ಅಪ್ಪಗೋಳ ವಿರುದ್ಧ ಚಾರ್ಜಶೀಟ್‌ಗೆ ಗ್ರಾಹಕರ ಒತ್ತಾಯ

0
15

ಅಪ್ಪಗೋಳ ವಿರುದ್ಧ ಚಾರ್ಜಶೀಟ್‌ಗೆ ಗ್ರಾಹಕರ ಒತ್ತಾಯ
ಕನ್ನಡಮ್ಮ ಸುದ್ದಿ: ಬೆಳಗಾವಿ: ಗ್ರಾಹಕರ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿ ಜೈಲುಪಾಲಾದ, ಸಂಗೋಳ್ಳಿ ರಾಯಣ್ಣ ಬ್ಯಾಂಕ್ ಮಾಲೀಕನಾದ ಅಪ್ಪಗೋಳ ವಿರುದ್ಧ ಚಾರ್ಜಶೀಟ್ ಸಲ್ಲಿಸುವಂತೆ ಒತ್ತಾಯಿಸಿ ಗ್ರಾಹಕರಿಂದ ಶುಕ್ರವಾರ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಕಚೇರಿ ಆವರಣದಲ್ಲಿ ಧರಣಿ ನಡೆಸಿ, ನಾಲ್ಕೆöÊದು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ, ಮನವಿ ಸಲ್ಲಿಸಿ ಗ್ರಾಹಕರಿಗೆ ಸಾಕಾಗಿದೆ, ಸಾವು ಒಂದೇ ನಮಗೆ ದಾರಿ ಎಂದು ಗ್ರಾಹಕರು ಆಕ್ರೋಶ ಹೊರಹಾಕಿದರು.
ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ತಕ್ಷಣವೆ ವಿಚಾರಣೆ ಮಾಡಿತ್ತಿನಿ ಹೇಳುತ್ತಾರೆ ಮರುಗಳಿಗೆಯಲ್ಲಿ ಜಿಲ್ಲಾಧಿಕಾರಿಗಳೇ ವರ್ಗಾವಣೆಯಾಗುತ್ತಿದ್ದಾರೆ.
ಸರ್ಕಾರ ಅವರ ಮೇಲೆ ಜಾರ್ಜಶೀಟ್ ಜಾರಿಗೊಳಿಸಿದ ಆಸ್ತಿಯನ್ನು ಮುಟ್ಟುಗೊಲು ಹಾಕಬೇಕು ಇಲ್ಲದಿದ್ದರೆ ಬೃಹತ್ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು.
ಈಗಾಗಲೇ ಹಣ ಠೇವಣಿ ಮಾಡಿದ ಮೂರು ನಾಲ್ಕು ಜನ ಸಾವನ್ನಪ್ಪಿದ್ದಾರೆ. ಅವರಿಗೆ ಯಾರು ದುಡ್ಡು ಮರಳಿಸುತ್ತಾರೆ, ಭ್ರಷ್ಟಾಚಾರಿಗಳು ಕಣ್ಮುಂದೆ ಇದ್ದರೂ ಅಧಿಕಾರಿಗಳು ಕಠಿಣ ಕ್ರಮ ಜರಿಗಿಸಲು ಹಿಂದೆಟ್ಟು ಹಾಕುತ್ತಿದ್ದಾರೆ ಆರೋಪಿಸಿದರು.
ಪೊಲೀಸರ್ ಅಧಿಕಾರಿಗಳು ಅಪ್ಪಗೋಳ ಬಂಧಿಸಿ, ಜೈಲಿನಲ್ಲಿ ಮ್ರುಷ್ಟಾಣ್ಣ ಭೋಜನೆ ನೀಡಿದ್ದಾರೆ. ಸಿಐಡಿ ತನಿಖೆಗೆ ಅಧಿಕಾರಿಗಳ ಬಾಗಿಲ ಅಳೆದು ಸಾಕಾಗಿದೆ. ಭ್ರಷ್ಟಾಚಾರ ಮಾಡಿದ ವ್ಯಕ್ತಿ ರಾಜಾರೋಷವಾಗಿ ಜೈಲಿನಲ್ಲಿ ಆರಾಮ ಆಗಿ ಇದ್ದಾರೆ. ಗ್ರಾಹಕರು ಮಾತ್ರ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುದ್ದಾಗಿದೆ. ಮೂರು ವರ್ಷಗಳಿಂದ ಮನವಿ ಕಾಪಿಯನ್ನು ಕಸದ ಬುಟ್ಟಿಗೆ ಹಾಕಲಾಗುತ್ತಿದೆ. ಈ ಬಾರಿಯಾದರೂ ಸೂಕ್ತ ತನಿಖೆ ನಡೆಸಿ ಗ್ರಾಹಕರಿಗೆ ಹಣವನ್ನು ಮರಳಿ ಕೋಡಬೇಕೆಂದು ಮನವಿಯಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ನೀತಿನ ರಾಜಪೂತ, ವಿಶಾಲ ವೆರನ್ನವರ, ಕೃಷ್ಣಾ ಅಷ್ಟೇಕರ್ , ಆರ್ ಕೆ. ಪಾಟೀಲ, ಗಜಾನನ ಗುಂಡಕರ್, ಡಿ ದ್ಯಾಮನ್ನವರ, ಡಿ. ಐ ಗಂಗನ್ನವರ ಹಾಗೂ ಉಪಸ್ಥಿತರಿದ್ದರು.

loading...