ದಕ್ಷಿಣ ಆಫ್ರಿಕಾ: ಕೆನ್ನೆಥ್ ಚಂಡಮಾರುತಕ್ಕೆ 48 ಬಲಿ

0
23
Tropical Cyclone Kenneth approaches the coast of Mozambique in this April 25, 2019 handout satellite image. NASA/Handout via REUTERS ATTENTION EDITORS - THIS IMAGE WAS PROVIDED BY A THIRD PARTY.

ವಿಶ‍್ವಸಂಸ್ಥೆ:- ದಕ್ಷಿಣ ಆಫ್ರಿಕಾದಲ್ಲಿ ಕೆನ್ನೆಥ್ ಚಂಡಮಾರುತ ಅಪ್ಪಳಿಸಿದ ಪರಿಣಾಮ ಕಾಮೊರೊಸ್ ಹಾಗೂ ಮೊಝಾಂಬಿಕ್ ನಲ್ಲಿ ಇದುವರೆಗೆ ಕನಿಷ್ಠ 48 ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಕಳೆದ ತಿಂಗಳಲ್ಲಿ ಇದಯಿ ಚಂಡಮಾರುತದಿಂದ ಸಾವಿರ ಮಂದಿ ಸಾವನ್ನಪ್ಪಿದ ಬೆನ್ನಲ್ಲಿಯೇ ಇದೀಗ ಕೆನ್ನೆಥ್ ಚಂಡಮಾರುತ ಹೊಡೆತಕ್ಕೆ ಕೊಮೊರಸ್ ಪ್ರಾಂತ್ಯದಲ್ಲಿ ಸುಮಾರು ಏಳು ಮಂದಿ ಸಾವಿಗೀಡಾಗಿದ್ದು, 200 ಜನರು ಗಾಯಗೊಂಡಿದ್ದಾರೆ. ಮೊಝಾಂಬಿಕನಲ್ಲಿ 41 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟಿಫನ್ ದುಜಾರಿಕ್ ಹೇಳಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ಕೆನ್ನೆಥ್ ಚಂಡಮಾರುತ ಅಪ್ಪಳಿಸಿದ್ದು, ಮೊಝಾಂಬಿಕನಲ್ಲಿ 37,700 ಮನೆಗಳು ಧ್ವಂಸಗೊಂಡಿವೆ. ಶಾಲಾ ಕಾಲೇಜುಗಳು ಹಾಗೂ ಆರೋಗ್ಯ ಕೇಂದ್ರಗಳಿಗೆ ಹಾನಿ ಸಂಭವಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಪೀಡಿತರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಅಮೆರಿಕದ 13 ಮಿಲಿಯನ್ ಡಾಲರ್ ಕೇಂದ್ರ ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ಹಣ ಬಿಡುಗಡೆಗೊಳಿಸಿ ಕೊಮೊರಸ್ ಹಾಗೂ ಮೊಝಾಂಬಿಕ್ ಗಳಲ್ಲಿ ಆಹಾರ ಪೂರೈಕೆ, ಆಶ್ರಯ, ಆರೋಗ್ಯ, ನೀರು ಮತ್ತು ಶೌಚಾಲಯಗಳಂತಹ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ದುಜಾರಿಕ್ ಹೇಳಿದ್ದಾರೆ.
ಕೊಮೊರಸ್ ನಲ್ಲಿ ಶೇ.80ರಷ್ಟು ಕೃಷಿ ಕ್ಷೇತ್ರ ಹಾನಿಗೀಡಾಗಿದ್ದು, ಶೇ.60ರಷ್ಟು ಬೆಳೆ ನಾಶವಾಗಿದೆ. 3,800ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ.
ಇತ್ತೀಚಿಗಷ್ಟೇ ಇದಯಿ ಚಂಡಮಾರುತ ಬೀಡಿದ ಪರಿಣಾಮ ಮೊಝಾಂಬಿಕ್ ನಲ್ಲಿ 600, ಮಲಾವಿಯ 60 ಹಾಗೂ ಜಿಂಬಾಬ್ವೆಯಲ್ಲಿ ಸುಮಾರು 340ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.

loading...