ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

0
25

ವಿಜಯಪುರ : ಬಡ ಹಾಗೂ ಅನಾಥ, ವಿಧವಾ ಮಹಿಳೆಯರನ್ನು ಗುರುತಿಸಿ ಅವರಿಗೆ ಹೊಲಿಗೆ ತರಬೇತಿ ನೀಡಿ ಹಾಗೂ ಅವರು ಜೀವನ ರೂಪಿಸಿಕೊಳ್ಳಲು ಉಚಿತವಾಗಿ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮ ನಡೆಯಿತು.
ವಿಜಯಪುರದ ಎಆರ್‌ಎಸ್ ಇನಾಮದಾರ ಮಹಿಳಾ ಮಹಾವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ವತಿಯಿಂದ ಸಂಘಟಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ೨೩ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಳೆದ ೧೪ ವರ್ಷಗಳಿಂದ ಈ ಮಹತ್ವದ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷವೂ ಸಹ ನಗರದ ಗಣ್ಯರು, ದಾನಿಗಳಿಂದ ಸಂಗ್ರಹವಾದ ೧.೫೦ ಲಕ್ಷ ರೂ.ಗಳಲ್ಲಿ ೨೩ ಹೊಲಿಗೆ ಯಂತ್ರಗಳನ್ನು ತರಬೇತಿ ಪಡೆದ ಕಡುಬಡವ ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಯಿತು. ೨೦೦೫ ರಿಂದ ಆರಂಭಗೊಂಡಿರುವ ಈ ಅಭಿಯಾನದಲ್ಲಿ ಇಲ್ಲಿಯವರೆಗೆ ೩೨೦ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿ ಸುಮಾರು ೨೦೦ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ.

ಸಿಕ್ಯಾಬ್ ಮಹಿಳಾ ಮಹಾವಿದ್ಯಾಲಯದ ಆಡಳಿತಮಂಡಳಿ ಅಧ್ಯಕ್ಷ ಡಾ.ರಿಯಾಜ್ ಫಾರೂಕಿ, ವಿಶ್ರಾಂತ ಪ್ರಾಚಾರ್ಯ ಎ.ಎಂ. ಬಗಲಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಸ್.ಎ.ಪುಣೇಕರ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ಡಾ.ಮೊಹ್ಮದ್ ಅಫ್ಜಲ್, ಗೃಹವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಜೊಹರಾ ತಬಸ್ಸುಮ್ ಖಾಜಿ, ನಜೀಬ್ ಭಕ್ಷಿ, ಪ್ರೊ.ರಿಜ್ವಾನ್, ಪ್ರೊ.ಖತೀಬ್, ಪ್ರೊ.ಶಾಕಿರಾಶೇಖ್, ಡಾ.ಎಂ.ಎ.ಲಿಂಗಸೂರ, ಪ್ರೊ.ಚಿದಾನಂದ, ಪ್ರೊ.ಗಂಗಾಧರ ಭಟ್, ಪ್ರೊ.ಖಾದ್ರಿ, ಪ್ರೊ.ಎಚ್.ಕೆ.ಯಡಹಳ್ಳಿ, ಪ್ರೊ.ರಿಸಾಲ್ದಾರ ಉಪಸ್ಥಿತರಿದ್ದರು.

ತರಬೇತಿ ಪಡೆದ ಕು.ಯಾಸ್ಮಿನ್, ಕು.ಸಾನಿಯಾ ಮುಲ್ಲಾ ಮೊದಲಾದವರು ಅನಿಸಿಕೆ ಹಂಚಿಕೊಂಡರು. ಕು.ಮಹಮ್ಮದಿ ವಂದಿಸಿದರು.

loading...