ಪರಿಸರ ವಿನಾಶಕ ಪ್ಲಾಸ್ಟಿಕ್

0
53

ಪ್ಲಾಸ್ಟಿಕ್ ಒಂದು ಮಾಲಿನ್ಯ ಇತ್ತೀಚೆಗೆ ಒಂದು ಸಮಸ್ಯೆಯಾಗಿದೆ. ಇದಕ್ಕೆ ಮಾನವರೆ ಕಾರಣ. ಪ್ಲಾಸ್ಟಿಕ್ ಇದು ಮಣ್ಣಿನಲ್ಲಿ ನೀರಿನಲ್ಲಿ ಕರಗುವುದಿಲ್ಲ. ಭಾರತ ದೇಶದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದರಲ್ಲಿ ವಿಶ್ವದ ಪ್ರಮುಖ ರಾಷ್ಟ್ತ್ರಗಳಲ್ಲಿ ಒಂದಾಗಿದೆ. ಇದನ್ನು ಮಾನವರೆ ಸೃಷ್ಟಿಸಿಕೊಂಡಿರುವ ಒಂದು ಕೃತಕ ವಸ್ತುವಾಗಿದೆ. ಇದು ನಮ್ಮ ಪರಿಸರಕ್ಕೆ ಹನಿಯನ್ನು ಮಾಡುತ್ತದೆ. ನಮ್ಮನ್ನು ಮತ್ತು ನಮ್ಮ ಪರಿಸರವನ್ನು ಕಾಪಾಡಿಕೊಳ್ಳಲು ನಾನು ಅದನ್ನು ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕಾಗಿರುವುದು ಅತಿ ಅವಶ್ಯಕವಾಗಿದೆ.

ಪುನರ್ ಬಳಕೆಯ ಪ್ಲಾಸ್ಟಿಕ್ ಹಾಳೆ ಚೀಲ ಡಬ್ಬಿಯಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವುದು ಮತ್ತು ಇಪ್ಪತ್ತರಿಂದ ನಾಲ್ವತ್ತು ಮೈಕ್ರಾನ್ಗಳಿಗಿಂತ ತೆಳುವಾದ ಪರಿಶುದ್ಧ ಪುನರ್ ಬಳಕೆ ಪ್ಲಾಸ್ಟಿಕ್ ಕೈಚೀಲ ಉತ್ಪಾದನೆಯಲ್ಲಿ ಕಾನೂನಿನನುಸಾರ ಈಗಾಗಲೇ ನಿಷೇಧಿಸಲ್ಪಟ್ಟಿದೆ.

ನದಿಗೆ ಪ್ಲಾಸ್ಟಿಕ್ ಎಸೆದಾಗ ಅಲ್ಲಿಯ ಜಲಚರಗಳು ಅದನ್ನು ನುಂಗಿ ಅರಗಿಸಿಕೊಳ್ಳಲಾರದೆ ತೊಂದರೆಗೆ ಇಡಾಗುತ್ತವೆ ಹಾಗೂ ಎಮ್ಮೆ ಆಕಳು ಸಾಕು ಪ್ರಾಣಿಗಳು ಸಹ ತಿಂದು ಹೊಟ್ಟೆಯಲ್ಲೇ ಉಳಿದು ನಂತರ ಶಸ್ತ್ತ್ರ ಚಿಕಿತ್ಸೆಗೆ ಒಳಗಾಗಿರುವುದು ನೋಡುತ್ತೇವೆ. ಅಲ್ಲದೇ ಪಕ್ಷಿಗಳು ಸಹ ಅದರಿಂದ ತೊಂದರೆ ಅನುಭವಿಸುತ್ತವೆ. ಸಮುದ್ರದಲ್ಲಿ ಅನೇಕ ಜಲಚರಗಳು ಇಂದು ಅವಸಾನ ಕಾಣುತ್ತಿವೆ.

ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ ಇದನ್ನು ಸುಟ್ಟರೆ ಇದರಿಂದ ಹೊರ ಬರುವ ವಿಷ ಅನಿಲ ನಮ್ಮ ಗಾಳಿಯನ್ನು ಸೇರಿ ವಾಯುಮಾಲಿನ್ಯ ಉಂಟಾಗುತ್ತದೆ ಹಾಗೂ ಮಣ್ಣಿನಲ್ಲಿ ಬಿದ್ದಾಗ ನೀರು ಮಣ್ಣಿನಲ್ಲಿ ಇಂಗಲು ಅಡ್ಡಿ ಮಾಡುತ್ತದೆ. ಕೆರೆ ಬಾವಿಗಳಲ್ಲಿ ಬರುವ ನೀರನ್ನು ತಡೆಗಟ್ಟುತ್ತದೆ ಹಾಗೂ ಮಣ್ಣಿನಲ್ಲಿ ಎರೆಹುಳುಗಳು ತನ್ನ ಸಂತಾನ ಉತ್ಪತ್ತಿ ಕಡಿಮೆ ಆಗುತ್ತದೆ ಹಾಗೂ ಅದು ಮಣ್ಣನ್ನು ತಿಂದು ಮಣ್ಣನ್ನು ಮಲ ವಿಸರ್ಜನೆ ಮಡುವುದರಿಂದ ಅದರ ಫಲವತ್ತತೆ ಕಡಿಮೆ ಆಗುತ್ತಿದೆ. ಮಣ್ಣಿನಲ್ಲಿ ಸಸ್ಯಗಳು ಬೆಳೆಯಲು ಅದರ ಬೇರುಗಳು ದಾಟಿಹೋಗಲು ತುಂಬಾ ಅಡ್ಡಿ ಆಗುತ್ತಿದೆ ಇದು ಹುಲ್ಲಿನಲ್ಲಿ ಸೇರಿದಾಗ ಆವಾಗ ಸಾಕು ಪ್ರಾಣಿಗಳು ಸೇವಿಸಿದಾಗ ದನಕರುಗಳು ಹಾಗೂ ಇತರ ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ. ನಮ್ಮ ನಮ್ಮ ಮನೆ ಮುಂದೆ ಕಾಲುವೆಗಳಲ್ಲಿ ಬಿದ್ದಾಗ ಅಲ್ಲಿ ನೀರು ಸರಾಗವಾಗಿ ಹರಡುವುದಿಲ್ಲ.ಅದಕ್ಕಾಗಿ ಚರಂಡಿಗಳಲ್ಲಿ ಸೇರಿದರೆ ಅಲ್ಲಿಯೆ ನೀರು ನಿಂತರೆ ಸೊಳ್ಳೆಗಳು ಮೊಟ್ಟೆ ಇಡಲು ಅದರಿಂದ ಡೆಂಗೂ ಮಲೇರಿಯಾ ಹರಡುತ್ತದೆ. ಅಲ್ಲದೇ ಅನೇಕ ಕಾಯಿಲೆಗಳು ಬರಲು ಸಾಧ್ಯತೆ ಇರುವುದು ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ಲಾಸ್ಟಿಕದಿಂದ ಲಾಭ ಏನು ಇಲ್ಲ ಕೇವಲ ಅಪಾಯಗಳಿೆ ಇವೇ ಎಂದು ತಿಳಿದು ಬರುತ್ತದೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರಿಂದ ನಾವು ವಾಯು, ಜಲ ಮತ್ತು ನೆಲದಲ್ಲಿ ಮಲಿನಕಾರಕಗಳು ಮತ್ತು ರೋಗಾಣುಗಳ ಮಟ್ಟ ಮಹತ್ತರವಾಗಿ ಕಡಿಮೆಯಾಗುವುದು. ಇದರಿಂದ ಭಯಾನಕ ರೋಗಗಳ ಹರಡುವಿಕೆಯನ್ನು ತಡೆಯಬಹುದಾಗಿದೆ. ನಮ್ಮ ಭೂಮಿ ಮತ್ತು ಪರಿಸರ ರಕ್ಷಿಸಿ ಉಳಿಸಿ ಕೊಳ್ಳುವುದು ಮಾನವರ ಕಡೆಯಲ್ಲಿ ಇದೆ.

ನಾವು ಭೂಮಿಯ ಮೇಲೆ ಒಗೆದ ಪ್ಲಾಸ್ಟಿಕ್ ನೀರು ಇಂಗದೆ ಕೊಳಕಿನ ಕೊಚ್ಚೆ ಗುಂಡಿಯಾಗಿಸಿದರೆ ಅದು ನಾವು  ವಾಸಮಾಡಲಾಗದಷ್ಟು ಮಲಿನಗೊಳ್ಳುತ್ತಿದೆ. ಈಗಲೇ ನಾವು ಜಾಗೃತರಾಗಿ ಪರಿಸರದ ಬಗೆಗೆ ಅರಿತು ಅದರೊಡನೆ ಸಹಕರಿಸಿ ನಡೆದರೆ ಜಗತ್ತು ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಆರೋಗ್ಯಕರವಾದ ಶುಭ್ರ ಸ್ಥಳವಾಗಿ ಉಳಿಯುತ್ತದೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಬದಲಿಗೆ ಬಟ್ಟೆಯಚೀಲ ಹಾಗೂ ಕಾಗದದಿಂದ ತಯಾರಿಸಿದ ಪ್ಯಾಕೇಟ್ ಬಳಸಬೇಕು. ಕಾಗದದಿಂದ ತಯಾರಿಸಿದ ಉತ್ಪನ್ನಗಳನ್ನು ಹೆಚ್ಚಿಸಬೇಕಾದರೆ ಇವುಗಳ ಬಳಕೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಸಂಪೂರ್ಣವಾಗಿ ಬಿಡಬಹುದು.

ಪುನರ್ ಬಳಕೆಯ ಪ್ಲಾಸ್ಟಿಕ್ನಿಂದ ತಯಾರಿಸಿದ ಚೀಲ ಅಥವಾ ಡಬ್ಬಗಳನ್ನು ಆಹಾರ ವಸ್ತುಗಳ ಸಂಗ್ರಹಣೆ ಸಾಗಣೆ ಅಥವಾ ಪ್ಯಾಕ್ ಮಾಡಲು ಬಳಸಬಾರದು. ಹೋಟೆಲ್ ಉದ್ಯಮ ಹಾಗೂ ಆಹಾರ ಪದಾರ್ಥಗಳನ್ನು ಉತ್ಪಾದಕರು ಮಾರಾಟಗಾರರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ತಡೆಯಲು ಒತ್ತಾಯಿಸಬೇಕು. ಪ್ಲಾಸ್ಟಿಕ್ ಸಿಕ್ಕಲ್ಲಿ ಬಿಸಾಡುವುದರ ಬದಲಿಗೆ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು.

ಬೇರೆ ದೇಶಗಳಲ್ಲಿ ಕಾನೂನು ಪಾಲಿಸುತ್ತಾರೆ, ನಮ್ಮ ದೇಶದಲ್ಲಿ ಕಾನೂನು ಪಾಲಿಸಿ ಪರಿಸರ ಪ್ರಜ್ಞೆ ಅರಿತು ನಡೆಯಬೇಕಾದದ್ದೂ ಸಕಲರ ಕರ್ತವ್ಯವಾಗಿದೆ. ಜನರಿಗೆ ಜನ ಜಾಗೃತಿ ಮಾಡಿ ಪ್ಲಾಸ್ಟಿಕ್ ಬಳಸದಂತೆ ಮನವರಿಕೆ ಮಾಡಿ ಪ್ಲಾಸ್ಟಿಕ್ ಮುಕ್ತ ನಾಡು ಮಾಡುವುದು ಸಕಲರ ಕರ್ತವ್ಯವಾಗಿದೆ.

ಭಾರತ ಸಂವಿಧಾನದ ಪ್ರಕಾರ ದೇಶ ಪರಿಸರವನ್ನು ಸಂರಕ್ಷಿಸುವ ಸುಧಾರಿಸುವ ಹಾಗೂ ವನ್ಯಜೀವಿಗಳನ್ನು ಕಾಪಾಡುವುದು ನಮ್ಮ ರಾಷ್ಟ್ತ್ರದ ಹಾಗೂ ನಾಡಿನ ಕರ್ತವ್ಯವಾಗಿದೆ. ಪ್ರಕೃತಿ ಸಹಜವಾದ ಪರಿಸರ ಸಂರಕ್ಷಿಸುವ ಸುಧಾರಿಸುವುದು ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆಯಾಗಿದೆ. ದೇಶದ ಆರೋಗ್ಯದ ಹಿತ ದೃಷ್ಟಿಯಿಂದ ಪರಿಸರವನ್ನು ಸ್ವಚ್ಛವಾಗಿ ಇಡಲು ತನು ಮನದಿಂದ ಮಾಡೋಣ. ಪರಿಸರ ಎಂಬುದು ನಮ್ಮ ಜೀವನದ ಸಂಗಾತಿ ಪರಿಸರ ನಿಮ್ಮಿಂದ ಹೆಚ್ಚಿನದೇನನ್ನು ಬಯಸುವುದಿಲ್ಲ. ಕೇವಲ ರಕ್ಷಣೆ ಅಷ್ಟೆ. ಇಂದು ಪರಿಸರವನ್ನು ಉಳಿಸಿದರೆ ನಾಳೆ ಪರಿಸರ ನಮ್ಮನ್ನು ಉಳಿಸುತ್ತದೆ.

ನಮ್ಮ ಪ್ರಾಪಂಚಿಕ ಸುಖಭೋಗಲಾಲಸೆಯೇ ಈ ಪರಿಸರವನ್ನು ಅನಾಹುತದ ಆಪತ್ತಿನ ಬಳಿಗೆ ಕರೆತಂದಿದೆ. ಇಂಥ ಅಪಾಯವನ್ನು ತಡೆಗಟ್ಟುವ ಪ್ರಯತ್ನ ಮಾಡಲು ನಾವೆಲ್ಲ ಇನ್ನು ಹೆಚ್ಚು ನೈತಿಕವಾಗಿ ಬೌದ್ದಿಕವಾಗಿ ಶಾಶ್ವತ ಚಿಂತನೆ ನಡೆಸಿ ನಮ್ಮ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಎಂ.ವೈ. ಮೆಣಶಿನಕಾಯಿ

                ಬೆಳಗಾವಿ. ಮೊ: 9449209570

 

 

 

 

loading...

LEAVE A REPLY

Please enter your comment!
Please enter your name here