ನರೇಂದ್ರಾಚಾರ್ಯಜಿ ಮಹಾರಾಜರ ಪಾದುಕೆ ಪೂಜನ

0
24

ಹಳಿಯಾಳ: ತೇರಗಾಂವ ಗ್ರಾಮದಲ್ಲಿ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಅವರ ಪಾದುಕೆ ಪೂಜನ ಹಾಗೂ ಪ್ರವಚನ ಆಧ್ಯಾತ್ಮಿಕ ಕಾರ್ಯಕ್ರಮವು ಶನಿವಾರ ನೆರವೇರಿತು.
ಮಹಾರಾಷ್ಟçದ ರತ್ನಾಗಿರಿ ಜಿಲ್ಲೆಯ ನಾಣಿಜದಲ್ಲಿರುವ ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠದ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಅವರ ಭಕ್ತಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ತೇರಗಾಂವದಲ್ಲಿ ಶನಿವಾರ ಬೆಳಿಗ್ಗೆ ಶ್ರಿÃಗಳ ಪಾದುಕೆಗಳ ಪೂರ್ಣಕುಂಭ ಮೆರವಣಿಗೆ ನೆರವೇರಿತು. ಗುರುಪೂಜೆ ವಿಧಿ-ವಿಧಾನದ ನಂತರ ಸಾಮೂಹಿಕವಾಗಿ ಲೀಲಾಮೃತ ಗೃಂಥದ ಪಠಣೆ, ಆರತಿ ನಡೆಯಿತು.

ನಾಣಿಜ ಧಾಮದ ಪ್ರವಚನಕಾರರಾದ ಸಂತೋಷ ವಾರಸ್ಕರ ಅವರು ಪ್ರವಚನ ನೀಡಿದರು. ‘ನೀವು ಬಾಳಿರಿ, ಇತರರನ್ನು ಬಾಳಿಸಿರಿ’ ಎಂದು ಗುರುಗಳು ಸಂದೇಶ ನೀಡಿದ್ದಾರೆ. ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಲೌಕಿಕ ಜೀವನ ನಡೆಸುತ್ತಾ ಪಾರಮಾರ್ಥಿಕ ಸಾಧನೆ ಮಾಡಬೇಕಾಗಿದೆ. ಆಧ್ಯಾತ್ಮ ಮಾರ್ಗದಲ್ಲಿ ದೇವರನ್ನು ಅನುಭೂತಿ ಮಾಡಿಕೊಳ್ಳಲು ಗುರುವಿನ ಮಾರ್ಗದರ್ಶನ ಬೇಕೇ ಬೇಕಾಗಿದೆ. ಹೀಗಾಗಿ ಸರ್ವರೂ ಗುರುವಿನ ಕೃಪಾಶೀರ್ವಾದವನ್ನು ಪಡೆಯಲು ಪೂಜೆ, ಪುನಸ್ಕಾರ ಮೊದಲಾದ ಸಾಧನೆಗಳಲ್ಲಿ ತೊಡಗಬೇಕು ಎಂದರು.
ಪ್ರವಚನಕಾರರ ಉಪನ್ಯಾಸದ ನಂತರ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜ ಅವರ ಉಪದೇಶವನ್ನು ವೇದಿಕೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್‌ಇಡಿ ಪರದೆಯ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಲಾಯಿತು.

loading...