ಅಕಾಲಿಕ ಮಳೆ-ಗಾಳಿಗೆ ಹಾರಿಹೋದ ಮೇಲ್ಛಾವಣಿಗಳು: ಲಕ್ಷಾಂತರ ಹಾನಿ

0
31

 

ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಭಾನುವಾರ ರಾತ್ರಿ ಬೀಸಿದ ಜೋರಾದ ಗಾಳಿಗೆ ಕಟ್ಟಡಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಪಟ್ಟಣದ ಆಶ್ರಯ ಕಾಲನಿಯಲ್ಲಿ ಹಲವು ನಾಗರಿಕರ ಮನೆಯ ಮೇಲೆ ಹೊತ್ತಿಸಿದ್ದ ಸಿಮೆಂಟ್ ಶೀಟುಗಳು ಮನೆಯಿಂದ ೨೦೦ ಮೀಟರ್ ದೂರದವರೆಗೆ ಹಾರಿಹೋಗಿವೆ. ತಾಲೂಕಿನ ಲಕ್ಕೆÃಬೈಲ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮೇಲ್ಛಾವಣಿಯೂ ಗಾಳೆಗೆ ಹಾರಿ ಹೋಗಿದ್ದು, ಮಳೆ-ಗಾಳಿಗೆ ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ.
ಅಕಾಲಿಕ ಮಳೆ ಮತ್ತು ಮಳೆ ಸುರಿಯುವುದಕ್ಕೂ ಮುಂಚೆ ಬೀಸಿದ ಬಿರುಗಾಳಿಗೆ ತಾಲೂಕಿನ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿವೆ. ಜೈನಕೊಪ್ಪ ಗ್ರಾಮದ ಸಂಪರ್ಕ ರಸ್ತೆಯ ಮೇಲೆ ಮರಗಳು ಬಿದ್ದು ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ದೇವಲತ್ತಿ, ದೊಡ್ಡಹೊಸೂರು, ಲೋಕೊಳಿ, ಲಕ್ಕೆಬೈಲ, ತೋಪಿನಕಟ್ಟಿ, ಕಾಮಶಿನಕೊಪ್ಪ ಹಾಗೂ ಸುತ್ತಲಿನ ಭಾಗದಲ್ಲಿ ಮಳೆ-ಗಾಳಿಗೆ ನೂರಾರು ಮರಗಿಡಗಳು ನೆಲಕ್ಕಚ್ಚಿದ್ದು, ರೈತರ ಹೊಲದಲ್ಲಿ ಬೆಳೆದು ನಿಂತಿದ್ದ ಕಬ್ಬು, ಮೆಣಸಿನಕಾಯಿ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ. ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಭಾನುವಾರದ ಮಳೆ-ಗಾಳಿಯಿಂದ ಉಂಟಾದ ಆರ್ಥಿಕ ನಷ್ಟದ ಮಾಹಿತಿ ಸಂಗ್ರಹಿಸಿ ಸರ್ಕಾರದಿಂದ ಅಗತ್ಯ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

loading...