ಬಿಜೆಪಿಗೆ ಜನಬೆಂಬಲ ಕೊಪ್ಪಳ ಕ್ಷೆÃತ್ರದಲ್ಲಿ ಜಯದ ವಿಶ್ವಾಸ ಖಚಿತ..!

0
77

ಕನ್ನಡಮ್ಮ ಸುದ್ದಿ-ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೆÃತ್ರದಲ್ಲಿ ಬಿಜೆಪಿಗೆ ಹೆಚ್ಚು ಜನಬೆಂಬಲ ಸಿಕ್ಕಿದ್ದು, ಅಭ್ಯರ್ಥಿ ಸಂಗಣ್ಣ ಕರಡಿ ಅವರು ಅಧಿಕ ಮತಗಳ ಅಂತರದಿಂದ ವಿಜಯಶಾಲಿಯಾಗಲಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದರು.
ಗುರುವಾರದಂದು ಮಸಬಹಂಚಿನಾಳ ಗ್ರಾಮದ ಶಾಸಕರ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಜನ ನಮ್ಮೊಂದಿಗೆ ಇದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು, ಬಿಜೆಪಿ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇದೆ, ಇಲ್ಲಿಯೂ ನಮ್ಮ ಪಕ್ಷವೇ ಜಯಗಳಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಹಿಂದುಳಿದ ಕೊಪ್ಪಳ ಜಿಲ್ಲೆ ಮತ್ತು ಲೋಕಸಭಾ ಕ್ಷೆÃತ್ರದಲ್ಲಿ ಕೇಂದ್ರದಿಂದ ಸಾಧ್ಯವಿರುವ ಯೋಜನೆಗಳ ಅನುದಾನದಿಂದ ಹಲವು ಕಾಮಗಾರಿಗಳನ್ನು ಸಂಸದ ಸಂಗಣ್ಣ ಕರಡಿ ಅವರು ಅನುಷ್ಠಾನಕ್ಕೆ ತಂದಿದ್ದಾರೆ, ರೈಲ್ವೆ, ರಾಷ್ಟಿçÃಯ ಹೆದ್ದಾರಿ, ನೀರಾವರಿ, ಶಿಕ್ಷಣ, ಕೈಗಾರಿಕೆ ಇತರೆ ವಲಯಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೋಸ್ಕರ ಕ್ಷೆÃತ್ರದಲ್ಲಿ ಸಂಗಣ್ಣ ಕರಡಿ ಅವರನ್ನು ಬೆಂಬಲಿಸಿ ಜನ ಮತ ನೀಡಿರುವರು, ಅವರ ಗೆಲುವು ಖಚಿತವೆಂದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀರಾವರಿ ಕನಸು ನನಸು: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಬರಲಿದ್ದು, ಯಲಬುರ್ಗಾ ಕ್ಷೆÃತ್ರದಲ್ಲಿ ನೀರಾವರಿಯ ಕನಸು ನನಸಾಗಲಿದೆ, ಕೃಷ್ಣ ‘ಬಿ’ ಸ್ಕಿÃಮ್ ಯೋಜನೆಗೆ ಬೇಕಾದ ಅನುದಾನ ಸಿಗಲಿದ್ದು, ಆವಾಗ ನೋಡಿ ಮಾತಿನಂತೆ ನೀರಾವರಿ ಯೋಜನೆ ಸಾಕಾರಗೊಳ್ಳುವುದೆಂದರು. ಕೃಷ್ಣ ಬಿ ಸ್ಕಿÃಮ್ ಯೋಜನೆಯ ಕೊಪ್ಪಳ ಏತನೀರಾವರಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಹಣವನ್ನೆÃ ನೀಡಲಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ಅನುದಾನದಲ್ಲಿ ಒಂದು ಮತ್ತು ಎರಡನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮೂರನೇ ಹಂತದ ಕಾಮಗಾರಿಗಳಿಗೆ ಬೇಕಾದ ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ನಿಯಮ ೬೯ರ ಮೇರೆಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ರ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಸಂಬಂಧವಾಗಿ ಒತ್ತಾಯಿಸಲಾಗಿದೆ, ಈ ಸಾಲಿನ ಬಜೆಟ್‌ನಲ್ಲಿ ರೂ.೨೧೦ ಕೋಟಿ ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು.
ನನ್ನದು ಮೊದಲ ಆದ್ಯತೆ ಈ ಕ್ಷೆÃತ್ರಕ್ಕೆ ನೀರಾವರಿ, ಮತ್ತು ನೀರಿಗಾಗಿ, ಅನುಷ್ಠಾನದಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಕೆರೆಗಳ ಜೀರ್ಣೊದ್ದಾರ, ಕೆರಗಳಿಗೆ ನೀರು ತುಂಬಿಸುವುದು, ಚೆಕ್ ಡ್ಯಾಮ್ ಗಳ ನಿರ್ಮಾಣವೇ ಬಹು ಮುಖ್ಯವಾಗಿದ್ದು, ನನಗೆ ಯಾವುದೇ ಪ್ರಚಾರದ ಅವಶ್ಯಕತೆಯೂ ಬೇಕಾಗಿಲ್ಲ, ಕೆಲಸ ಮಾಡಿತೋರಿಸುವೆ ಎಂದು ತಿಳಿಸಿದರು.

loading...