ಕಾಗದ ಕಾರ್ಖಾನೆಯಿಂದ ಸ್ವಚ್ಚತಾ ಕರ‍್ಯಕ್ರಮ

0
28

 

ದಾಂಡೇಲಿ: ನಗರದ ವೆಸ್ಟ್ಕೊಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ನಗರದ ಸಂಡೆ ಮಾರುಕಟ್ಟೆ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಖಾನೆಯ ಸಾಮಾಜಿಕ ಹೋಣೆಗಾರಿಕೆಯಡಿ ನಿರಂತರವಾಗಿ ದಾಂಡೇಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವ ದಾಂಡೇಲಿ ವೆಸ್ಟ್ಕೊಸ್ಟ್ ಕಾಗದ ಕಾರ್ಖಾನೆಯವರು ನಗರದ ತರಕಾರಿ ಮಾರುಕಟ್ಟೆ ಸಂಡೇ ಮಾರ್ಕೆಟ್ ಭಾಗದಲ್ಲಿನ ಕಸವನ್ನು ಗುಡಿಸುವ ಮೂಲಕ ಈ ಭಾಗದಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿದೆ.
ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಎಸ್.ಜಿ.ಜಾಲಿಹಾಳ, ತಹಶೀಲ್ದಾರ್ ಪಾಟೀಲ, ಪೌರಾಯುಕ್ತ ಡಾ.ಸಯ್ಯದ್ ಜಾಹೇದಾಲಿ, ನಗರಸಭೆಯ ಸದಸ್ಯರಾದ ದಶರಥ ಬಂಡಿವಡ್ಡರ, ನರೇಂದ್ರ ಚವ್ಹಾಣ, ರೋಷನಜಿತ, ಪದ್ಮಾ ಜನ್ನು, ಉದ್ಯಮಿ ರವಿ ಜಿ.ನಾಯಕ, ರಿಯಾಜ ಸಯ್ಯದ, ಸಾರ್ವಜನಿಕರು, ನಗರಸಭೆಯ ಅಧಿಕಾರಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

loading...