ಪ್ರಾಕೃತಿಕ ವಿಕೋಪದಿಂದ ಸಾವು ನೋವು

0
37

 

ಹಳಿಯಾಳ: ತಾಲೂಕಿನಾದ್ಯಂತ ಶನಿವಾರ ಪ್ರಾಕೃತಿಕ ವಿಕೋಪದಿಂದ ಹಲವಾರು ಘಟನೆಗಳು ನಡೆದಿವೆ. ಸಿಡಿಲಿನ ಆರ್ಭಟಕ್ಕೆ ರೈತನೋರ್ವ ಸಾವನ್ನಪ್ಪಿದ್ದು, ಎರಡು ಎತ್ತುಗಳು, ಜೋಡಿ ಕುರಿಗಳು ಹಾಗೂ ಎಮ್ಮೆಯೊಂದು ಸಾಶssಹೊಂದಿವೆ. ಮಾತ್ರವಲ್ಲದೇ ಮಾವು, ಬಾಳೆ ಮೊದಲಾದ ಫಸಲು ನೆಲಕಚ್ಚಿದೆ.
ಸಿಡಿಲಿನ ಕಾರಣ ಸಾವನ್ನಪ್ಪಿದ ನೀರಲಗಾ ಗ್ರಾಮದ ರೈತ ನರಸಪ್ಪಾ ಜೈವಂತ ಕದಂ (೬೦) ಇವರ ಮರಣೋತ್ತರ ಪರೀಕ್ಷೆಯು ನಡೆಯಿತು. ತಹಶೀಲ್ದಾರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತ ರೈತನ ಅಂತಿಮ ದರ್ಶನ ಪಡೆದು ಆತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಿಧನನಾದ ರೈತನ ಅವಲಂಬಿತರಿಗೆ ಪಾಕೃತಿಕ ವಿಕೋಪ ನಿಧಿಯಡಿ ೪ ಲಕ್ಷ ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಹೆಚ್ಚುವರಿಯಾಗಿ ೧ ಲಕ್ಷ ರೂ. ನೀಡಲಾಗುವುದು ಎಂದು ತಹಶೀಲ್ದಾರ ಶಿವಾನಂದ ಉಳ್ಳೆÃಗಡ್ಡಿ ತಿಳಿಸಿದ್ದಾರೆ.

ಹವಗಿ ಗ್ರಾಮದ ಸೋಮಯ್ಯಾ ಶಿವಪುತ್ರಯ್ಯಾ ಗುಡಿಯಾರ ಹಾಗೂ ಶೇಖನಕಟ್ಟಾ ಗ್ರಾಮದ ಶಂಕರ ಠಕ್ಕಪ್ಪಾ ಭಾಗವತಕರ ಇವರುಗಳ ಎತ್ತುಗಳು ಗದ್ದೆಯಲ್ಲಿ ಇದ್ದಾಗ ಸಿಡಿಲಿಗೆ ಮರಣವನ್ನಪ್ಪಿವೆ. ತತ್ವಣಗಿ ಗ್ರಾಮದ ಮಂಜುನಾಥ ಬೆಟದೋಳಕರ ಇವರ ಜೋಡಿ ಕುರಿಗಳು, ಮಾಗವಾಡ ಗ್ರಾಮದ ಸಮೀರಅಹ್ಮದ ಕುತ್ಬುದ್ದಿÃನ ಬಡೇಸಾಬನವರ ಇವರ ಎಮ್ಮೆ ಸಾವನ್ನಪ್ಪಿದೆ. ಹಳಿಯಾಳ ಪಟ್ಟಣದ ಅಂಚಿಗಿರುವ ಹುಲ್ಲಟ್ಟಿ ಪ್ರದೇಶದಲ್ಲಿ ಪಾರ್ವತಿ ನಾರಾಯಣ ದೇಸೂರಕರ ಇವರ ಗದ್ದೆಯಲ್ಲಿದ್ದ ಬಾಳೆಗಿಡಗಳು ಗಾಳಿಗೆ ತತ್ತರಿಸಿ ನೆಲಕ್ಕುರುಳಿವೆ. ತಾಲೂಕಿನಾದ್ಯಂತ ಹಲವಾರು ಕಡೆಗಳಲ್ಲಿ ಕಟಾವಿಗೆ ಬಂದಿದ್ದ ಮಾವಿನ ಫಸಲು ಗಾಳಿಯ ಹೊಡೆತಕ್ಕೆ ಮಣ್ಣು ಪಾಲಾಗಿವೆ. ಅನೇಕ ಕಡೆ ಮರಗಳ ಟೊಂಗೆಗಳು ಮುರಿದುಬಿದ್ದಿವೆ. ತೇರಗಾಂವ, ಅಡಿಕೆಹೊಸೂರ ಮೊದಲಾದ ಗ್ರಾಮಗಳಲ್ಲಿ ಹಲವಾರು ಮನೆಗಳ ಛಾವಣಿಗಳು ಹಾರಿಹೋಗಿದ್ದು ಒಟ್ಟಾರೆ ಲಕ್ಷಾಂತರ ರೂ. ನಷ್ಟವಾಗಿದೆ.
ಕಂದಾಯ ಇಲಾಖೆ ವತಿಯಿಂದ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ತೆರಳಿ ನಷ್ಟದ ಬಗ್ಗೆ ಪಂಚನಾಮೆ ಮಾಡುತ್ತಿದ್ದು ಸರಕಾರದ ನಿಯಮಾವಳಿಗಳ ಪ್ರಕಾರ ನಷ್ಟ ಪರಿಹಾರವನ್ನು ಸೋಮವಾರದಿಂದಲೇ ಸಂತ್ರಸ್ಥರಿಗೆ ನೀಡುವ ಕಾರ್ಯ ಮಾಡುವುದಾಗಿ ತಹಶೀಲ್ದಾರ ಶಿವಾನಂದ ಉಳ್ಳೆÃಗಡ್ಡಿ ಹಾಗೂ ವಿಷಯ ನಿರ್ವಾಹಕ ರಾಜಕುಮಾರ ಅರಶಿಣಗೋಡಿ ಮಾಹಿತಿ ನೀಡಿದ್ದಾರೆ.

-: ಹೆಸ್ಕಾಂಗೆ ಏಳೂವರೆ ಲಕ್ಷ ರೂ. ನಷ್ಟ :-
ಜೋರಾಗಿ ಬೀಸಿದ ಗಾಳಿಗೆ ವಿದ್ಯುತ್ ಕಂಬಗಳು ಮುರಿದುಹೋದ ಪರಿಣಾಮ ಹೆಸ್ಕಾಂಗೆ ೭.೪ ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಹಳಿಯಾಳ ಪಟ್ಟಣ ವ್ಯಾಪ್ತಿಯಲ್ಲಿ ೧೩ ವಿದ್ಯುತ್ ಕಂಬಗಳು ಹಾಗೂ ೨ ಟ್ರಾನ್ಸರ‍್ಮರ್ ವ್ಯವಸ್ಥೆ, ನಾಗಶೆಟ್ಟಿಕೊಪ್ಪ, ಮುಂಡವಾಡ, ಮುರ್ಕವಾಡ, ಮುಗದಕೊಪ್ಪ, ಬೆಳವಟಗಿ, ಗುಂಡೊಳ್ಳಿ, ನೀಲವಣಿ, ಭೀಮನಳ್ಳಿ, ಭಾಗವತಿ, ಬೊಮ್ಮನಳ್ಳಿ ಗ್ರಾಮಗಳಲ್ಲಿ ಒಟ್ಟು ೧೫ ಕಂಬಗಳು, ತಟ್ಟಿಹಳ್ಳ ಗ್ರಾಮದಲ್ಲಿರುವ ಅರಣ್ಯ ತರಬೇತಿ ಕೇಂದ್ರ ವ್ಯಾಪ್ತಿಯಲ್ಲಿ ೧೦ ಕಂಬಗಳು ಹಾಗೂ ೬ ವಿದ್ಯುತ್ ಪರಿವರ್ತಕಗಳ ವಿಫಲತೆ ಸೇರಿದಂತೆ ಒಟ್ಟು ೭.೪ ಲಕ್ಷ ರೂ. ನಷ್ಟವಾಗಿದ್ದು, ಇನ್ನೂ ಹೆಚ್ಚಿನ ವಿದ್ಯುತ್ ಕಂಬಗಳ ಮುರಿದಿರುವ ಬಗ್ಗೆ ಮಾಹಿತಿ ಬರುತ್ತಿರುವದರಿಂದ ಈ ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ರವೀಂದ್ರ ಮೆಟಗುಡ್ಡ ತಿಳಿಸಿದ್ದಾರೆ.

loading...