ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪುಸ್ತಕಗಳ ಪಾತ್ರ ಮಹತ್ವ: ಯಾವಗಲ್

0
42

 

ನರಗುಂದ: ಪುಸ್ತಕಗಳಿಗೆ ಜಗತ್ತನ್ನೆÃ ಆಳುವ ಶಕ್ತಿ ಇದೆ. ಮನುಷ್ಯನ ಬಾಳಿನ ದಾರಿದೀಪ ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ, ಇತ್ತಿÃಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪುಸ್ತಕಗಳಿಂದ ವಿಮುಕ್ತರಾಗಿ ಓದುವ ಹವ್ಯಾಸವನ್ನು ಬಿಟ್ಟು, ಪೇಸ್‌ಬುಕ್‌ನಲ್ಲಿ ವಿನಾಕಾರಣ ಕಾಲಹರಣ ಮಾಡುತ್ತಿರುವುದು ಕಳವಳದ ಸಂಗತಿ ಎಂದು ಪ್ರೊÃ, ಎಂ.ಎಸ್.ಯಾವಗಲ್ ವಿಷಾಧ ವ್ಯಕ್ತಪಡಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನ ಭಾಷೆ ಮತ್ತು ಇತಿಹಾಸ ಜೀವಂತವಾಗಿರಬೇಕಾದರೆ ಅದಕ್ಕೆ ಮುಖ್ಯ ಕಾರಣ ಗ್ರಂಥಗಳು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡ್ಯೊಯ್ಯುವ ಬಹುದೊಡ್ಡ ಕೆಲಸವನ್ನು ಪುಸ್ತಕಗಳು ಮಾಡುತ್ತವೆ.
ಶಿಕ್ಷಕರು, ಪಾಲಕರು ಮಕ್ಕಳಿಗೆ ಪುಸ್ತಕದ ಮಹತ್ವವನ್ನು ತಿಳಿಸಿಸಬೇಕು. ವಾಚನಾಭಿರುಚಿ ಬೆಳೆಸುವುದರ ಮೂಲಕ ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಶಾಂತಲಿಂಗ ಶ್ರಿÃಗಳು ಮಾತನಾಡಿ, ಮಾನವನ ವ್ಯಕ್ತಿತ್ವ ವಿಕಸನಕ್ಕೆ ಪುಷ್ಠಿಕೊಡುವ ಕಾರ್ಯವನ್ನು ಮಾಡುವುದು ಪುಸ್ತಕ. ಇಡೀ ಪ್ರಪಂಚ ನಮ್ಮನ್ನು ಬಿಟ್ಟು ಹೋದಾಗ ಪುಸ್ತಕ ನಮ್ಮ ಜೊತೆಗಿದ್ದರೆ ಪ್ರಪಂಚವೇ ನಮ್ಮ ಜೊತೆಗಿದ್ದಂತೆ ಹೀಗಾಗಿ ಯುವ ಸಮುದಾಯ ಈ ಬದಲಾದ ಆಧುನಿಕರಣದ ಭರಾಟೆಯಲ್ಲಿ ಸಿಲುಕದೆ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಶಕ್ತ ರಾಷ್ಟç ನಿರ್ಮಾಣ ಮಾಡಬೇಕಾಗಿದೆ ಎಂದು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಡಾ. ಎಂ.ಪಿ.ಕುಲಕರ್ಣಿ, ಶಿಕ್ಷಕ ಎಸ್.ಜಿ.ಮಣ್ಣೂರಮಠ ಮಾತನಾಡಿದರು. ಶಿರೋಳದ ಹಿರಿಯ ಸಾಹಿತಿ ಹಾಗೂ ಶಿಕ್ಷಕ ಎಂ.ಕೆ.ದಿಬ್ಬದ ಅವರು, ಸಾಕ್ರೆÃಟಿಸ್‌ನ ಕೊನೆಯ ದಿನಗಳು, ಇಷ್ಠಲಿಂಗ ಪೂಜೆಯ ವೈಜ್ಞಾನಿಕತೆ, ಗುರುನಾನನಕ, ಆಶಾಮಾರ್ಗ, ಜ್ಞಾನಮಾರ್ಗ, ಡಿವ್ಹಿಜಿಯವರ ಮಂಕು ತಿಮ್ಮನ ಕಗ್ಗ, ವಚನಶಾಸ್ತç ಸಾರ, ಪ್ರಭುಲಿಂಗ ಲೀಲೆ ಗದ್ಯಾನುವಾದ, ದೇವರು ಹೀಗೆಯೆ ಇರುವನು, ಪುರಾತನದ ಆರು ರಗೆಳೆಗಳು ಪತಂಜಲಿ ಯೋಗ ದಿಪ್ತಿ, ಜ್ಞಾನಯೋಗ ಸೇರಿದಂತೆ ಸುಮಾರು ೬೦೦ ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಶ್ರಿÃಮಠದಲ್ಲಿರುವ ಸಿಂದಗಿ ಶ್ರಿÃ ಶಾಂತವೀರೇಶ್ವರ ಗ್ರಂಥಾಲಯಕ್ಕೆ ದೇಣಿಗೆ ನೀಡಿದರು.

ವೇದಿಕೆ ಮೇಲೆ ನರಗುಂದ ತಾಲೂಕು ಗ್ರಂಥಪಾಲಕ ಮನೋಜ ಗಡ್ಡಿ, ಶಿಕ್ಷಕ ಎಮ್.ಡಿ.ಮಾದರ, ಶಿರೋಳದ ಬಾಪುಗೌಡ ಉಪಸಸ್ಥಿತರಿದ್ದರು. ಮಹಾಂತೇಶ ಹಿರೇಮಠ ನಿರ್ವಹಿಸಿದರು.

loading...