ಶ್ರಿÃಶಾರದಾಂಬಾ ದೇವಸ್ಥಾನ, ಶ್ರಿÃಹನುಮಂತ ದೇವಸ್ಥಾನದ ವರ್ಧಂತಿ ಉತ್ಸವ

0
25

 

ಯಲ್ಲಾಪುರ: ಯಲ್ಲಾಪುರದ ಶಾರದಾಂಬಾ ಸನ್ನಿಧಾನದಲ್ಲಿ ಅನೇಕ ಇತಿಹಾಸಗಳನ್ನೆÃ ನಿರ್ಮಿಸಲಾಗುತ್ತಿದೆ. ಇದಿಂದು ಶ್ರಿÃಶಂಕರ ಮಠವಾಗಿ ಪರಿವರ್ತನೆಗೊಂಡಿದೆ. ಇದೆಲ್ಲದಕ್ಕೂ ಸುತ್ತಲಿನ ಸುಸಂಸ್ಕೃತ ಸಮಾಜವೇ ಕಾರಣವೆಂದು ಸೋಂದಾ ಸ್ವರ್ಣವಲ್ಲಿÃ ಮಠಾಧೀಶ ಶ್ರಿÃಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ಶುಕ್ರವಾರ ಪಟ್ಟಣದ ನಾಯಕನಕೆರೆಯ ಶ್ರಿÃಶಾರದಾಂಬಾ ದೇವಸ್ಥಾನ ಮತ್ತು ಶ್ರಿÃಹನುಮಂತ ದೇವಸ್ಥಾನದ ೨ ದಿನಗಳ ಕಾಲದ ವರ್ಧಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು.

ನಾವು ಯಾವುದೇ ಪೂಜೆ-ಆರಾಧನೆ ಮಾಡುವಾಗ ಶ್ರದ್ಧೆ-ನಿಷ್ಠೆಯಿದ್ದರೆ ಅದು ಫಲ ನೀಡುತ್ತದೆ ಎಂದ ಶ್ರಿÃಗಳು, ವರ್ಧಂತಿ ಎಂದರೆ ಬೆಳವಣಿಗೆ ಅಂತ. ಈ ಪ್ರದೇಶ ಕ್ಷಿಪ್ರಗತಿಯ ಬೆಳವಣಿಗೆ ಹೊಂದುತ್ತಿದೆ. ಇಲ್ಲಿ ಸಂಸ್ಕೃತ, ವೇದ ಅಧ್ಯಯನ ಶಾಲೆ ನಡೆಯುತ್ತಿದೆ. ಇದು ಕೂಡ ಸಮಾಜದ ಒಳಿತಿಗೆ ಪೂರಕವಾಗಿದೆ. ಇಂದು ಶುಕ್ರವಾರ ನಾವು ಕೂಡ ಭಗವತಿಯ ಆರಾಧನೆ ಮಾಡಿದ್ದೆÃವೆ. ಅಲ್ಲದೇ ದೇವಸ್ಥಾನದಲ್ಲಿ ಚಂಡಿಕಾಯಾಗ ಕೂಡ ನಡೆದಿದೆ. ಇವೆರಡೂ ಶ್ರೆÃಷ್ಠವಾದುದು. ಭಗವತಿಯನ್ನು ಆರಾಧಿಸುವವರಿಗೆ ಭೋಗ, ಸ್ವರ್ಗ, ಮೋಕ್ಷ ಮೂರು ಕೂಡ ಲಭಿಸುತ್ತದೆ. ಭೋಗವೆಂದರೆ ಐಹಿಕದಲ್ಲಿ ಆರೋಗ್ಯ, ಸುಖ, ನೆಮ್ಮದಿ, ಅಭಿವೃದ್ಧಿ; ಸ್ವರ್ಗವೆಂದರೆ ನಮ್ಮ ಶರೀರ ಬಿದ್ದು ಹೋದ ಮೇಲೆ ದೊರೆಯುವುದು. ಆದರೆ ಅಪವರ್ಗವೆಂಬುದೇ ಮೋಕ್ಷ. ಅದು ಎಲ್ಲದಕ್ಕೂ ಮಿಗಿಲಾದುದು. ಅದು ಭಗವಂತನ ಸದಾ ಆರಾಧನೆಯಿಂದ ಮಾತ್ರ ಲಭಿಸಲು ಸಾಧ್ಯ. ಚಂಡಿ, ಪಾರಾಯಣ, ಆರಾಧನೆಯಿಂದ ಮೋಕ್ಷಗೊಳಿಸುವಲ್ಲಿ ಹೆಚ್ಚು ಕಾರಣವಾಗುತ್ತದೆ ಎಂದರು.
ಹುಟಕಮನೆಯ ಗಣಪತಿ ಸಭಾಹಿತ ಮತ್ತು ಗೋಪಾಲಕೃಷ್ಣ ಸಭಾಹಿತ ಚಂಡೀಹವನದ ಪ್ರಾಯೋಜಕರಾಗಿ ವೇ.ಮೂ|| ಗಣಪತಿ ಭಟ್ಟ ಕೋಲಿಬೇಣ ಅಧ್ವರ್ಯದಲ್ಲಿ ನಡೆಯಿತು. ನಗರಭಾಗಿ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ದಂಪತಿಗಳು ಶ್ರಿÃಗಳಿಗೆ ಫಲ ಸಮರ್ಪಿಸಿದರು. ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗೌ.ಕಾರ್ಯದರ್ಶಿ ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.

ಈ ಸಂದರ್ಭದಲ್ಲಿ ಕಳೆದ ಮಾರ್ಚ್ನಲ್ಲಿ ನಡೆದ ಗುರುಭವನದ ಸಮರ್ಪಣಾ ಕಾರ್ಯಕ್ರಮಕ್ಕೆ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ, ದಾನಿಗಳಿಗೆ ಶ್ರಿÃಗಳು ವಿಶೇಷ ಮಂತ್ರಾಕ್ಷತೆ ನೀಡಿದರು.

loading...