ಜೀವನದ ಯಶಸ್ಸಿಗೆ ಒಳ್ಳೆಯ ಆರೋಗ್ಯ ಅವಶ್ಯ: ಪ್ರಸಾದ

0
25

 

ಹಳಿಯಾಳ: ಕೆನರಾ ಬ್ಯಾಂಕ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಸಮುದಾಯದ ಸಹಭಾಗಿತ್ವದಲ್ಲಿ ಆದರ್ಶ ಗ್ರಾಮಗಳನ್ನಾಗಿ ಆಯ್ಕೆ ಮಾಡಿರುವ ದೊಡ್ಡಕೊಪ್ಪ ಹಾಗೂ ಬಂಟರಗಾಳಿ ಗ್ರಾಮಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ಲೋಕಾರ್ಪಣೆ ಮಾಡಲಾಯಿತು.
ಸ್ಥಳೀಯ ಸಕ್ಕರೆ ಕಾರ್ಖಾನೆ (ಈಐಡಿ ಪ್ಯಾರಿ ಇಂಡಿಯಾ ಲಿ.) ಈ ಉದ್ಯಮದವರ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಸಂಚಾರಿ ಉಚಿತ ಆರೋಗ್ಯ ವಾಹನ ಹಾಗೂ ಬ್ರಿಟಾನೀಯಾ ಕಂಪನಿ ಈ ಉದ್ಯಮದವರ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅಂದಾಜು ೨.೫೦ ಲಕ್ಷ ರೂ. ಮೊತ್ತದಲ್ಲಿ ೬೦ ಎಲ್‌ಇಡಿ ಬೀದಿ ದೀಪಗಳ ಲೋಕಾರ್ಪಣೆಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ಕಾರ್ಯಕಾರಣಿ ಮಂಡಳಿಯ ಅಧ್ಯಕ್ಷ ಪ್ರಸಾದ ಆರ್ ದೇಶಪಾಂಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರ ಜೀವನದ ಯಶಸ್ಸಿಗೆ ಒಳ್ಳೆಯ ಆರೋಗ್ಯ ಅವಶ್ಯವಾಗಿದೆ. ಪ್ರತಿ ಕುಟುಂಬ ಸುದಾರಿಸಬೇಕಾದರೆ ಆ ಕುಟುಂಬದ ಪ್ರತಿ ಸದಸ್ಯರು ಆರೋಗ್ಯವಂತರಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯು ಸ್ವಚ್ಛತೆಗೆ ಪ್ರಾಮುಖ್ಯವನ್ನು ನೀಡಿ ಆರೋಗ್ಯವಂತರಾಗಿ ಬಾಳಬೇಕು ಎಂದು ಹೇಳಿದರು.
ತಮ್ಮ ಸಂಸ್ಥೆಯು ವಿವಿಧ ಇಲಾಖೆ ಹಾಗೂ ಕಂಪನಿಗಳ ಸಹಯೋಗದಲ್ಲಿ ದೊಡ್ಡಕೊಪ್ಪ ಹಾಗೂ ಬಂಟರಗಾಳಿ ಗ್ರಾಮಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರ್ಶ ಗ್ರಾಮವಾಗಲು ಸರ್ವರ ಸಹಕಾರ ಅಗತ್ಯ ಎಂದರು.

ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಜೆ. ವೆಂಕಟರಾವ್ ಮಾತನಾಡಿ ಈಐಡಿ ಪ್ಯಾರಿ (ಇಂಡಿಯಾ) ಹಾಗೂ ವಕಾರ್ಡ ಸಂಸ್ಥೆಯ ಸಹಯೋಗದಲ್ಲಿ ಹಳಿಯಾಳ ತಾಲೂಕಿನ ದೊಡ್ಡಕೊಪ್ಪ ಮತ್ತು ಬಂಟರಗಾಳಿ ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ಸಂಚಾರಿ ಆರೋಗ್ಯ ವಾಹಿನಿಯನ್ನು ಆರಂಭಿಸಿದ್ದೆÃವೆ. ಇದರಿಂದ ಆರೋಗ್ಯ ಸೇವೆಯಿಂದ ವಂಚಿತರಾದ ಸಮುದಾಯಕ್ಕೆ ಆರೋಗ್ಯ ಸೇವೆ ನೀಡಿದಂತಾಗುತ್ತದೆ ಮತ್ತು ಎಲ್ಲರೂ ಆರೋಗ್ಯದಿಂದ ಬಾಳ ಸಾಧ್ಯ ಎಂದು ಹೇಳಿದರು.
ಕಾರ್ಖಾನೆಯ ಜನರಲ್ ಮ್ಯಾನೇಜರ್ ರವೀಂದ್ರ ಮಾತನಾಡಿ ಕಾರ್ಖಾನೆ ಕೇವಲ ಆದಾಯ ಮಾಡುವ ವೃತ್ತಿಗೆ ಸೀಮಿತವಾಗದೇ ರೈತರ ಮತ್ತು ಸಮುದಾಯಕ್ಕೆ ಸಹಾಯವಾಗಬಲ್ಲ ಕಾರ್ಯಗಳು ಸಹ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಸದಸ್ಯೆ ಲಕ್ಷಿö್ಮ ಕೊರ್ವೇಕರ, ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಾದೇವ ಪವಾರ, ರಾಜಕೀಯ ಧುರೀಣ ಸುಭಾಸ ಕೊರ್ವೇಕರ, ವಿಆರ್‌ಡಿಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ದೊಡ್ಡಕೊಪ್ಪ ಗ್ರಾಮದ ಹಿರಿಯರಾದ ವಿಠ್ಠಲ ಚೊರಲೇಕರ್, ಸಂಚಾರಿ ಆರೋಗ್ಯ ವಾಹಿನಿಯ ವೈದ್ಯ ಡಾ. ಲಕ್ಷö್ಮಣ, ಸಂಸ್ಥೆಯ ಯೋಜನಾಧಿಕಾರಿ ವಿನಾಯಕ ಚವ್ಹಾಣ, ಎಸ್.ಡಿ.ಎಮ್.ಸಿ ಅಧ್ಯಕ್ಷ ಬ್ರಹ್ಮಾ ಧಾರವಾಡಕರ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕ್ಷೆÃತ್ರ ಮೆಲ್ವಿÃಚಾರಕ ಉಳವಯ್ಯಾ ಬೆಂಡಿಗೇರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಪರೀಟ ವಂದಿಸಿದರು.

loading...