ಪೋಲೀಸ್, ಗೃಹರಕ್ಷಕದಳ ಸಿಬ್ಬಂದಿಯಿಂದ ಪಥ ಸಂಚಲನ

0
46

 

ಯಲಬುರ್ಗಾ: ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪೋಲೀಸ್ ಮತ್ತು ಗೃಹರಕ್ಷಕದಳ ಸಿಬ್ಬಂದಿಗಳಿಂದ ರವಿವಾರ ಯಲಬುರ್ಗಾದಲ್ಲಿ ಪಥ ಸಂಚಲನ ನಡೆಸುವ ಮೂಲಕ ಶಾಂತಿಯುತ ಚುನಾವಣೆ ನಡೆಸಲು ಜನರಲ್ಲಿ ಜಾಗೃತಿ ಮೂಡಿಸಿದರು.
ಸ್ಥಳಿಯ ಠಾಣೆಯ ಪಿಎಸ್‌ಐ ಬಸವರಾಜ ಅಡವಿಭಾವಿ ಇವರ ನೇತೃತ್ವದಲ್ಲಿ ನಡೆದ ಪಥ ಸಂಚಲನವು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ,ಜನರಲ್ಲಿ ಜನ ಜಾಗೃತಿ ಮೂಡಿಸಿದರು.ಲೋಕಸಭಾ ಚುನಾವಣೆಯಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳುವ ಮೂಲಕ ಶಾಂತಿಯುತವಾಗಿ ಚುನಾವಣೆ ನಡೆಯುವಂತೆ ಸಿಪಿಐ ರಮೇಶ ರೋಟ್ಟಿ ಇವರ ಮಾರ್ಗದರ್ಶನದಲ್ಲಿ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪೋಲೀಸ್ ಸಿಬ್ಬಂದಿ ತಿಮ್ಮನಗೌಡ, ಗೃಹರಕ್ಷಕದಳದ ಅಧಿಕಾರಿಗಳಾದ ಯಲಬುರ್ಗಾದ ವೀರಣ್ಣ ಬಡಿಗೇರ, ಬಸವರಾಜ ತುಮ್ಮರಗುದ್ದಿ, ಹುಲ್ಲಣಸಾ ತುಳಸಿಕಟ್ಟಿ ಹನಮಸಾಗರ ಅಕ್ಬರ ಚಳಿಗೇರಿ, ಕುಷ್ಟಗಿಯ ರವೀಂದ್ರ ಬಾಕಳೆ, ನಾಗರಾಜ ಬಡಿಗೇರ, ತಾವರಗೇರಿಯ ರವೀಂದ್ರ ಬಳಿಗೇರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

loading...