ಮುತ್ತಪ್ಪ ರೈ ಜನ್ಮದಿನಾಚರಣೆ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಲು ವಿತರಣೆ

0
49

 

ರಾಮದುರ್ಗ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಮುತ್ತಪ್ಪ ರೈ ಅವರ ಜನ್ಮದಿನಾಚರಣೆಯನ್ನು ರಾಮದುರ್ಗ ತಾಲೂಕಾ ಜಯಕರ್ನಾಟಕ ಸಂಘಟನೆಯ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಾಲು ವಿತರಣೆ ಮಾಡಿದ ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಜಯಕುಮಾರ ರಾಠೋಡ.
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಜಯಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷ ಮುತ್ತಪ್ಪ ರೈ ಅವರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹಣ್ಣು ಹಾಲು ವಿತರಿಸಿ ಮಾತನಾಡಿದ ಅವರು. ಜನ್ಮ ದಿನಾಚರಣೆಯಗಳನ್ನು ವೈಭದಿಂದ ಆಚರಿಸಿಕೊಳ್ಳಬಾರದು ಸರಳ ಹಾಗೂ ಬಡ ಜನರಿಗೆ ಸಹಾಯ ಸಹಕಾರವನ್ನು ಕೈಲಾದಷ್ಟು ಮಾಡುತ್ತಾ ಅವರ ಸವೇ ಮಾಡಬೇಕು ಎಂದು ಅವರ ಕನಸಾಗಿತ್ತು ಅದರಂತೆ ಇಂದು ಅವರ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಶ್ರಿÃಪತಿನಗರದ ಜಗದಾತ್ಮಾನಂದ ಸ್ವಾಮಿಗಳು ಮಾತನಾಡಿ ಜಯಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷ ಮುತ್ತಪ್ಪ ರೈ ಅವರು ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ ನೂರಾರು ಬಡ ರೋಗಿಗಳಿಗೆ ಹಣ್ಣು ಹಾಲು,ಅನಾಥ ಮಕ್ಕಳಿಗೆ ಸಹಾಯಗಳನ್ನು ಮಾಡುತ್ತಾ ಇಂದು ರಾಜ್ಯ ತುಂಬೆಲ್ಲ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ, ಇದೆ ರೀತಿ ನಾಡು ನುಡಿ ರಕ್ಷಣೆಯಲ್ಲಿ ಜಯಕರ್ನಾಟಕ ಸಂಘಟನೆಯು ಉತ್ತಮವಾಗಿ ಬೆಳೆದು ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸದರು.

ಈ ಸಂದರ್ಬದಲ್ಲಿ ತಾಲೂಕಾ ಆಸ್ಪತ್ರೆಯ ವ್ಯೆಧ್ಯ ಡಾ ಹಲಗತ್ತಿ, ಸುರೇಶ ಗಿಂಜಾಲೆ, ಕೃಷ್ಣಾ ಲಮಾಣಿ, ಆಸೀಫ್ ಹಾಜಿ, ಪ್ರಧಾನ ಕಾರ್ಯಧರ್ಶಿ ಆನಂದ ಕುಮಾರ ರಾಠೋಡ, ಕೃಷ್ಣಪ್ಪ ರಾಠೋಡ, ಮುನ್ನಾ ಖತಿಬ್, ಸಾಗರ ಮುನವಳ್ಳಿ, ರಾಘು ದೊಡಮನಿ, ಸುಧಿರ ಸಿದ್ದನಕೊಳ್ಳ, ಶಿವಾನಂದ ರಾಠೋಡ, ವೆಂಕಟೇಶ ನಾಯಕ, ಮೊಹನ ರಾಠೋಡ, ಮಂಜು ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...