ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಶಿಕ್ಷಣ

0
24

ಕನ್ನಡಮ್ಮ ಸುದ್ದಿ, ಧಾರವಾಡ – ಯೋಗ ಸ್ಪರ್ಶ ಪ್ರತಿಷ್ಟಾನ, ಶ್ರಿÃ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ಜೀವನ ದರ್ಶನ ವಲಯ ಮಟ್ಟದ ಮಕ್ಕಳ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ ಜರುಗಿತು.
ಶಿಬಿರ ಮುಖ್ಯ ಸಂಚಾಲಕ ಪ್ರಶನ್ನ ದೀಕ್ಷಿತ ಮಾತನಾಡಿ, ಸಂಸ್ಕಾರ, ಸಂಘಟನೆ, ಸೇವೆ ಎಂಬ ಉದ್ಧೆÃಶಗಳನ್ನು ಇಟ್ಟುಕೊಂಡು ಮಕ್ಕಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೇಗೆ ಸದೃಡವಾಗಿ ಕಾಪಾಡಿಕೊಳ್ಳಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಡುವುದು. ಸ್ವಸ್ಥ ಸಮಾಜ ನಿರ್ಮಾಣ ಮಾಡುವುದು. ಬಲಿಷ್ಠ ಭಾರತ ನಿರ್ಮಾಣಕ್ಕೆ ಒಳ್ಳೆಯ ನಾಗರಿಕರನ್ನು ತಯಾರಿಗೋಳಿಸುವುದು. ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಶಿಕ್ಷಣವನ್ನು ಶಿಬಿರದಲ್ಲಿ ನೀಡಲಾಗುತ್ತದೆ ಎಂದರು. ಶಾಂತಿಲಾಲ ಪಟೇಲ, ಮಹಾದೇವ ಹೊಳೆಯಣ್ಣವರ, ಪ್ರಕಾಶ ಬೆಂಡಿಗೇರಿ, ಶಂಕರಣ್ಣ ಕಾಕಿ, ವಿಜಯ ಕುಲಕರ್ಣಿ, ಸುರೇಶ ಹೊರಕೇರಿ, ದಯಾನಂದ ಮಗಜಿಕೊಂಡಿ, ರವಿ ಉಮರಾಣಿ, ಪ್ರಿÃಯಾ ದೀಕ್ಷಿತ, ಬಿ.ಎಸ್.ಬಿರಾದಾರ, ನಾಗರಾಜ ನಾಗರಹಳ್ಳಿ, ಕೈಲಾಸ ಹಿರೇಮಠ, ಅಮರಾವತಿ ಗಾಣಗಿ, ಮಂಜುನಾಥ ಬಳಗಾನೂರ, ಅಕ್ಕಮಹಾದೇವಿ ಗಣಾಚಾರಿ ಇದ್ದರು.
ಭೂಮಿಕಾ, ಮೇಘನಾ ಪ್ರಾರ್ಥಿಸಿದರು. ಗಾಯತ್ರಿ ಸ್ವಾಗತಿಸಿದರು. ಸ್ನೆÃಹಾ ಕಟ್ಟಿಮನಿ ನಿರೂಪಿಸಿದರು. ಪ್ರಾರ್ಥನಾ ದೀಕ್ಷಿತ ವಂದಿಸಿದರು.

loading...