ಭಾನುವಾರ ಹುಕ್ಕೇರಿ ಶಾಖಾ ಮಠಕ್ಕೆ ಡಾ. ವೆಂಕಟರಮಣ ಹೆಗಡೆ ಆಗಮನ

0
27

ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಾಸಿಕ ಸುವಿಚಾರ ಚಿಂತನ 18 ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತವಾಗಿ ಮೇ. 5 ಭಾನುವಾರದಂದು ವೇದ ಆರೋಗ್ಯ ಕೇಂದ್ರ ಶಿರಸಿಯ ನಿಸರ್ಗ ಮನೆಯ ಡಾ. ವೆಂಕಟರಮಣ ಹೆಗಡೆ ಉಚಿತ ಆರೋಗ್ಯ ತಪಾಸಣಣೆಯನ್ನು ಮಾಡಲಿದ್ದಾರೆ.
ಈ ಉಚಿತ ಆರೋಗ್ಯ ತಪಾಸಣೆಯಲ್ಲಿ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯ ನುರಿತ ವೈದ್ಯರು ಆಗಮಿಸಲಿದ್ದಾರೆ. ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಹರಿಸದೇ ಇವತ್ತು ಬಹಳಷ್ಟು ಜನ ತೊಂದರೆಯನ್ನು ಅನುಭವಿಸುತಿದ್ದಾರೆ. ಇವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಉಚಿತ ಆರೋಗ್ಯ ತಪಾಸಣೆಯನ್ನು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಏರ್ಪಡಿಸಲಾಗಿದೆ.

ಸಂಜೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಸಾನಿಧ್ಯದಲ್ಲಿ ಅಡುಗೆ ಮನೆಯಲ್ಲಿ ಆರೋಗ್ಯ ಎಂಬ ಪ್ರಾಯೋಗಿಕವಾಗಿರುವ ಉಪನ್ಯಾಸ ನೀಡಲಿದ್ದಾರೆ.
ಉಚಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಲಿಚ್ಚಿಸುವರು ಮುಂಚಿತವಾಗಿ ಶ್ರೀಮಠದಲ್ಲಿ ಹೆಸರು ನೋಂದಾಯಿಸಬೇಕು. ಡಾ. ವೆಂಕಟರಮಣ ಹೆಗಡೆ ಅವರು ಅನೇಕ ಸುದ್ದಿವಾಹಿನಿಯಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ತಮ್ಮ ಸಂದರ್ಶನದ ಮುಖಾಂತರ ಲೇಖನದ ಮುಖಾಂತರ ಖ್ಯಾತಿ ಯಾಗಿದ್ದಾರೆ. ಇವರಲ್ಲಿ ಈಗಾಗಲೇ ಗಂಗಾವತಿ ಪ್ರಾಣೇಶ್ ಒಳಗೊಂಡಂತೆ ಅನೇಕ ಜನ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.
ಇಂಥ ಅಪರೂಪದ ವ್ಯಕ್ತಿತ್ವದ ಹಿಂದೆ ಬದುಕನ್ನು ಸರಳವಾಗಿ ಹೇಗೆ ಕಳೆಯಬಹುದು ಎಂಬುದನ್ನು ತಿಳಿಸಿಕೊಡುವ ವೆಂಕಟ್ರಮಣ ಹೆಗಡೆ ಅವರು ಬೆಳಗಾವಿಗೆ ಬರುತ್ತಿರುವುದು ನಮ್ಮ ಭಾಗದ ಜನತೆಗೆ ಹರುಷವನ್ನುಂಟು ಮಾಡಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

loading...