ಬಸವ ಜಯಂತಿ ಸಂಭ್ರಮದಿಂದ ಆಚರಿಸಲು ನಿರ್ಧಾರ

0
32

ಗದಗ: ನಗರದ ಶ್ರಿÃ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಪ್ರಕಾಶದಲ್ಲಿ ಪೂಜ್ಯ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯದಲ್ಲಿ ಬಸವ ಜಯಂತಿಯನ್ನು ಎಲ್ಲ ಬಸವಾದಿ ಶರಣರ ವಿವಿಧ ಸಂಘಟನೆಗಳು ಸೇರಿ ಅದ್ದೂರಿ ಆಚರಣೆ ಮಾಡಲು ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಬಸವ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಮೇ. ೭ ರಂದು ಮಂಗಳವಾರ ಮುಂಜಾನೆ ೯ಕ್ಕೆ ಪೂಜ್ಯ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮೆರವಣಿಗೆಯನ್ನು ಉದ್ಘಾಟಿಸಲಿದ್ದು ಶ್ರಿÃಮಠದಿಂದ ಬಸವಾದಿ ಶರಣರ ಭಾವಚಿತ್ರಗಳೊಂದಿಗೆ ಮೆರವಣಿಗೆ ಹೊರಟು ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತದ ಮೂಲಕ ಮರಳಿ ಶ್ರಿÃಮಠಕ್ಕೆ ಆಗಮಿಸಲಿದೆ. ನಂತರ ವಿಶೇಷ ಉಪನ್ಯಾಸ ಜರುಗಲಿದೆ. ಕಾರ್ಯಕ್ರಮ ಕುರಿತಾಗಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತಲ್ಲದೆ ಮೇ. ೬ ರಂದು ಬಸವರಾಜ ಮನಗುಂಡಿ ಅವರ ನೇತೃತ್ವದಲ್ಲಿ ಮುಂಜಾನೆ ೯ಕ್ಕೆ ಭೀಷ್ಮಕೆರೆಯ ಬಸವಣ್ಣನವರ ಪುತ್ಥಳಿಯ ಸ್ಥಳದಿಂದ ಆರಂಭಗೊಂಡು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಬಸವ ಜಯಂತಿಯ ಕುರಿತು ಜನಜಾಗೃತಿಯನ್ನು ಮೂಡಿಸಲು ವಿವಿಧ ಸಮಾಜದ ಯುವಕರು ಪಾಲ್ಗೊಳ್ಳಲಿದ್ದಾರೆ. ಮಲ್ಲಿಕಾರ್ಜುನ ಐಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಶರಣ ಹಡಪದ, ಶಿವಮೂರ್ತಪ್ಪ ಅಗಸಿಮನಿ, ಬಿ.ಎನ್.ಯರನಾಳ, ಎಸ್.ಎನ್.ಬಳ್ಳಾರಿ, ವಿ.ಕೆ.ಕರಿಗೌಡ್ರ, ಶಿವಲೀಲಾ ಅಕ್ಕಿ, ಶೇಖಣ್ಣ ಕವಳಿಕಾಯಿ, ವಿರುಪಾಕ್ಷಪ್ಪ ಬಳ್ಳೊಳ್ಳಿ, ಅಂಬರೀಶ ಅಂಗಡಿ ಇದ್ದರು.
ಸಭೆಯಲ್ಲಿ ಕೊಟ್ರೆÃಶ ಮೆಣಸಿನಕಾಯಿ, ಬಸವರಾಜ ಬಿಂಗಿ, ಪ್ರಭು ಹಿರೇಮಠ, ದಾನಯ್ಯ ಗಣಾಚಾರಿ, ಸಿದ್ಧರಾಮ ಪಟ್ಟೆÃದ, ಗುರು ತಿರ್ಲಾಪೂರ, ಗೌರಕ್ಕ ಬಡಿಗಣ್ಣವರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ನೀಲಲೋಚನಾ ಹಂಚಿನಾಳ, ವಿಜಯಲಕ್ಷಿö್ಮ ಮಾನ್ವಿ ಇದ್ದರು. ವಚನ ಪ್ರಾರ್ಥನೆಯನ್ನು ಮಂಜುಳಾ ಹಾಸಲೇಕರ ಮಾಡಿದರು. ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ಸಂಗಮೇಶ ದುಂದೂರ ವಂದಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು.

loading...