ವಿಜೃಂಭಣೆಯಿಂದ ಜರಗಿದ ಗ್ರಾಮದೇವತೆ ಉತ್ಸವ

0
45

ಯಲಬುರ್ಗಾ: ಇಲ್ಲಿಯ ಗ್ರಾಮ ದೇವತೆಯಾದ ದ್ಯಾಮಮ್ಮ ದೇವಿಯ ಉತ್ಸವ ವೈಭವದಿಂದ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ದ್ಯಾಮಮ್ಮ ದೇವಿಯ ಉತ್ಸವವು ಶುಕ್ರವಾರ ಬೆಳಿಗ್ಗೆ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ವಾಧ್ಯ ಮೇಳದೊಂದಿಗೆ ಇಲ್ಲಿಯ ಐತಿಹಾಸಿಕ ಕೊಂಡದಭಾವಿಗೆ ತೆರಳಿ ಉಡಿ ತುಂಬುವ ನಡೆಯಿತು.
ಅಲ್ಲಿಂದ ಬಳಿಗೇರ ಮನೆಗೆ ಮತ್ತು ಹೂಗಾರ ಮನೆಗೆ ಹಾಗೂ ಶಾನಭೋಗದವರ ಮನೆಗೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಪಟ್ಟಣದ ಪ್ರಮುಖ ಓಣಿಗಳಲ್ಲಿ ತೆರಳಿತು. ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ದ್ಯಾಮಮ್ಮದೇವಿ ಉತ್ಸವ ಒಟ್ಟು ಐದು ದಿನಗಳ ಕಾಲ ಏ.೩೦ರ ವರಗೆ ವಿಜೃಂಭಣೆಯಿಂದ ನಡೆಯಲಿದೆ.ನಂತರ ಮೇ.೧ ರಂದು ನಗರದ ಸಿಮಾಂತರದುದ್ದಕ್ಕೂ ಹಾಲೆರೆಯುವ ಕಾರ್ಯಕ್ರಮ ನಡೆಯಲಿದೆ. ಈ ಗ್ರಾಮದೇವತೆ ದ್ಯಾಮಮ್ಮದೇವಿ ಉತ್ಸವ ಸಂದರ್ಭದಲ್ಲಿ ಗುರು ಹಿರಿಯರು ಭಾಗವಹಿಸಿದ್ದರು.

loading...