ಗುಣಮಟ್ಟದ ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗು ದೊರೆಯುತ್ತಿಲ್ಲ : ವೆಂಕಯ್ಯ ನಾಯ್ಡು ವಿಷಾದ

0
19

ಗುಣಮಟ್ಟದ ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗು ದೊರೆಯುತ್ತಿಲ್ಲ : ವೆಂಕಯ್ಯ ನಾಯ್ಡು ವಿಷಾದ
ಕನ್ನಡಮ್ಮ ಸುದ್ದಿ- ಬೆಳಗಾವಿ :
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಾಂತ್ರಿಕತೆ ಅಳವಡಿಕೆ ಆದರೂ ದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗೂ ಸಿಗುತ್ತಿಲ್ಲಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಷಾದ ವ್ಯಕ್ತ ಪಡಿಸಿದರು.

ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ವಿಭಾಗದ 9 ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪದಕ ಪ್ರದಾನ ಮಾತನಾಡಿದ ಬಳಿಕ‌ ಕನ್ನಡದಲ್ಲಿ‌ಭಾಷಣ ಆರಂಭ ಮಾಡಿದ ಅವರು, ವೈದ್ಯಕೀಯ ವೆಚ್ಚ ದುಬಾರಿಯಾಗಿರುವ ಕಾರಣ ಹಲವು ಜನರು ಗುಣಮಟ್ಟದ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಗುಣಮಟ್ಟದ ವೈದ್ಯಕೀಯ ಸೌಲಭ್ಯ ದೇಶದ ಪ್ರತಿ ಪ್ರಜೆಗೂ ದೊರೆಯುವಂತಾಗಬೇಕು. ಖಾಸಗಿ ವೈದ್ಯಕೀಯ ಸಂಸ್ಥೆಗಳು ಇದಕ್ಕಾಗಿ ಸರ್ಕಾರದ ‌ಜತೆಗೆ ಕೈಜೋಡಿಸಿ ಎಲ್ಲ ವರ್ಗದವರಿಗೆ ಗುಣಮಟ್ಟದ ಸೇವೆ ದೊರಕಿಸಿ ಕೊಡಬೇಕು. ಯುವ ವೈದ್ಯಕೀಯ ಪಧವೀದರರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ದೊರಕಿಸಿಕೊಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು‌ ಮನವಿ ಮಾಡಿಕೊಂಡರು.

ವೈದ್ಯಕೀಯ ಪದವಿ ಬಳಿಕ ಕಡ್ಡಾಯವಾಗಿ ಮೂರು ವರ್ಷ ಗ್ರಾಮೀಣ ‌ಭಾಗದಲ್ಲಿ ಸೇವೆ ಸಲ್ಲಿಸಬೇಕು. ಎಲ್ಲರಿಗೂ ಗುಣಮಟ್ಟದ ಸೇವೆ ಸಿಗಬೇಕಾದರೆ ಮೂರು ವರ್ಷ ಗ್ರಾಮೀಣ ಭಾಗದಲ್ಲಿ ‌ಯುವ ವೈದ್ಯರ ಕಡ್ಡಾಯ ಸೇವೆ ಅಗತ್ಯವಾಗಿದೆ. ಯೋಜನೆಗಳು ಗ್ರಾಮಿಣ ಭಾಗದಲ್ಲಿ ಜಾರಿಗೆ ಬರಬೇಕು
.ಅಂದಾಗ ಮಾತ್ರ ಗ್ರಾಮೀಣ ಭಾಗದಲ್ಲಿ ಹೆಚ್ಚಿರುವ ಬಡವರಿಗೆ ಮುಂದುವರೆದ ಆರೋಗ್ಯ ‌ಸೇವೆ ದೊರೆಯಲು ಸಾಧ್ಯವೆಂದರು.

ಅಲ್ಲದೆ ಇತ್ತಿಚಿನ ದಿನಗಳಲ್ಲಿ ಯುವಕರು ಬದಲಾದ ಜೀವನ ಶೈಲಿಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಿಂದಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕು ಕಿವಿ ಮಾತು ಹೇಳುದರು.

ಈ ಸಂದರ್ಭದಲ್ಲಿ ವಿವಿ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಸೇರಿದಂತೆ ಗಣ್ಯರು ಹಾಜರಿದ್ದರು.

loading...