ಪ್ರಗತಿ ಪರ ಕೃಷಿಕ ಪ್ರಸಾದ ಹೆಗಡೆಗೆ ಪ್ರಶಸ್ತಿಯ ಗರಿ

0
30

 

ಕನ್ನಡಮ್ಮ ಸುದ್ದಿ-ಕಾರವಾರ: ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತೀಕ ಪ್ರತಿಷ್ಟಾನ ಹಾಗೂ ಆರ್ಯವೈಷ್ಯ ಮಹಿಳಾ ಮಂಡಳಗಳ ಒಕ್ಕೂಟ ನೀಡುವ ಭಾಗ್ಯವಂತ ಪ್ರಶಸ್ತಿ ಯಲ್ಲಾಪುರ ತಾಲೂಕಿನ ಕಾನಕೊಡ್ಲು ನಿವಾಸಿ, ಪ್ರಗತಿಪರ ಕೃಷಿಕ ಪ್ರಸಾದ ರಾಮಾ ಹೆಗಡೆ ಅವರಿಗೆ ಲಭಿಸಿದೆ. ಇವರೊಂದಿಗೆ ರಾಜ್ಯದ ೧೧ ರೈತರು ಹಾಗೂ ಓರ್ವ ವಿಜ್ಞಾನಿ ಪ್ರಶಸ್ತಿ ಸ್ವಿÃಕರಿಸಿದರು.
ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಞ ಚಿತ್ರದುರ್ಗದ ಡಾ ದೇವರಾಜ ರೆಡ್ಡಿ ಮಾತನಾಡಿ, ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಂಗುಗುಂಡಿಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ಪುನಶ್ಚೆÃತನ ಮಾಡಬೇಕಿದೆ ಎಂದರು. ಗಾಂಧಿಶಾಂತಿ ಪ್ರತಿಷ್ಟಾನದ ಅಧ್ಯಕ್ಷ ಡಾ. ವುಡೆ ಪಿ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರಾಮಶ್ರಿ ಸಮೂಹ ಸಂಸ್ಥೆ ಅಧ್ಯಕ್ಷ ಷಡಕ್ಷರಿ, ಸಮರ್ತ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಟಾನ ಅಧ್ಯಕ್ಷ ರಾ ವಿಜಯ ಸಮರ್ಥ ವೇದಿಕೆಯಲ್ಲಿದ್ದು ಮಾತನಾಡಿದರು. ಪ್ರಶಸ್ತಿ ಪಡೆದವರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದ ಭಾಗ್ಯವಂತ ಪ್ರಶಸ್ತಿ ಪುರಸ್ಕರತ ಕೃಷಿಕ ಪ್ರಸಾದ ರಾಮಾ ಹೆಗಡೆ, ಕೃಷಿ ವಲಯಕ್ಕೆ ಉತ್ತೆÃಜನ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

loading...