ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ

0
32

ಗದಗ: ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ರೈತರು ಹಲವಾರು ವರ್ಷಗಳಿಂದ ತಮ್ಮ ದಿನನಿತ್ಯದ ಕಾರ್ಯಕೆಲಸಗಳ ಸಲುವಾಗಿ ಹೊಲಗಳಿಗೆ ಕೆಲಸಕ್ಕೆ ಹೋಗಬೇಕಾದರೆ ರೈಲು ಹಳಿಯನ್ನು ದಾಟಿಯೇ ಹೋಗಬೇಕಾಗುತ್ತಿತ್ತು. ಇಲ್ಲಿ ರೈಲು ಹಳಿ ಇರುವದರಿಂದ ರೈತರ ಸುರಕ್ಷತೆ ಕಷ್ಟಕರವಾಗಿತ್ತು, ಎಲ್ಲಾ ರೈತರ ಹಿತದೃಷ್ಟಿಯಿಂದ ಬಳಗಾನೂರು ಲಿಂಗದಾಳ ರಸ್ತೆಗೆ ಇರುವ ರೈಲ್ವೆ ಗೇಟ್À ನಂಬರ್ ೧೦ ರ ಮೆಲುಸೇತುವೆ (ಬ್ರಿÃಡ್ಜ) ಇಲ್ಲವೆ ಕೆಳ ಸೇತುವೆ ಮಾಡಲು ಗ್ರಾಮಸ್ಥರು ಲೋಕಸಭಾ ಚುನಾವಣೆಯ ಮುನ್ನ ಗದಗ ಜಿಲ್ಲಾ ಆಡಳಿತ ಭವನಕ್ಕೆ ಬಹೃತ್ ಪಾದಯಾತ್ರೆಯ ಮೂಲಕ ಬಳಗಾನೂರು ಗ್ರಾಮಸ್ಥರು ತೆರಳಿ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ, ಬಳಗಾನೂರು ಗ್ರಾಮ ಹಿತ ರಕ್ಷಣಾ ಸಮಿತಿಯ ಮುಖಂಡ ಪ್ರೊ.ಹನುಮಂತಗೌಡ ಕಲ್ಮನಿ ಅವರು ಸಮಸ್ತ ಗ್ರಾಮಸ್ಥರೊಂದಿಗೆ ಆಗ್ರಹಿಸಿದ್ದರು.
ಮನವಿ ಸ್ವಿÃಕರಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮರುದಿನವೇ ಗ್ರಾಮಕ್ಕೆ ಬೇಟಿ ನೀಡಿ, ಗ್ರಾಮದ ಸಮಸ್ಯೆಗಳನ್ನು ಮನಗಂಡು ಸ್ಥಳದಲ್ಲಿಯೇ ಕೇಲವು ಸಮಸ್ಯೆಗಳಿಗೆ ಪರಿಹಾರ ನೀಡಿ, ಅವರು ಕೊಟ್ಟು ಮಾತಿನಂತೆ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ, ರೈತರಿಗೆ ಅನುಕೂಲವಾಗುವಂತೆ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಸೂಚಿಸಿ, ಮತ್ತು ಗ್ರಾಮದ ಕುಡಿಯುವ ನೀರಿನ ಕೆರೆ ಹೊಳುತ್ತೆÃಲು ಅನುಮತಿ ನೀಡಿರುವುದು ನಮ್ಮೆಲ್ಲ ಗ್ರಾಮಸ್ಥರಿಗೆ ಸಂತಸವಾಗಿದೆ ಎಂದು ಗ್ರಾಮದ ಹಿರಿಯರು ಮತ್ತು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರೆಲ್ಲರು ಜಿಲ್ಲಾಧಿಕಾರಿಗಳವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

loading...