ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ 28ರಂದು ಮಾರ್ಗದರ್ಶನ ಶಿಬಿರ

0
37

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ 28ರಂದು ಮಾರ್ಗದರ್ಶನ ಶಿಬಿರ

ಕನ್ನಡಮ್ಮ ಸುದ್ದಿ- ಬೆಳಗಾವಿ : ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಮುಂದಿನ ಅಧ್ಯಯನ ಮಾರ್ಗ ಆಯ್ದುಕೊಳುವಲ್ಲಿ ಪಾಲಕರು ,ಮಕ್ಕಳಿಗಳು ಗೊಂದಲಕ್ಕೆ ಒಳಗಾಗಿರುತ್ತಾರೆ ಆದ್ದರಿಂದ ಗೊಂದಲ‌ ನಿವಾರಣೆಗೋಸ್ಕರ ಇದೆ.28ರಂದು ಉದಯ ಪಿಯು ಸಂಯೋಜಿತ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಚಾರ್ಯರಾದ ಮಯೂರ ಬರಗಾಲೆ ತಿಳಿಸಿದ್ದಾರೆ.

ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿದ್ದ ಸುದ್ದಿಗೋಷಿಯಲ್ಲಿ ಮಾತನಾಡಿ, ಇತ್ತಿಚಿನ ದಿನಗಳ ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಮುಂದೆನು ಎಂಬ ಪ್ರಶ್ನೆ ಗೊಂದಲ ಪಾಲಕರು ಹಾಗೂ ವಿದ್ಯಾರ್ಥಿ ಗಳಲ್ಲಿ ಸಹಜವಾಗಿರುತ್ತದೆ. ಆದ್ದರಿಂದ ವಿಜ್ಞಾನ ಹಾಗೂ ವೈದ್ಯಕೀಯ ರಂಗದಲ್ಲಿ ಪರಿಣಿತಿ ಪಡೆದ ಮೂರು ಜನ ಅತೀಥಿಗಳನ್ನು ಕರೆಸಿ ಮಾರ್ಗದರ್ಶನ ಮಾಡಿಸಲಾಗುತ್ತದೆ. ಇಲ್ಲಿ ಮಾರ್ಗದರ್ಶನ ಸಂಪೂರ್ಣ ಉಚಿತ ವಾಗಿರುತ್ತದೆ.

ಉಪನ್ಯಾಸಕರಾಗಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಗೈದ ಬೆಳಗಾವಿ ದೀಪಕ ಧಡೋತಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಗೈದ ಹೃದಯ ತಜ್ಞ ಆದರ್ಶಕುಮಾರ ಬೆಲ್ಲದ,ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಂಕರಾನಂದ ಬನಶಂಕರಿ ಆಗಮಿಸಲಿದ್ದಾರೆ. ಬೆಳಿಗ್ಗೆ 10.30 ರಿಂದ ಪ್ರಾರಂಭವಾಗಲಿದೆ ಎಂದರು.

loading...