ಪ್ರಜಾಪ್ರಭುತ್ವದಲ್ಲಿ ಗೆಲುವು-ಸೋಲು ಮತದಾರರ ಕೈಯಲ್ಲಿದೆ: ಸಚಿವ ದೇಶಪಾಂಡೆ

0
18

ಹಳಿಯಾಳ: ಮೈತ್ರಿ ಧರ್ಮದಂತೆ ಶಿಸ್ತಿನ ಸಿಪಾಯಿಯಾಗಿ ಜೆಡಿಎಸ್ ಕಾಂಗ್ರೆಸ್ ವರಿಷ್ಠರ ತೀರ್ಮಾನದಂತೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮಾಡಿದ್ದೆÃನೆ. ಪ್ರಜಾಪ್ರಭುತ್ವದಲ್ಲಿ ಗೆಲುವು-ಸೋಲು ಮತದಾರರ ಕೈಯಲ್ಲಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಹಳಿಯಾಳ ಪಟ್ಟಣದಲ್ಲಿರುವ ಶಾಸಕರ ಮಾದರಿ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಮರಳಿದ ನಂತರ ದೇಶಪಾಂಡೆಯವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲೋಕಸಭಾ ಕ್ಷೆÃತ್ರದಲ್ಲಿ ಜೆಡಿಎಸ್‌ಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ಶಕ್ತಿ-ಸಾಮರ್ಥ್ಯ ಹೆಚ್ಚಿದ್ದರೂ ಸಹ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಹಾಗೂ ಜೆಡಿಎಸ್ ಅಧ್ಯಕ್ಷ ದೇವೇಗೌಡ ಈ ವರಿಷ್ಠರ ನಡುವೆ ಆದ ಸ್ಥಾನ ಹಂಚಿಕೆಯ ಒಪ್ಪಂದದಂತೆ ಉತ್ತರಕನ್ನಡ ಲೋಕಸಭಾ ಕ್ಷೆÃತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದರಿಂದ ಮೈತ್ರಿ ಧರ್ಮದ ಪ್ರಕಾರ ನಾನು ಪ್ರಚಾರ ಕಾರ್ಯ ಮಾಡಿದ್ದೆÃನೆ. ಕ್ಷೆÃತ್ರಾದ್ಯಂತ ಪ್ರಚಾರ ಕಾರ್ಯಕ್ಕೆ ಓಡಾಡಿದಾಗ ಜೆಡಿಎಸ್ ಪರ ಒಲವು ಕಾಣಿಸುತ್ತಿದೆ ಎಂದರು.

ಗೆಲುವು ಇಲ್ಲವೇ ಸೋಲಿಗೆ ದೇಶಪಾಂಡೆಯವರೇ ಹೊಣೆ ಎಂದು ದೇವೇಗೌಡರು ಹಾಗೂ ಬಸವರಾಜ ಹೊರಟ್ಟಿಯವರು ನೀಡಿದ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ ತಮ್ಮದೇ ಶೈಲಿಯಲ್ಲಿ ನಕ್ಕು ಉತ್ತರಿಸಿದ ದೇಶಪಾಂಡೆ ಹೀಗೆಂದರು- ದೇವೇಗೌಡರು-ಹೊರಟ್ಟಿ ಇವರುಗಳು ನನ್ನ ಹಳೆಯ ಸ್ನೆÃಹಿತರು. ನನ್ನ ಮೇಲಿನ ಪ್ರಿÃತಿ-ವಿಶ್ವಾಸದಿಂದ ಆ ರೀತಿ ಹೇಳಿದ್ದಾರೆ. ಹಿಂದಿನ ಚುನಾವಣೆಗಳ ಫಲಿತಾಂಶ ವಿಶ್ಲೆÃಷಿಸಿದಾಗ ಅನೇಕ ದೊಡ್ಡವರು ಸೋತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಗೆಲುವು/ ಸೋಲು ಇರುವುದು ಸಹಜವಾಗಿದೆ. ಸೋಲು-ಗೆಲುವಿಗೆ ವ್ಯಕ್ತಿಯೊಬ್ಬರನ್ನು ಹೊಣೆಯನ್ನಾಗಿಸುವುದಕ್ಕಿಂತ ಅದು ಮತದಾರರ ಕೈಯಲ್ಲಿದೆ ಎಂಬುದು ಸರ್ವರಿಗೂ ತಿಳಿದ ಸಂಗತಿಯಾಗಿದೆ ಎಂದರು ಆರ್.ವಿ. ದೇಶಪಾಂಡೆ. ದೇಶಪಾಂಡೆಯವರು ತಮ್ಮ ಪತ್ನಿ ರಾಧಾ, ಪುತ್ರರಾದ ಪ್ರಸಾದ ಹಾಗೂ ಪ್ರಶಾಂತ ಅವರ ಜೊತೆಗೂಡಿ ಮತದಾನ ಮಾಡಿದರು.

loading...