ವಿಕಲಚೇತನ ಮತದಾರರಿಂದ ಶೇ.೯೫.೯೨ ರಷ್ಟು ಮತದಾನ

0
20

ಗದಗ: ಹಾವೇರಿ ಮತ್ತು ಬಾಗಲಕೋಟ ಲೋಕಸಭಾ ವ್ಯಾಪ್ತಿಯೊಳಗೆ ಇರುವ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೆÃತ್ರಗಳಲ್ಲಿ ವಿಕಲಚೇತನ ಮತದಾರರಿಂದ ಈ ಬಾರಿಯ ಲೋಕಸಭೆ ಚುನಾವಣೆಗೆ ಸರಾಸರಿ ಶೇ. ೯೫.೯೨ ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು ೧೨,೧೬೮ ವಿಕಲಚೇತನ ಮತದಾರರಲ್ಲಿ ೭,೨೫೬ ಪುರಷ ಮತದಾರರು ೪,೪೧೬ ಮಹಿಳಾ ಮತದಾರರು ಒಟ್ಟು ೧೧೬೭೨ ವಿಕಲಚೇತನ ಮತದಾರರು ಮತ ಚಲಾಯಿಸಿರುತ್ತಾರೆ. ಹಾವೇರಿ ಲೋಕಸಭಾ ವ್ಯಾಪ್ತಿಯ ಶಿರಹಟ್ಟಿ ವಿಧಾನ ಸಭಾ ಕ್ಷೆÃತ್ರದ ೧೬೬೦ ಪುರುಷ ವಿಕಲಚೇತನ ಮತದಾರರ ಪೈಕಿ ೧೫೯೫, ೧೦೦೫ ಮಹಿಳಾ ವಿಕಲಚೇತನರ ಪೈಕಿ ೧೦೭೦ ಮತದಾರರು ಹೀಗೆ ಒಟ್ಟು ೨೬೬೫ಮತ ಚಲಾವಣೆಗೊಂಡಿವೆ. ಗದಗ ಕ್ಷೆÃತ್ರದ ೧೧೨೨ ಪುರುಷ ವಿಕಲಚೇತನ ಮತದಾರರ ಪೈಕಿ ೧೧೧೧, ೭೧೭ ಮಹಿಳಾ ವಿಕಲಚೇತನ ಮತದಾರರ ಪೈಕಿ ೬೮೩ ಹೀಗೆ ಒಟ್ಟು ೧೭೯೪ ಮತ ಚಲಾವಣೆಗೊಂಡಿವೆ. ರೋಣ ಕ್ಷೆÃತ್ರದ ೨೬೭೮ ಪುರಷ ವಿಕಲಚೇತನ ಮತದಾರರ ಪೈಕಿ೨೪೭೧, ೧೬೩೦ ಮಹಿಳಾ ವಿಕಲಚೇತನ ಮತದಾರರ ಪೈಕಿ ೧೩೮೬ ಹೀಗೆ ಒಟ್ಟು ೩೮೫೭ ಮತ ಚಲಾವಣೆಗೊಂಡಿವೆ. ನರಗುಂದ ಕ್ಷೆತ್ರದ ೨೧೦೨ ಪುರುಷ ವಿಕಲಚೇತನ ಮತದಾರರ ಪೈಕಿ ೨೦೭೯, ೧೨೫೪ ಮಹಿಳಾ ವಿಕಲಚೇತನ ಮತದಾರರ ಪೈಕಿ ೧೨೭೭ ಹೀಗೆ ಒಟ್ಟು ೩೩೫೬ ಮತ ಚಲಾವಣೆಗೊಂಡಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಗದಗ ಜಿಲ್ಲೆಯಲ್ಲಿ ವಿಕಲಚೇತನ ಮತದಾರರಿಗೆ ಅನುಕೂಲವಾಗುವಂತೆ ಎಲ್ಲ ಮತಗಟ್ಟೆಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ವ್ಹಿÃಲ್ ಚೇರ, ಭೂತಗನ್ನಡಿ ಹಾಗೂ ಮತ ಸಹಾಯಕರ ಸೌಲಭ್ಯ ಕಲ್ಪಿಸಲಾಗಿತ್ತು.

loading...