ಬಿಜೆಪಿಯವರ ಗೆಲುವಿನ ನಿರೀಕ್ಷೆ ಕನಸಾಗಲಿದೆ: ಘೋಟ್ನೆÃಕರ

0
7

 

ಕನ್ನಡಮ್ಮ ಸುದ್ದಿ-ಹಳಿಯಾಳ: ಜೆಡಿಎಸ್ ಅಭ್ಯರ್ಥಿ ಗೆಲುವು ಶತಸಿದ್ಧ. ಬಿಜೆಪಿಯವರ ಗೆಲುವಿನ ನಿರೀಕ್ಷೆ ಕನಸಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಎಲ್. ಘೋಟ್ನೆÃಕರ ಹೇಳಿದ್ದಾರೆ.
ಶಿವಾಜಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಮೊದ-ಮೊದಲು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಇದ್ದದ್ದು ನಿಜ. ಆದರೆ ಅದನ್ನು ನಾವು ಸರಿಪಡಿಸಿದೆವು. ರಾಜ್ಯದಲ್ಲಿ ೨೧ ಕ್ಷೆÃತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಜೆಡಿಎಸ್ ದವರಿಗೆ ೭ ಕ್ಷೆÃತ್ರಗಳಿಗೆ ಕಾಂಗ್ರೆಸ್‌ನಿಂದ ಬೆಂಬಲ ನೀಡಬೇಕು ಎಂಬ ಪಕ್ಷದ ಹೈಕಮಾಂಡ ತೀರ್ಮಾನದಂತೆ ನಮ್ಮ ಕ್ಷೆÃತ್ರದಲ್ಲಿ ಮೈತ್ರಿ ಧರ್ಮದಂತೆ ನಾವುಗಳು ಜೆಡಿಎಸ್‌ಗೆ ಬೆಂಬಲ ನೀಡಿ ಪ್ರಚಾರ ಕಾರ್ಯ ಮಾಡಿರುವೆವು. ನಮ್ಮ ಸಂಚಾರ ಹಾಗೂ ಪ್ರಚಾರದ ಅವಧಿಯಲ್ಲಿ ಮತದಾರರಿಂದ ಬಂದ ಒಲವು ನೋಡಿ ನಮ್ಮ ಬೆಂಬಲಿತ ಅಭ್ಯರ್ಥಿ ಆನಂದ ಅಸ್ನೊÃಟಿಕರ ಅವರ ಗೆಲುವು ನಿಶ್ಚಿತ ಎಂಬ ವಿಶ್ವಾಸವಿದೆ ಎಂದರು. ಘೋಟ್ನೆÃಕರ ಅವರು ತಮ್ಮ ಪತ್ನಿ, ಸೊಸೆ, ಮಗಳ ಜೊತೆಗೂಡಿ ಮತ ಚಲಾವಣೆ ಮಾಡಿದರು.

loading...