ಫಲಿತಾಂಶ ಸುಧಾರಣೆಗೆ ಡಿಡಿಪಿಐ ಕ್ರಮ

0
70

ಗದಗ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಂದಿದ್ದು ರಾಜ್ಯಕ್ಕೆ ೩೧ನೇ ಸ್ಥಾನ ಪಡೆದು ಸರಾಸರಿ ೭೪.೮೪% ರಷ್ಟು ಮಕ್ಕಳು ಉತ್ತಿÃರ್ಣರಾಗಿರುತ್ತಾರೆ. ಒಟ್ಟು ಪರೀಕ್ಷೆಗೆ ಹಾಜರಾದವರು-೧೨೮೮೮, ಪಾಸಾದವರು-೯೬೪೫. ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ಶಿಕ್ಷಣ ಮತ್ತು ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ೨೦ ಅಂಶಗಳ ಕಾರ್ಯಕ್ರಮವನ್ನು ವರ್ಷಾರಂಭದಿಂದಲೇ ಪ್ರಾರಂಭಿಸಿ ಜಿಲ್ಲೆಯ ಉತ್ತಮ ಫಲಿತಾಂಶ ತರುವಲ್ಲಿ ಪಾಲಕರ ಸಹಕಾರ ಪಡೆದು ಎಲ್ಲ ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಗದಗ ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಜೂನ್ ೨ನೇ ವಾರ ತಾಲೂಕಾವಾರು ಪ್ರೌಢಶಾಲಾ ಸಹ ಶಿಕ್ಷಕರಿಗೆ ಪ್ರೆÃರಣಾ ಶಿಬಿರ ಏರ್ಪಡಿಸಿ ತಮ್ಮ ಶಾಲೆಗಳ ವಿಷಯವಾರು ಫಲಿತಾಂಶವನ್ನು ಸುಧಾರಿಸುವಲ್ಲಿ ಸಲಹೆ ಸೂಚನೆ ನೀಡಲಾಗುವುದು. ಜೂನ್ ಕೊನೆಯ ವಾರದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಕರೆದು ತಮ್ಮ ಮಕ್ಕಳ ಅಭ್ಯಾಸಕ್ಕಾಗಿ ಪೂರಕ ಉತ್ತಮ ಪರಿಸರ ಒದಗಿಸುವ ಮತ್ತು ಕಾಳಜಿ ಮಾಡುವ ಕುರಿತು ತಿಳಿಸಲಾಗುವುದು. ಪ್ರೌಢಶಾಲೆಯ ೮. ೯ ಹಾಗೂ ೧೦ನೇ ತರಗತಿ ಮಕ್ಕಳಿಗೆ ಸೇತುಬಂಧ ನಡೆಸಿ ಕಲಿಕಾ ಆಧಾರದ ಮೇಲೆ ಮೂರು ಗುಂಪುಗಳನ್ನು ಮಾಡಲಾಗುವುದು, ಸದರಿ ಗುಂಪುಗಳಿಗೆ ಎ, ಬಿ, ಸಿ ಎಂದು ಗುರುತಿಸಲಾಗುವುದು. “ಸಿ” ಗುಂಪಿನಲ್ಲಿ ಬಂದ ಮಕ್ಕಳಿಗೆ ವಿಶೇಷ ಆಧ್ಯತೆ ನೀಡಿ ಪೂರಕ ಬೋಧನೆ ಮಾಡಲಾಗುವುದು ಎಂದಿದ್ದಾರೆ. ಸಮೀಪದ ೪-೫ ಪ್ರೌಢ ಶಾಲೆಗಳ ಮಕ್ಕಳನ್ನು ಪ್ರತಿ ೧೫ ದಿನಕ್ಕೆ ಒಟ್ಟಿಗೆ ಸೇರಿಸಿ ಒಂದು ಸಲ ಪಿಕನಿಕ್ ಪಝಲ್ ಮಾಡಿಸಲಾಗುವುದು. ಇಲ್ಲಿ ಎಲ್ಲ ವಿಷಯಗಳನ್ನು ಗುಂಪು ಮಾಡಿ ಮಕ್ಕಳು ಮುಕ್ತವಾಗಿ ತಮ್ಮ ಕೊರತೆಗಳನ್ನು ಗುಂಪಿನಲ್ಲಿ ಹಂಚಿಕೊಂಡು ಸ್ವ-ಕಲಿಕೆ ಮಾಡುವರು, ಈ ಕುರಿತು ವಿಷಯ ಶಿಕ್ಷಕರು ಮಾರ್ಗದರ್ಶನ ನೀಡುವರು. ಪ್ರತಿ ೨ ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲಿ,್ಲ ಪ್ರತಿ ತಿಂಗಳು ಪ್ರೌಢಶಾಲಾ ಮುಖ್ಯ ಗುರುಗಳ ಸಭೆಯನ್ನು ಕರೆದು ಹಿಂದಿನ ತಿಂಗಳಿನಲ್ಲಿ ನಡೆಸಿದ ಸಭೆಯ ಅಂಶಗಳಿಗೆ ಅನುಪಾಲನೆ ಮತ್ತು ಪ್ರಸಕ್ತ ತಿಂಗಳಲ್ಲಿ ಆಗಬೇಕಾದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.
ಕಲಿಕೆಯಲ್ಲಿ ಹಿಂದುಳಿದ ಎಸ್.ಎಸ್.ಎಲ್.ಸಿ. ಮಕ್ಕಳ ಪಾಲಕರ ಮನೆಗಳಿಗೆ ಭೇಟಿ ನೀಡಿ ಅವರಿಗಿರುವ ಕಲಿಕಾ ತೊಂದರೆಗಳ ಬಗ್ಗೆ ಸಮಾಲೋಚಿಸಿ ಉತ್ತಮ ಕಲಿಕಾ ಪರಿಸರ ಒದಗಿಸಲು ತಿಳಿಸುವುದು. ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿÃಷ, ಹಿಂದಿ ವ್ಯಾಕರಣ ಬೋಧನೆಗೆ ವಾರದಲ್ಲಿ ಒಂದು ದಿನ ಮೀಸಲಿಟ್ಟು ಬೋಧಿಸಲು ತಿಳಿಸಲಾಗುವುದು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ಪ್ರಮೇಯಗಳು, ಗ್ರಾಫ್‌ಗಳು, ಸಮೀಕರಣಗಳ ಬಗ್ಗೆ ಮತ್ತು ವಿಜ್ಞಾನದ ಚಿತ್ರಗಳು, ಸಮಾಜ ವಿಜ್ಞಾನದ ನಕಾಶೆಗಳ ರೂಢಿಗಾಗಿ ವಾರದಲ್ಲಿ ಒಂದು ದಿನ ಮೀಸಲಿರಿಸಿ ವಿಷಯ ಶಿಕ್ಷಕರು ರೂಢಿ ಮಾಡಿಸಲು ತಿಳಿಸಲಾಗುವುದು. ಶೇಕಡಾ ೮೦ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಪ್ರೌಢ ಶಾಲೆಗಳಿಗೆ ೨೦೧೯ರ ಫಲಿತಾಂಶವನ್ನು ಆಧರಿಸಿ ಶೇಕಡಾ ೫ ರಿಂದ ೧೦ ರಷ್ಟು ಫಲಿತಾಂಶ ಹೆಚ್ಚಿಸಲು ಗುರಿ ನೀಡಲಾಗುವುದು. ೨೦೧೯ರ ಜಿಲ್ಲೆಯ ಫಲಿತಾಂಶ ೭೪.೮೪% ಇದ್ದು ಕನಿಷ್ಠ ೫% ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಎಲ್ಲ ಅಧಿಕಾರಿಗಳು, ಶಿಕ್ಷಕರು ಜೂನ್ ತಿಂಗಳಿನಿಂದಲೇ ಮಾಡಲಾಗುವುದು. ರಾಜ್ಯಕ್ಕೆ ೨೦ ರಿಂದ ೨೫ನೇ ರ‍್ಯಾಂಕ್ ಪಡೆಯಲು ಗುರಿ ನಿಗಧಿ ಮಾಡಿಕೊಳ್ಳಲಾಗಿದೆ. ತಾಲೂಕಾ ಹಂತದಲ್ಲಿ ವಿಷಯ ಶಿಕ್ಷಕರ ಪರಿವಾರದಡಿಯಲ್ಲಿ ಜುಲೈ-೨೦೧೯ ರಿಂದ ಪ್ರತಿ ತಿಂಗಳು ೨ ಮತ್ತು ೪ನೇ ಶನಿವಾರ ಮಾಸಿಕ ಸಮಾಲೋಚನಾ ಸಭೆ ನಡೆಸಿ ಬೋಧನಾ ವಿಷಯದ ತೊಡಕುಗಳನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

loading...