ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ವರ್ಗದ ಜನರಿಗಾಗಿ ಹೋರಾಡಿದ ಮಹಾನ್ ನಾಯಕರು: ಶಾಸಕ ಹಾಲಪ್ಪ

0
52

 

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಡಾ.ಬಿ.ಆರ್.ಅಂಬೇಡ್ಕರ್ ದಲಿತರಾಗಿ ಶ್ರಮಿಸಲಿಲ್ಲ, ಎಲ್ಲಾ ವರ್ಗದ ಜನರಿಗಾಗಿ ಹೋರಾಡಿದ ಮಹಾನ್ ನಾಯಕರು. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉಜ್ಜಲ ಭವಿಷ್ಯ ರೂಪಿಸಿದರೆ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಲಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.
ತಾಲೂಕಾ ಛಲವಾದಿ ಮಹಾಸಭಾ ವತಿಯಿಂದ ಇಲ್ಲಿಯ ಹಳೇ ಪಪಂ ಅವರಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೮ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಕೇವಲ ಒಂದೇ ಜನಾಂಗಕ್ಕೆ ಮಾತ್ರ ಸಿಮಿತವಾದಂತೆ ಬಿಂಬಿಸುತ್ತಿದ್ದಾರೆ. ಆದರೆ ಅವರು ದೇಶದ ಎಲ್ಲಾ ವರ್ಗದವರಿಗೂ ಮಾದರಿ. ಆದರ್ಶ ವ್ಯಕ್ತಿಗಳು ದೇಶದ ಸರ್ವರ ಅಭಿವೃದ್ದಿಗಾಗಿ ಮಹೋನ್ನತ ಕೊಡುಗೆ ನೀಡಿದ್ದಾರೆ. ಯಾವುದೇ ಒಂದು ಸಮಾಜವು ಮುಂದೆ ಬರಬೇಕಾದರೆ ಮುಖ್ಯವಾಗಿ ಶಕ್ಷಣವನ್ನು ಪಡೆಯಬೇಕು. ಅಂದಾಗ ಮಾತ್ರ ಆ ಸಮಾಜವು ಅಭಿವೃದ್ದಿ ಹೊಂದುತ್ತದೆ. ಭಾರತ ದೇಶಕ್ಕೆ ಸಿಮೀತವಾಗದೆ ಪ್ರಪಂಚಕ್ಕೆ ಮಾದರಿಯಾದ ಅಂಬೇಡ್ಕರವರ ತತ್ವ ಹಾಗೂ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ದಿನಾಚರಣೆಯನ್ನು ಮಾಡಿದಕ್ಕೆ ಸಾರ್ಥಕವಾಗುತ್ತದೆ.ದಲಿತರ ದ್ವನಿಯಾಗಿ ಶಕ್ತಿಯಾಗಿ ಬೆಳೆದಿರುವ ಕ್ರಾಂತಿಕಾರಿ ಬದಲಾವಣೆಯನ್ನು ತಂದಿರುವ ಡಾ:ಬಿ.ಆರ್.ಅಂಬೇಡ್ಕರರವರು ಸ್ವಾತಂತ್ರö್ಯ ಮುಂಚೂಣಿಯಲ್ಲಿ ಸಾಮಾಜಿಕ ಸಮಾನತೆಯ ಹರಿಕಾರರು. ಭಾರತ ದೇಶಕ್ಕೆ ಅತ್ಯಂತ ಪವಿತ್ರವಾದ ಸಂವಿಧಾನವನ್ನ ರಚಿಸಿದ ಮಹಾನ ನಾಯಕರು.ಇಂಥವರ ಆದರ್ಶ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳಬೇಕು ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಜಿಪಂ ಮಾಜಿ ಸದಸ್ಯ ಸಿ.ಎಚ್.ಪೋಲೀಸ್ ಪಾಟೀಲ್ ಮಾತನಾಡಿ,ಭಾರತ ದೇಶಕ್ಕೆ ಅತ್ಯಂತ ಪವಿತ್ರವಾದ ಸಂವಿಧಾನವನ್ನು ರಚಿಸಿದ ಮಹಾನ ನಾಯಕರು. ಅಂಬೇಡ್ಕರ್‌ರವರು ಶೋಷಿತ ಜನಾಂಗಕ್ಕೆ ಶಿಕ್ಷಣ, ಸಂಘಟನೆ,ಹೋರಾಟವೆಂಬ ತ್ರಿವಳಿ ಸೂತ್ರದ ಮೂಲಕ ದಲಿತರಲ್ಲಿ ಪ್ರಜ್ಞೆ ಮೂಡಿಸಿ ಸ್ವಾಭಿಮಾನಿ ಸ್ವಾಲಂಭಿಯಾಗಲು ಜಾಗೃತಿ ಮಾಡಿದರು.ಪ್ರಜಾಪ್ರಭುತ್ವ ಪದ್ದತಿಯ ಮೂಲಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸಮಾನತೆಯ ಹಕ್ಕುಗಳನ್ನು ಜಾರಿಗೆ ತಂದ ಮಹಾನ್ ವ್ಯಕ್ತಿಯ ವೈಚಾರಿಕತೆಯು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಸಾಮಾಜಿಕ ನ್ಯಾಯ ಜಾತಿರಹಿತ ಸಮಾಜದ ನಿರ್ಮಾಣದ ತತ್ವಗಳನ್ನಾದರಿಸಿ ಭವ್ಯ ಭಾರತವನ್ನ ಕಟ್ಟುವುದಕ್ಕಾಗಿ ತಮ್ಮನ್ನೆ ತಾವು ಸಮರ್ಪಿಸಿಕೊಂಡ ಡಾ||ಬಿ.ಆರ್.ಅಂಬೇಡ್ಕರ್‌ರವರ ಮಹಾದಿವ್ಯ ಚೇತನವಾಗಿದ್ದರು. ಜಾತಿಯ ವ್ಯವಸ್ಥೆಯ ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಹೆಚ್ಚೆ ಇಟ್ಟು ಅವರ ಆದರ್ಶ ತತ್ವ, ವೈಚಾರಿಕತೆಗಳನ್ನು ನಾವೇಲ್ಲರೂ ಮೈಗೂಡಿಸಿಕೊಳ್ಳೊಣ್ಣ ಎಂದರು.

ಇದಕ್ಕೂ ಮೊದ್ಲು ಇಲ್ಲಿಯ ಡಾ.ಬಿ,ಆರ್.ಅಂಬೇಡ್ಕರ ವೃತ್ತ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವಿವಿಧ ವಾಧ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರಿಸಿತು.ಇದೇ ಸಂದರ್ಭದಲ್ಲಿ ಕೊಪ್ಪಳದ ವಿಠಲ್ ವಗ್ಗನವರ್ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ, ಅಂದಾನಗೌಡ ಪೋಲೀಸ್ ಪಾಟೀಲ್, ಸಿದ್ದಪ್ಪ ಕಟ್ಟಿಮನಿ, ಎಂ.ಆರ್.ವೆಂಕಟೇಶ, ಭರಮಪ್ಪ ಬೆಲ್ಲದ, ಅಕ್ತರಸಾಬ ಖಾಲಿ, ಮೈಬೂಬಸಾಬ ಮಂಕಾದರ, ರೇವಣಪ್ಪ ಹಿರೇಕುರಬರ್, ಅಶೋಕ ಅರಕೇರಿ, ಕಳಕಪ್ಪ ತಳವಾರ, ವಸಂತಕುಮಾರ ಭಾವಿಮನಿ, ರಿಯಾಜ್ ಖಾಜಿ, ಹನಮಂತಪ್ಪ ಭಜಂತ್ರಿ, ಸಮಾಜದ ಮುಖಂಡರಾದ ಬಾಲರಾಜ ಛಲವಾದಿ, ಡಿ.ಕೆ.ಪರಶುರಾಮ್ ಛಲವಾದಿ, ಶಂಕರ ಕಟ್ಟಿ,ಛತ್ರಪ್ಪ ಛಲವಾದಿ,ಪುಟ್ಟರಾಜ ಪೂಜಾರ. ಮಹಾಂತೇಶ ಛಲವಾದಿ, ವಿಕ್ರಮ ಛಲವಾದಿ, ರುದ್ರಪ್ಪ ನಡುಲಮನಿ, ಶಶಿಧರ ಛಲವಾದಿ,ಮಲ್ಲು ಜಕ್ಕಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಶಿವಮೂರ್ತಿ ಇಟಗಿ ನಿರೂಪಿಸಿ, ಸ್ವಾಗತಿಸಿದರು.

loading...