದ್ದರೆ ಹಿಂದೂಗಳಿಗೆ ಭಯೋತ್ಪಾದಕರೆಂಬ ಪಟ್ಟ ಕಟ್ಟುತ್ತಿದ್ದರು: ಸೂಲಿಬೆಲೆ

0
5

ಗುಳೇದಗುಡ್ಡ: ಈ ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರದಿದ್ದರೆ ಈ ದೇಶದ ಹಿಂದುಗಳಿಗೆ ಕಾಂಗ್ರೆಸ್‌ನವರು ಭಯೋತ್ಪಾದಕರು ಎಂದು ಹಣೆಪಟ್ಟಕಟ್ಟುತ್ತಿದ್ದರು. ಮೋದಿ ಪ್ರಧಾನಿಯಾದ್ರೆ ದೇಶಕ್ಕೆ ಬೆಂಕಿ ಬೀಳುತ್ತದೆ, ದಂಗೆಗಳಾಗುತ್ತವೆ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಆದರೆ ಮೋದಿ ಅಧಿಕಾರದಲ್ಲಿ ಒಂದೂ ದಂಗೆಗಳಾಗಲಿಲ್ಲ. ಆದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಹೆಸರಿನಲ್ಲಿ ಮುಸ್ಲಿಂರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿ ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ಚಿsಸಿದರು ಎಂದು ಚರ್ಕವರ್ತಿ ಸೂಲಿಬೆಲೆ ಹೇಳಿದರು.
ಅವರು ಶುಕ್ರವಾರ ರಾತ್ರಿ ಇಲ್ಲಿನ ಭಂಡಾರಿ ಹಾಗೂ ರಾಠಿ ಕಾಲೇಜು ಮೈದಾನದಲ್ಲಿ ಟೀಮ್ ಮೋದಿ ವತಿಯಿಂದ ಹಮ್ಮಿಕೊಂಡಿದ್ದ ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಬ್ಯಾಂಕ್ ಮುಖವನ್ನೆÃ ನೋಡದವರಿಗೆ ಜನಧನ್ ಯೋಜನೆ ತಂದು ಬಡವರಿಗೆ ೩೪ ಕೋಟಿ ಬ್ಯಾಂಕ್ ಖಾತೆ ತೆರದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಮುದ್ರಾ ಯೋಜನೆ ಜಾರಿಗೆ ತಂದು ಹದಿನೇಳು ಕೋಟಿ ಜನರಿಗೆ ಸ್ವಯಂ ಉದ್ಯೊÃಗಕ್ಕಾಗಿ ಸಾಲ ನೀಡಿದ್ದಾರೆ. ಕಾಂಗ್ರೆಸ್ ಆಡಳಿತ ೬೫ ವರ್ಷದಲ್ಲಿ ನಿರ್ಮಿಸಿದ್ದಕ್ಕಿಂತೆ ಹೆಚ್ಚು ಶೌಚಾಲಯಗಳನ್ನು ಮೋದಿ ಅವರು ಕೇವಲ ಐದು ವರ್ಷದಲ್ಲಿ ನಿರ್ಮಿಸಿ, ದೇಶದ ಆರುನೂರು ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಜಿಲ್ಲೆಗಳನ್ನಾಗಿ ಮಾಡಿದ್ದಾರೆ ಎಂದರು.
ಕೋಟಿಕಲ್ಲನ ಹೊಳೆಹುಚ್ಚೆÃಶ್ವರ ಮಠದ ಶ್ರಿÃ ಹೊಳೆಹುಚ್ಚೆÃಶ್ವರ ಸ್ವಾಮಿಗಳು, ಲಕ್ಕಸಕೊಪ್ಪ ಗ್ರಾಮದ ಮಾಜಿ ಸೈನಿಕ ವೀರಣಗೌಡ ಗೌಡರ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬನ್ನಿ, ತಾಲೂಕು ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಕಲ್ಯಾಣರಾವ್ ಮರಳಿ, ನಗರಧ್ಯಕ್ಷ ದೀಪಕ ನೇಮದಿ, ಕಮಲಕಿಶೋರ ಮಾಲಪಾಣಿ, ಸಂಪತ್‌ಕುಮಾರ ರಾಠಿ, ಮಲ್ಲಿಕಾರ್ಜುನ ಶೀಲವಂತ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ರವೀಂದ್ರ ಪಟ್ಟಣಶೆಟ್ಟಿ, ಚಂದಪ್ಪ ಗೌಡರ, ಸಿದ್ದು ಅರಕಾಲಚಿಟ್ಟಿ, ವಿವೇಕಾನಂದ ದೇವಾಂಗಮಠ, ಭುವನೇಶ ಪೂಜಾರಿ, ಮುತ್ತು ಚಿಕ್ಕನರಗುಂದ, ಸಿದ್ದಾರ್ಥ ಸಿಂಗದ, ಶಂಕರ ಕಾಟವಾ, ಸಂಗಣ್ಣ ಹುನಗುಂದ, ಶ್ರಿÃಕಾಂತ ಭಾವಿ, ಶಿವಾನಂದ ಜವಳಿ, ಸಂಜಯ ಕಾರಕೂನ ಮತ್ತಿತರರು ಉಪಸ್ಥಿತರಿದ್ದರು.

loading...