ಮಕ್ಕಳ ಕಲಿಕೆಗೆ ಬೇಸಿಗೆ ಶಿಬಿರ ಸಹಕಾರಿ

0
38

ನರಗುಂದ: ಬೇಸಿಗೆ ದಿನಗಳಲ್ಲಿ ಸರ್ಕಾರ ನಿಯೋಜಸಿದಂತೆ ರಾಜ್ಯದ ಪ್ರತಿ ಶಾಲೆಗಳಲ್ಲಿ ೧೫೦ ಕ್ಕಿಂತಲೂ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಬೇಸಿಗೆ ಶಿಬಿರವನ್ನು ಸ್ವಲ್ಪ ಓದು ಸ್ವಲ್ಪ ಮೋಜು ಯೋಜನೆಯಡಿ ಜಾರಿಗೆ ತಂದಿದೆ. ಈ ಶಿಬಿರ ಒಟ್ಟು ಐದು ವಾರಗಳ ಕಾಲ ಆಯ್ಕ ಶಾಲೆಗಳಲ್ಲಿ ಎ.೨೪ ರಂದು ಜಾರಿಗೆ ತರಲಾಗಿದ್ದು ಇದರ ಪ್ರಯೋಜನ ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದರು.
ಪಟ್ಟಣದ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಸರ್ಕಾರ ನಿಯೋಜಿಸಿದ್ದ ಸ್ವಲ್ಪ ಓದು ಸ್ವಲ್ಪ ಮೋಜಿ ವಿಶೇಷ ಬೇಸಿಗೆ ಶಿಬಿರವನ್ನು ಎ. ೨೪ ರಂದು ಶಾಲಾ ಮಕ್ಕಳಿಂದಲೇ ಉದ್ಘಾಟಿಸಿದ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಇಒ ಎನ್.ಜೆ. ಗುರುಪ್ರಸಾದ ಅವರು, ತಾಲೂಕಿನಲ್ಲಿ ೧೫೦ ಕ್ಕಿಂತ ಹೆಚ್ಚು ಮಕ್ಕಳಿರುವ ಒಟ್ಟು ೨೧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಯ್ಕೆಮಾಡಿಕೊಳ್ಳಲಾಗಿದ್ದು. ಎ.೨೪ ರಿಂದ ಐದು ವಾರಗಳ ಕಾಲ ಅಂತಹ ಶಾಲೆಯಲ್ಲಿ ನಿತ್ಯ ಶಾಲಾ ಮುಖ್ಯೊÃಪಾಧ್ಯಾಯರು ಹಾಗೂ ಓರ್ವ ಸಹಾಯಕ ಶಿಕ್ಷಕರು ಕೆಲಸ ನಿರ್ವಹಿಸುವುದು ಕಡ್ಡಾಯವಾಗಿದೆ. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ಕ್ರಿÃಡಾ ಚಟುವಟಿಕೆ ಮತ್ತು ಚಿತ್ರಕಲೆ ಹಾಗೂ ಇತರ ಕ್ಲಿಷ್ಟಕರ ವಿಷಯಗಳ ಕುರಿತು ಪಠ್ಯ ಬೋಧನೆ ಮಾಡುವುದು ಮತ್ತು ಮಕ್ಕಳಿಗೆ ಬಿಸಿಯೋಟ ನೀಡುವ ಕಾರ್ಯವನ್ನು ಶಿಬಿರದಲ್ಲಿ ನಡೆಸಲಾಗುವುದು. ಈ ಅವಧಿಯಲ್ಲಿ ಸೇವೆ ಸಲ್ಲಿಸಿದ ಮ್ಯಖ್ಯೊÃಪಾಧ್ಯಾಯರಿಗೆ ಹಾಗೂ ಸಹ ಶಿಕ್ಷಕರಿಗೆ ಗಳಿಕೆ ರಜೆಯಂತಹ ಸೌಲಭ್ಯ ನೀಡಲಾಗುತ್ತಿದೆ.
ಚಾಚೂ ತಪ್ಪದೇ ಈ ಶಿಬಿರವನ್ನು ಮುನ್ನಡೆಸಲು ಶಿಕ್ಷಕರು ಪರಿಪಾಲಿಸಬೇಕೆಂದು ಸೂಚಿಸಿದರು. ೬ ಮತ್ತು ೭ ತರಗತಿ ಮಕ್ಕಳಿಗೆ ಮಾತ್ರ ಈ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು. ಶಿಕ್ಷಕ ಪ್ರಮೋಧ ಜಾಧವ ಮಾತನಾಡಿದರು. ಡಿ.ಐ ಕಡ್ಡೆÃಗಾರ, ಎಚ್.ವ್ಹಿ. ಕಣವಿ ನಿರ್ವಹಿಸಿದರು.

loading...