ಮಾವಿನಹಣ್ಣಿನ ಮಾರಾಟದ ಹಂಗಾಮು ಆರಂಭ

0
33

 

ಹಳಿಯಾಳ: ಪ್ರಸಕ್ತ ವರ್ಷ ಮಾವಿನ ಫಸಲಿನ ತೀರಾ ಕೊರತೆಯ ನಡುವೆ ಮಾವಿನಹಣ್ಣಿನ ಮಾರಾಟದ ಹಂಗಾಮು ಆರಂಭಗೊಂಡಿದೆ.
ಮಾವಿನಹಣ್ಣು ಇದು ೨ ವರ್ಷಕ್ಕೊಮ್ಮೆ ಭರಪೂರ ಫಲ ನೀಡುವ ಹಣ್ಣು ಆಗಿದ್ದು ಈ ವರ್ಷ ಕೊರತೆಯ ವರ್ಷವಾಗಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಬೀಸಿದ ವೇಗದ ಗಾಳಿಗೆ ಕಟಾವಿಗೆ ಬಂದಿದ್ದ ಮಾವಿನ ಫಸಲು ತೊಟ್ಟನ್ನು ಕಳಚಿ ನೆಲಕ್ಕುರುಳಿದ್ದು ಮಾವಿನ ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ.

ಮಾರುಕಟ್ಟೆಯಲ್ಲಿ ತಾಳಿಕೆ ಬರುವ ಆಪೂಸ್ ಮಾವು ಪ್ರತಿ ಡಜನ್‌ಗೆ ೧೮೦ ರಿಂದ ೨೫೦ ರೂ. ದರದಂತೆ ಮಾರಾಟವಾಗುತ್ತಿವೆ. ಉಳಿದಂತೆ ಕಡಿಮೆ ತಾಳಿಕೆ ಬರುವ ಹಾಗೂ ನಾರುಗಳು ಹೆಚ್ಚಿಗಿರುವ ಪೈರಿ, ಜವಾರಿ ಮಾವಿನಹಣ್ಣುಗಳು ೧೨೦ ರಿಂದ ೧೫೦ ರೂ. ಗಳವರೆಗೆ ಪ್ರತಿ ಡಜನ್‌ಗೆ ಬಿಕರಿಯಾಗುತ್ತಿವೆ.
ಪ್ರಸಕ್ತ ವರ್ಷ ಮಾವಿನ ಹಂಗಾಮಿನಲ್ಲಿ ಹಣ್ಣುಗಳ ಪ್ರಮಾಣ ಹಾಗೂ ರುಚಿಯಲ್ಲಿ ಕೊರತೆಯಿರುವದರಿಂದ ಮತ್ತು ದರದಲ್ಲಿ ತುಸು ಏರಿಕೆ ಕಂಡು ಬಂದಿರುವುದರಿಂದ ಮಾವು ಪ್ರಿಯರು ನಿರಾಸೆಯಿಂದ ಮಾವಿನಹಣ್ಣು ಖರೀದಿಸುತ್ತಿರುವುದು ಕಂಡು ಬರುತ್ತಿದೆ.

loading...