ಕ್ಷÄಲ್ಲಕ ಕಾರಣಕ್ಕೆ ವಿಚ್ಛೆÃದನ ಸಲ್ಲ: ಕೊಟ್ಟೂರೇಶ್ವರ ಶ್ರಿÃಗಳು

0
62

ಗದಗ: ಇಂದಿನ ದ್ವಂದಾತೀತ ಜೀವನ ಶೈಲಿಯಿಂದ ಹಲವು ಕ್ಷÄಲಕ ಕಾರಣಕ್ಕೆ ಅನೇಕ ದಂಪತಿಗಳು ವಿಚ್ಛೆÃಧನ ಹಂತದವರೆಗೂ ತಲುಪುತ್ತಿರುವುದು ವಿಷಾಧನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಶ್ರಿÃಗಳು ಹೇಳಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅಲ್ಲಮಪ್ರಭುದೇವರ ಮಠದಲ್ಲಿ ಲಿಂಗೈಕ್ಯ ಬಸವರಾಜ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ಅಲ್ಲಮಪ್ರಭುದೇವರ ಮಠದ ರಥೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು ಮದುವೆ ಆಗುವ ಸಂದರ್ಭದಲ್ಲಿ ಅತ್ಯಂತ ಪ್ರಿÃತಿ ಪ್ರೆÃಮದ ಇರುವಂತ ದಂಪತಿಗಳು ಕೆಲವೇ ತಿಂಗಳಲ್ಲಿ ವಿಚ್ಛೆÃಧನ ಮಾಡಿಕೊಳ್ಳುವ ಹಂತ ತಲುಪಿತ್ತಿರುವುದು ವಿಷಾಧದ ಸಂಗತಿ. ಈ ದಿಸೆಯಲ್ಲಿ ವಧು ವರರು ಕೇವಲ ದೈಹಿಕ ಆಕರ್ಷಣೆಗೆ ಒಳಗಾಗಿ ಮದುವೆಯನ್ನು ಮಾಡಿಕೊಳ್ಳದೇ ಪರಸ್ಪರ ಒಬ್ಬರನ್ನೊಬ್ಬರ ಅರ್ಥೈಸಿಕೊಂಡು ಜೀವನ ಸಾಗಿಸಬೇಕು. ತಮ್ಮ ಬಾಳಿನ ಸಂಗಾತಿಯನ್ನು ಒಮ್ಮೆ ಮದುವೆಯಾದ ಮೇಲೆ ಈ ಉಸಿರು ಇರುವರೆಗೂ ಕೈ ಬಿಡಬಾರದು ಅಂದಾಗ ಮಾತ್ರ ಇಂತಹ ಆಧ್ಯಾತ್ಮಿಕ ವೇದಿಕೆಯಲ್ಲಿ ಮದುವೆಯಾಗಿರುವದಕ್ಕೆ ಅರ್ಥ ಬರುತ್ತದೆ.
ತಮ್ಮ ನೂತನ ದಾಂಪತ್ಯ ಜೀವನ ಸುಖಮಯವಾಗಿರಬೇಕಾದರೆ ಮಠ ಮಂದಿರಗಳಲ್ಲಿ ಜರುಗುವ ಹಲವಾರು ಆಧ್ಯಾತ್ಮಿಕ ಪುರಾಣ ಪುಣ್ಯ ಕಥೆಗಳನ್ನು ಆಲಿಸಬೇಕು ಅವುಗಳಲ್ಲಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಣ್ಣ ವಿಷಯವನ್ನು ಗುಡ್ಡ ಮಾಡದೇ ಅಲ್ಲಿಯೇ ಚಿವುಟಿ ಹಾಕಿ ಎರಡು ಹೃದಯಗಳು ಹೊಂದಾಗಬೇಕು ಎಂದ ಅವರು ಶ್ರಿÃ ಮಠಕ್ಕೆ ಗ್ರಾಮದ ಭಕ್ತರು ತಮ್ಮ ದುಡಿಮೆಯ ಶೇ ೧೦ ರಷ್ಟು ಶ್ರಿÃ ಮಠಕ್ಕೆ ದೇಣೆಗೆ ನೀಡಿ ಅಭಿವೃದ್ಧಿಗೆ ಸಹಕರಿಸಿ ಪುಣ್ಯವಂತರಾಗಬೇಕು ಎಂದರು. ಮದುವೆ ಶಾಸ್ತçವನ್ನು ನೆರವೇರಿಸಿದ ಶಂಕ್ರಯ್ಯ ಶಾಸ್ತಿçಗಳು ಹಿರೇಮಠ ಅವರು ಮಾತನಾಡಿ ನೂತನ ದಂಪತಿಗಳು ತಮ್ಮ ದಾಂಪತ್ಯ ಜೀವನದ ರಹಸ್ಯಗಳನ್ನು ತಮ್ಮ ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಕುತ್ತಿಗೆಗೆ ತಾಳಿ ಕಟ್ಟಿದ ಮೇಲೆ ಯಾವುದೇ ದಾಂಪತ್ಯದ ಕಹಿ ವಿಷಯಗಳು ಕುತ್ತಿಗೆ ಮೇಲೆ ಬರಬಾರದು. ಅವುಗಳನ್ನು ಪರಸ್ಪರ ತಾಳ್ಮೆಯಿಂದ ಬಗೆಹರಿಸಿಕೊಂಡು ಮುನ್ನೆಡೆಯಬೇಕು ಅಂದಾಗ ಮಾತ್ರ ತಾಳಿ ಕಟ್ಟಿದ್ದಕ್ಕೆ ಮತ್ತು ಕಟ್ಟಿಸಿಕೊಂಡಿದ್ದಕ್ಕೆ ಬೆಲೆ ಬರುತ್ತದೆ ಎಂದು ಕಿವಿ ಮಾತು ಹೇಳಿದರು.
ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಟು ಜೋಡಿಗಳ ವಿವಾಹ ನಡೆಯಿತು.

loading...