ಕಾಂಟೋನಮೆಂಟ್ ಮಾರುಕಟ್ಟೆ ಎ.ಪಿ.ಎಮ್.ಸಿಗೆ ಸ್ಥಳಾಂತರಿಸಲು ಒತ್ತಾಯಿಸಿ ಮನವಿ

0
42

ಕಾಂಟೋನಮೆಂಟ್ ಮಾರುಕಟ್ಟೆ ಎ.ಪಿ.ಎಮ್.ಸಿಗೆ ಸ್ಥಳಾಂತರಿಸಲು ಒತ್ತಾಯಿಸಿ ಮನವಿ
ಕನ್ನಡಮ್ಮ ಸುದ್ದಿ: ಬೆಳಗಾವಿ: ನಗರದ ಕಾಂಟೋನಮೆಂಟ್ ಪ್ರದೇಶದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆ ವ್ಯಾಪಾರ, ವ್ಯವಹಾರವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ( ಎ.ಪಿ.ಎಮ್.ಸಿ) ಆವರಣದಲ್ಲಿ ನೂತನ ಹೈಟೆಕ್ ಸಗಟು ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ದಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಚೇರಿ ಆವರಣದಲ್ಲಿ ಧರಣಿ ನಡಿಸಿ,
ಸ್ಪರ್ಧಾತ್ಮಕ ದರಗಳು ಸಿಗದೇ ರೈತರು ಕಂಗಾಲಾಗಿದ್ದಾರೆ. ತರಕಾರಿ ಬೆಳೆಗಾರರಿಗೆ ಸೂಕ್ತ ಹರಾಜು ವ್ಯವಸ್ಥೆ ಇಲ್ಲ, ಗುಣಾತ್ಮಕ ಮಾಪಕಗಳಿಲ್ಲದೇ ಮೋಸವಾಗುತ್ತಿದೆ.

ಕೋಟ್ಯಾಂತರ ಖರ್ಚು ಮಾಡಿ ನಿರ್ಮಿಸಲಾದ ಹೊಸ ಎಪಿಎಂಸಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಬೆಳಗಾಯ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.

ಅಲ್ಲದೇ ಮಾರುಕಟ್ಟೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಹಣದ ಪಾವತಿ ಆಗುತ್ತಿಲ್ಲ, ಈಗಿರುವ ಮಾರುಕಟ್ಟೆ ನಗರದಲ್ಲಿ ಮದ್ಯದಲ್ಲಿ ಕಿರಿದಾಗಿದೆ ಗ್ರಾಮೀಣ ಪ್ರದೇಶಗಳಿಂದ ಮಾರುಕಟ್ಟೆಗೆ ಆಗಮಿಸುವರಿಗೆ ತೀರಾ ತೊಂದರೆಗಳನ್ನು ಅನುಭವಿಸುವಂತಾಗಿದೆ.

ಮತ್ತು ಪಕ್ಕದಲ್ಲಿ ಬಸ್ ನಿಲ್ದಾಣ ಶಾಲಾ- ಕಾಲೇಜು ಹಾಗೂ ಪ್ರವಾಸಿ ಮಂದಿರ ಇರೊಂದರಿಂದ ಮಾರುಕಟ್ಟೆಯ ಜನದಟ್ಟಣೆಗೆ ಜನ ರೋಸಿ ಹೋಗುತ್ತಿದ್ದಾರೆ.

ಎಪಿಎಮ್ ಸಿ ಆವರಣದ 14 ಎಕರೇ ವಿಸ್ತೀರ್ಣದಲ್ಲಿ 25 ಕೋಟಿ ರೂ‌‌. ವೆಚ್ಚದಲ್ಲಿ ‌ನಿರ್ಮಾಣವಾಗಿ ಸಗಟು ಮಾರುಕಟ್ಟೆ ಅನಾಥವಾಗಿದೆ ಜಿಲ್ಲಾಧಿಕಾರಿ ಗಮನ ಹರಿಸಿ ಆದಷ್ಟೂ ಬೇಗ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸರಕಾರವನ್ನು ನಂಬಿ ಪ್ರತಿಯೊಬ್ಬ ವರ್ತಕರು ರೂ. 20.25 ಲಕ್ಷ ಖಾಸಗಿ ಬ್ಯಾಂಕನಲ್ಲಿ ಸಾಲ ಮಾಡಿ ಮಳಿಗೆಗಳನ್ನು ಪಡೆದ ವರ್ತಕರಿಗೆ , ಈ ಮಾರುಕಟ್ಟೆಯನ್ನು ಸ್ಥಳಾಂತರ ವಿಳಂಬವಾದರಿಂದ
ಅಂಗಡಿಗಳನ್ನು ಪಡೆದ ವ್ಯಾಪಾರಸ್ಥರು ಹತಾಶರಾಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಮಳಿಗೆಗಳನ್ನು ನೀಡಲು ವಿಳಂವವಾದರೆ , ಲಕ್ಷಾಂತರ ಹಣವನ್ನು ವಿನಿಯೋಗಿಸಿ ಅಂಗಡಿ‌ ಪಡೆದ ವ್ಯಾಪಾರಸ್ಥರು ಬೀದಿಗಿಳು ಪ್ರತಿಭಟನೆ ಮಾಡುವುದಾಗಿ ಎಪಿಎಮ್ ಸಿ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು.

ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ, ಬಸವನಗೌಡ ಪಾಟೀಲ, ಜಿಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಗಜಾನನ ಶಹಾಪುರ, ರಾಜೇಂದ್ರ ಕಂಗ್ರಾಳಕರ, ಮೌನಪ್ಪ ಪಾಟೀಲ, ನಿತಿನ್ ಮುತಗೇಕರ, ಜಾವೇದ ಸಣದಿ, ಶಂಕರಗೌಡ ಪಾಟೀಲ, ಅಲ್ತಾಫ್ ಬಾಗವಾನ, ಬಿ. ಆರ್.ಅಲ್ಲಯ್ಯನವರಮಠ ಇತರರು ಉಪಸ್ಥಿತರಿದ್ದರು.

loading...