ನದಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯ

0
21

ಬನಹಟ್ಟಿ : ನದಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಎಂದು ಸ್ವದೇಶಿ ಜಾಗರಣೆ ವೇದಿಕೆಯ ಸದಸ್ಯ ಶಿವಾನಂದ ಗಾಯಕವಾಡ ಹೇಳಿದರು.
ಅವರು ರಬಕವಿ-ಮಹಿಷವಾಡಗಿ ಬ್ಯಾರೇಜ್ ಸಮೀಪದ ಕೃಷ್ಣಾ ನದಿ ತಟ ಸ್ವಚ್ಛತಾ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಸ್ವಚ್ಛವಾದ ನೀರು ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ ಮಂಚ ವತಿಯಿಂದ ನದಿ ತೀರ ಸಂಕಲ್ಪದೊಂದಿಗೆ ಸ್ವಚ್ಛತೆ ಕರ‍್ಯ ಪ್ರಾರಂಭಿಸಿದ್ದೆÃವೆ. ನಮ್ಮ ಈ ಕರ‍್ಯಕ್ಕೆ ಸ್ವಯಂ ಪ್ರೆÃರಣೆಯಿಂದ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ, ಚಿಮ್ಮಡ, ಮಹಾಲಿಂಗಪುರ ಸೇರಿದಂತೆ ಸುತ್ತಮೂತ್ತಲೀನಿಂದ ಸಾಕಷ್ಟು ತರುಣರು ಹಾಗೂ ಮಹಿಳೆಯರು ಕೈ ಜೋಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಚ್ಛ ಬಾರತ ಅಭಿಯಾನದ ಸದಸ್ಯೆ ರಬಕವಿಯ ಡಾ. ಅನಂತಮತಿ ಯಂಡೋಳಿ, ನೀರು ನಮಗೆ ಅತಿ ಅಮುಲ್ಯ ವಸ್ತು, ಅದರ ಮೂಲ ಈ ನದಿ ಅದರ ಸುಚಿತ್ವ ನಮ್ಮೆಲ್ಲರ ಹೊಣೆ. ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿಯುವುದು ಅಗತ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಶಿವು ಗುಂಡಿ, ಗುರು ಹೊರಟ್ಟಿ, ವಿಶ್ವನಾಥ ಸವದಿ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ರಾಜಶ್ರಿÃ ಕೈಸಾಲಿ, ಸೋಳಂಕಿ, ರವಿ ಜವಳಗಿ, ರಾಘು ಗಂಗಟ್ಟಿ, ಬಸವರಾಜ ಮೋಟಗಿ, ಸತೀಶ ಬಂಗಿ, ಆನಂದ ಕೊಪ್ಪದ, ಮಿಲನ ಚುನಮರಿ, ಜಡೇಶ ಗಂಟಿ, ಸಚೀನ ಕಾಟಕರ, ವೆಂಕಟೇಶ ಸಿಂಘನ, ಸದಾಶಿವ ತಟಕೋಟಿ, ಅಶ್ವಿನಿ ದೇಸಾಯಿ, ಬಸವರಾಜ ಕರಡಿ, ವಿಶ್ವನಾಥ ಮಿಳ್ಳಿ, ಸಂಗಮೇಶ ಚನಾಳ, ಗಣಪತಿ ಕಾಮಗೊಂಡ, ಜಕ್ಕಪ್ಪ ಜಿಡ್ಡಿಮನಿ, ಶ್ರಿÃಶೈಲ ಒಂಟಿ ಸೇರಿದಂತೆ ಅನೇಕರು ಇದ್ದರು.

loading...