ಗೆಲುವಿನ ಲಯಕ್ಕೆ ಮರಳುವುದು ಅಗತ್ಯ : ಅಶ್ವಿನ್‌

0
9

ನವದೆಹಲಿ:- ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಐಪಿಎಲ್‌ ಇನ್ನುಳಿದ ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳುವ ಅಗತ್ಯವಿದೆ ಎಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ
ನಾಯಕ ಆರ್‌. ಅಶ್ವಿನ್‌ ಹೇಳಿದರು.
ಭಾನುವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಅವರು, ” ಐಪಿಎಲ್ ಎನ್ನುವುದು ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಎಂದರ್ಥ. ತಂಡದ ಆವೇಗವನ್ನುನಿಯಂತ್ರಿಸಿ ಗೆಲುವಿನ ಲಯಕ್ಕೆ ಮರಳುವುದು ಅತ್ಯಗತ್ಯ” ಎಂದರು.

ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತು. ಗೇಲ್‌ 37 ಎಸೆತಗಳಲ್ಲಿ 69 ರನ್‌ ಸಿಡಿಸಿದ್ದರು. ತವರು ಅಂಗಳದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಡೆಲ್ಲಿ ಕ್ಯಾಪಿಟಲ್ಸ್‌, ಈ ಪಂದ್ಯದಲ್ಲಿ ಪಂಜಾಬ್‌ ನೀಡಿದ ಗುರಿಯನ್ನು ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಲುಪಿತು. ಶಿಖರ್‌ ಧವನ್‌(56 ರನ್‌) ಹಾಗೂ ಶ್ರೇಯಸ್‌ ಅಯ್ಯರ್‌(58 ರನ್‌) ತಲಾ ಅರ್ಧ ಶತಕ ಸಿಡಿಸಿದ್ದರು.

“ಅಂಗಳದಲ್ಲಿ ತೇವ ಇದ್ದ ಕಾರಣ ಕಡಿಮೆ ಮೊತ್ತ ದಾಖಲಿಸಬೇಕಾಯಿತು. ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿರಲಿಲ್ಲ. ಪಂದ್ಯದ ಮಧ್ಯೆದಲ್ಲಿ ನಮ್ಮ ತಂಡದ ಹಲವು ಪ್ರಮುಖ ವಿಕೆಟ್‌ಗಳು ಉರುಳಿದವು. ಆದರೆ, ಇದರ ಮಧ್ಯೆಯೂ ಕ್ರಿಸ್‌ ಗೇಲ್‌ ಅದ್ಭುತ ಬ್ಯಾಟಿಂಗ್‌ ಮಾಡಿದರು.” ಎಂದರು.
“ಪಂಜಾಬ್‌ ತಂಡಕ್ಕೆ ಮುಜೀಬ್‌ ಉರ್‌ ರಹಮಾನ್‌ ಮೌಲ್ಯಯುತ ಆಟಗಾರ. ಕಳೆದ ಆವೃತ್ತಿಯಲ್ಲಿ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. ಆದರೆ, ಗಾಯದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದರು. ” ಎಂದು ಅಶ್ವಿನ್‌ ಮುಜೀಬ್‌ ಅಲಭ್ಯದ ಬಗ್ಗೆ ಸ್ಪಷ್ಟಪಡಿಸಿದರು.

ಕಿಂಗ್ಸ್‌ ಇಲೆವೆನ್ ಪಂಜಾಬ್‌ ಆಡಿರುವ ಒಟ್ಟು 10 ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿ, ಇನ್ನುಳಿದ ಐದರಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬುಧವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೆಣಸಲಿದೆ.

loading...