ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ; ಚಿದಂಬರಂ, ಕಾರ್ತಿಗೆ ಬಂಧನ ರಕ್ಷಣೆ ವಿಸ್ತರಣೆ

0
11

ನವದೆಹಲಿ:- ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಬಂಧಿಸದಂತೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಇಂದು ಮತ್ತೆ ವಿಸ್ತರಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿದೆ
ಕೇಂದ್ರೀಯ ತನಿಖಾ ಸಂಸ್ಥೆ- ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪರ ವಕೀಲರ ವಾದ ಆಲಿಸಿದ ನಂತರ ವಿಶೇಷ ನ್ಯಾಯಾಧೀಶ ಓ.ಪಿ. ಸೈನಿ ಈ ಆದೇಶ ಹೊರಡಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾರ್ತಿ ಚಿದಂಬರಂ ಅವರನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು ನಂತರ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಏರ್ ಸೆಲ್ ಸಂಸ್ಥೆ 2006ರಲ್ಲಿ 3,500 ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆ- ಎಫ್ ಡಿ ಐ ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರುಪಾಯಿ ಎಫ್ ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಗೆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು.
ಅಂದಿನ ನಿಯಮಾನುಸಾರ 600 ಕೋಟಿ ರೂಪಾಯಿವರೆಗಿನ ಎಫ್ ಡಿ ಐ ಪ್ರಸ್ತಾವನೆಗಳಿಗೆ ಹಣಕಾಸು ಸಚಿವಾಲಯ ಎಫ್ಐಪಿಬಿ ಮೂಲಕ ಅನುಮತಿಸುವುದಕ್ಕೆ ಅಧಿಕಾರವಿತ್ತು. ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿಗೆ ಏರ್ ಸೆಲ್ ಕಂಪನಿ 26 ಲಕ್ಷ ರುಪಾಯಿಯನ್ನು ಪಾವತಿಸಿತ್ತು. ಈ ಪ್ರಕರಣವೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ತನಿಖೆ ನಡೆಸುತ್ತಿದೆ.

loading...