ವರ್ಷಕ್ಕೆ ಎರಡು ಬಾರಿ ಶಿವಾಜಿ ಜಯಂತೋತ್ಸವ ಆಚರಿಸುವ ಪರಂಪರೆ

0
52

 

ಹಳಿಯಾಳ: ಈ ಭಾಗದ ಬಹುಸಂಖ್ಯಾತ ಮರಾಠಾ ಸಮುದಾಯದ ಆರಾಧ್ಯ ದೈವ ಹಾಗೂ ಸರ್ವ ಸಮಾಜದವರ ಅಭಿಮಾನದ ರಾಜರಾಗಿರುವ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವವನ್ನು ವರ್ಷಕ್ಕೆ ಎರಡೆರಡು ಬಾರಿ ಆಚರಿಸುವ ಪರಂಪರೆ ಮುಂದುವರಿದಿದೆ.
ಸಾಂಪ್ರದಾಯಿಕವಾಗಿ ತಿಥಿಯನುಸಾರವಾಗಿ ಒಂದು ಸಲ ಹಾಗೂ ಕರ್ನಾಟಕ/ಮಹಾರಾಷ್ಟç ಸರಕಾರಗಳು ಘೋಷಿಸಿದಂತೆ ತಾರೀಖಿನ ಅನುಸಾರವಾಗಿಯೂ ಸಹ ಮತ್ತೊಂದು ಸಲ ಶಿವಾಜಿ ಜನ್ಮದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸ ಶುಕ್ಲಪಕ್ಷದ ದ್ವಿತೀಯದಂದು ಪರಂಪರಾಗತವಾಗಿ ಶಿವಾಜಿ ಜಯಂತಿ ತಿಥಿ ಅನುಸಾರವಾಗಿ ಆಚರಿಸುವ ಅಭಿಮಾನಿಗಳು ರಾಜ್ಯದಲ್ಲಿ ಭಾರತೀಯ ಜನತಾಪಕ್ಷದ ಸರಕಾರವಿದ್ದಾಗ ಸರಕಾರದ ವತಿಯಿಂದ ಆಚರಿಸಲು ಫೆ. ೧೯ ರಂದು ದಿನಾಂಕ ನಿಗದಿಪಡಿಸದಂತೆ ಅಂದಿಗೂ ಸಹ ಆಚರಿಸುತ್ತಾರೆ. ಶಿವಾಜಿ ಜಯಂತಿಯನ್ನು ಆಚರಿಸುವ ದಿನಾಂಕದ ಬಗ್ಗೆ ಪಕ್ಕದ ಮಹಾರಾಷ್ಟç ರಾಜ್ಯದಲ್ಲಿ ಸಾಕಷ್ಟು ಚಿಂತನಮಂಥನಗಳು ನಡೆದು ಅಂತಿಮವಾಗಿ ಫೆ. ೧೯ ಎಂದು ಏಕಾಭಿಪ್ರಾಯಕ್ಕೆ ಬರಲಾಗಿತ್ತು. ಆದರೆ ಬಹು ಹಿಂದಿನಿಂದ ಶಿವಾಜಿ ಜನ್ಮದಿನೋತ್ಸವವನ್ನು ವೈಶಾಖ ಮಾಸ ಶುಕ್ಲಪಕ್ಷದ ದ್ವಿತೀಯದಂದು ಆಚರಿಸುತ್ತಾ ಬಂದಿರುವುದನ್ನು ಯಾರೂ ಸಹ ಮೊಟಕುಗೊಳಿಸಲಿಲ್ಲ. ಹೀಗಾಗಿ ಶಿವಾಜಿ ಮಹಾರಾಜರು ವರ್ಷಕ್ಕೆರಡು ಬಾರಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳಿಂದ ಆಚರಿಸಲ್ಪಡುತ್ತಾರೆ.

ತಾಲೂಕಾ ಕೇಂದ್ರದ ಹಳಿಯಾಳ ಪಟ್ಟಣದಿಂದ ಹಾಯ್ದುಹೋಗುವ ಎರಡು ಹೆದ್ದಾರಿಗಳು ಸಂಧಿಸುವ ಮತ್ತು ವಿವಿಧ ಪ್ರಮುಖ ಇಲಾಖೆಗಳ ಕಾರ್ಯಾಲಯಗಳು ಇರುವ ಮುಖ್ಯವೃತ್ತದಲ್ಲಿ ಅಶ್ವಾರೂಢ ಶಿವಾಜಿ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಹಾಗೂ ಐತಿಹಾಸಿಕ ಕೋಟೆ ಎದುರು, ಮಾತ್ರವಲ್ಲದೇ ಗುತ್ತಿಗೇರಿಗಲ್ಲಿ, ದೇಸಾಯಿಗಲ್ಲಿ, ತಾನಾಜಿಗಲ್ಲಿ ಮೊದಲಾದ ಕಡೆಗಳಲ್ಲಿ ಈಗಾಗಲೇ ಕಟ್ಟಿಗೆಯಿಂದ ತಯಾರಿಸಲಾದ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಗಳನ್ನು ಇರಿಸಲಾಗಿದೆ. ಈ ವರ್ಷದ ಶಿವಾಜಿ ಜಯಂತಿಯಂದು ಗೋಂಧಳಿಗಲ್ಲಿ/ ಗೌಳಿಗಲ್ಲಿ ಪ್ರದೇಶದಲ್ಲಿ ಶಿವಾಜಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ತಾಲೂಕಿನ ತೇರಗಾಂವ, ನಾಗಶೆಟ್ಟಿಕೊಪ್ಪ, ಮುಂಡವಾಡ ಮೊದಲಾದ ಹಲವಾರು ಹಳ್ಳಿಗಳಲ್ಲಿ ಅಶ್ವಾರೂಢ ಶಿವಾಜಿ ಪುತ್ಥಳಿಗಳಿವೆ. ಪಕ್ಕದ ನೂತನ ತಾಲೂಕು ಕೇಂದ್ರವಾದ ದಾಂಡೇಲಿ ನಗರದಲ್ಲಿ, ಜೋಯಿಡಾ ತಾಲೂಕಿನ ರಾಮನಗರದಲ್ಲಿಯೂ ಸಹ ಆಳೆತ್ತರದ ಅಶ್ವಾರೂಢ ಶಿವಾಜಿ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ಸಂಸ್ಥಾಪಕರಾದರೂ ಸಹ ಸರ್ವ ಸಮಾಜದವರಿಂದ ಗೌರವಕ್ಕೆ ಪಾತ್ರರಾದ ಮಹಾನ್ ವ್ಯಕ್ತಿತ್ವದ ವ್ಯಕ್ತಿಯೆಂದು ಇತಿಹಾಸದ ದಾಖಲೆಗಳಿಂದ ತಿಳಿಯಲ್ಪಡುತ್ತದೆ. ‘ಸ್ವಧರ್ಮ ನಿಷ್ಠೆ’ ಹಾಗೂ ‘ಪರಧರ್ಮ ಸಹಿಷ್ಣುತೆ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹಾನ್ ಚೇತನ ಜೀಜಾಮಾತೆಯ ಪುತ್ರ ಶಿವಾಜಿ.

-: ರಕ್ತದಾನ ಶಿಬಿರ :-
ಶ್ರಿÃ ಶಿವಾಜಿ ಮಹಾರಾಜರ ಜಯಂತೋತ್ಸವವನ್ನು ಅರ್ಥಪೂರ್ಣವನ್ನಾಗಿ ಆಚರಿಸುವ ಸದುದ್ದೆÃಶದಿಂದ ಪ್ರಪ್ರಥಮ ಬಾರಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹಳಿಯಾಳ ಪಟ್ಟಣದ ಗುತ್ತಿಗೇರಿಗಲ್ಲಿಯ ಶ್ರಿÃ ಶಿವಾಜಿ ಯುವಕ ಮಂಡಳದ ವತಿಯಿಂದ ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಬಾಲ ಶಿವಾಜಿಗೆ ತೊಟ್ಟಿಲಲ್ಲಿ ಹಾಕುವುದು ಹಾಗೂ ನಾಮಕರಣವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಬೆಳಿಗ್ಗೆ ೯ ಗಂಟೆಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ೩ ಗಂಟೆಯಿಂದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮರುದಿನ ಮಧ್ಯಾಹ್ನ ೩ ಗಂಟೆಯಿಂದ ಶಿವಾಜಿ ಮಹಾರಾಜರ ಪ್ರತಿಮೆಯೊಂದಿಗೆ ಬೃಹತ್ ಮೆರವಣಿಗೆ ನೆರವೇರಲಿದೆ ಎಂದು ಮಂಡಳದ ಅಧ್ಯಕ್ಷ ತುಕಾರಾಮ ಪಟ್ಟೆÃಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...