ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಸಂಕಲ್ಪ

0
32

ದಾಂಡೇಲಿ : ಜೊಯಿಡಾ ತಾಲೂಕಿನ ಕುಂಬಾರವಾಡಾ ಬಳಿ ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಸಂಕಲ್ಪ ಮಾಡಲಾಗಿದ್ದು, ಶಿರಸಿಯ ಚಿಕಿತ್ಸಾ ಕೇಂದ್ರದ ಪರಿಣಿತ ವ್ಯೆದ್ಯರಾದ ವೆಂಕಟರಮಣ ಹೆಗಡೆಯವರ ಮಾರ್ಗದರ್ಶನದಲ್ಲಿ ಈ ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಯೋಜನೆ ಇದೆ ಎಂದು ಶ್ರಿÃಶೈಲದ ಜಗದ್ಗುರು ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ನುಡಿದರು.
ಅವರು ಇತ್ತಿÃಚೆಗೆ ಉಳವಿ ಚನ್ನ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಕಮೀಟಿಯ ವತಿಯಿಂದ ಏರ್ಪಡಿಸಲಾದ ಸಮಾರಂಭದಲ್ಲಿ ಸನ್ಮಾನ ಸ್ವಿÃಕರಿಸಿ ಮಾತನಾಡುತ್ತಾ ಉಳವಿ ಚೆನ್ನಬಸವೇಶ್ವರ ಬೇರೆಯಲ್ಲ ಕ್ಷೆÃತ್ರ ಶ್ರಿÃಶೈಲ ಮಲ್ಲಿಕಾರ್ಜುನ ಬೇರೆಯಲ್ಲವೆಂದು, ಉಳವಿಯ ಕ್ಷೆÃತ್ರದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಉಳವಿಯಲ್ಲಿ ದೇವÀಸ್ಥಾನಕ್ಕೆ ಪೂಜ್ಯ ಜಗದ್ಗುರುಗಳು ಆಗಮಿಸಿದಾಗ ಊರಿನ ನಾಗರಿಕರು ಮುತ್ತೆö್ಯದೆಯರು ಸ್ಥಳೀಯ ಭಕ್ತಾದಿಗಳು ಜಗದ್ಗುರುಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಉಳವಿಯ ದೇವಸ್ಥಾನದ ಮುಖ್ಯ ಅರ್ಚಕರಾದ ಶಂಕರಯ್ಯಾ ಶಾಸ್ರಿö್ತಗಳು ಅಂಬಿಕಾನಗರದ ಶಿವಾಚಾರ್ಯ ಸ್ವಾಮಿಜಿ, ಶಿರಸಿಯ ಡಾ ವೆಂಕಟರಮಣ ಹೆಗಡೆ,ಉಳವಿಯ ಎಮ್. ಸಿ. ಉಪ್ಪಿನಮಠ, ಕುಂಬಾರವಾಡಾದ ಚಂದ್ರಕಾಂತ ಬಂಗಾರಿ, ದಾಂಡೇಲಿಯ ಶಂಕರ ಜಡೆ ಹಿರೇಮಠ, ಗುರು ಶಾಂತ ಹಿರೇಮಠ ಉಪಸ್ಥಿತರಿದ್ದರು.

loading...