‘ಪವರ್’ ಆಟ ನಮ್ಮಿಂದ ಹೊರಹೊಮ್ಮಿಲ್ಲ: ಅಶ್ವಿನ್

0
11

ಮೊಹಾಲಿ:-ಪವರ್ ಪ್ಲೇ ನಲ್ಲಿ ಸಮಯೋಚಿತ ಆಟ ಆಡದೇ ಇರುವುದು ಪ್ಲೇ ಆಫ್ ತಲುಪುವಲ್ಲಿ ವಿಫಲರಾಗಲು ಕಾರಣವಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.‘ ನಿಶ್ಚಿತವಾಗಿ ಈ ಟೂರ್ನಿಯ ಪವರ್ ಪ್ಲೇನ ಲಾಭ ಪಡೆಯುವಲ್ಲಿ ಬ್ಯಾಟ್ಸ್ ಮನ್ ಹಾಗೂ ಬೌಲರ್ ಎಡವಿದ್ದಾರೆ. ಕಳೆದ ವರ್ಷ ಕ್ರಿಸ್ ಗೇಲ್ ಹಾಗೂ ಕೆ.ಎಲ್ ರಾಹುಲ್ ಅವರು ಉತ್ತಮ ಆರಂಭ ನೀಡಿದ್ದರು. ಆದರೆ ಈ ಬಾರಿ ಅವರ ಮೇಲೆ ಒತ್ತಡ ಹೆಚ್ಚಿದ್ದರಿಂದ ನಾವು ಎಡವಿದ್ದೇವೆ’ ಎಂದು ಅಶ್ವಿನ್ ತಿಳಿಸಿದ್ದಾರೆ.ವರುಣ್ ಚಕ್ರವರ್ತಿ ಹಾಗೂ ಮುಜೀಬ್ ಉರ್ ರೆಹಮಾನ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು ತಂಡಕ್ಕೆ ಕಾಡಿತು. ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದೆವು. ಆಟಗಾರರು ಗಾಯಕ್ಕೆ ತುತ್ತಾಗಿದ್ದು ತಂಡಕ್ಕೆ ಪೆಟ್ಟು ಬಿದ್ದಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿದೇಶಿ ಆಟಗಾರರು ಉತ್ತಮವಾಗಿ ಆಡಿದ್ದಾರೆ. ಕಳೆದ ಬಾರಿ ಆಂಡ್ರಿ ಟೈ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿ ವಿಶ್ವಾಸ ಮೂಡಿಸಿದ್ದರು. ಅವರು ಈ ಬಾರಿಯೂ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಶುಕ್ರವಾರ ರಾತ್ರಿ ಮೊಹಾಲಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿ, ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

loading...