ನಕಲಿ ಮತದಾನ: ಸಿಪಿಐಎಂ ಮೂವರು ಕಾರ್ಯಕರ್ತರ ಮೇಲೆ ಪ್ರಕರಣ

0
31

ಕಣ್ಣೂರು- ಏ 23ರಂದು ನಡೆದ ಲೋಕಸಭಾ ಚುನಾವಣೆ ವೇಳೆ ನಕಲಿ ಮತದಾನ ಮಾಡಿದ್ದ ಸಿಪಿಐಎಂನ ಮೂವರು ಮಹಿಳಾ ಕಾರ್ಯಕರ್ತರ ಮೇಲೆ ಪರಿಯಾರಂ ಪೊಲೀಸರು ಗುರುವಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ

ಕಣ್ಣೂರು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಮಿರ್‌ ಮಹಮ್ಮದ್‌ ಅಲಿ ಅವರ ಆದೇಶದ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್‌ 171-ಸಿ, ಡಿ, ಎಫ್‌ ಅಡಿಯಲ್ಲಿ ಸಿಪಿಐಎಂನ ಕಾರ್ಯಕರ್ತೆ ಮತ್ತು ಚೆರುಥಜಂ ಪಂಚಾಯ್ತಿ ಸದಸ್ಯೆ ಎಂ.ವಿ.ಸಲೀನಾ, ಪಂಚಾಯ್ತಿ ಮಾಜಿ ಸದಸ್ಯೆ ಕೆ.ಪಿ.ಸುಮಯ ಮತ್ತು ಪದ್ಮಿನಿ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿನ ಪಿಲತರ ಮತಗಟ್ಟೆಯಲ್ಲಿ ಇವರು ನಕಲಿ ಮತದಾನ ಮಾಡಿದ್ದರು
ಕೆ.ಪಿ.ಸುಮಯ ಪಿಲತರ ಮತಗಟ್ಟೆಯಲ್ಲಿ ಎಲ್‌ಡಿಎಫ್‌ನ ಎರಡನೇ ಬೂತ್‌ ಏಜೆಂಟ್‌ ಆಗಿದ್ದರು. ನಕಲಿ ಮತದಾನಕ್ಕೆ ಕುಮ್ಮಕ್ಕು ನೀಡಿದ ಮತ್ತೋರ್ವ ಎಲ್‌ಡಿಎಫ್‌ ಬೂತ್‌ ಏಜೆಂಟ್‌ ರಾಜೇಶ್‌ ಪಾತ್ರದ ಕುರಿತು ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

loading...