ಮಹದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ವಿಫಲ: ಡಿಕೆಶಿ ಆರೋಪ

0
22

ಬೆಳಗಾವಿ
ಕುಂದಗೋಳ ಉಪಚುನಾವಣೆಯಲ್ಲಿ ಹಂಚಲು ಅಕ್ರಮ ಹಣ ಸಾರಾಯಿ ತಂದಿಟ್ಟಿದ್ದಾರೆ ಎಂಬ ಬಸವರಾಜ್ ಬೊಮ್ಮಾಯಿ ಆರೋಪ ವಿಚಾರವಾಗಿ ಚುನಾವಣೆ ಆಯೋಗದ ಫೋನ್ ನಂಬರ್ ಕೊಡುತ್ತೇನೆ ಕೇಂದ್ರ ಸರ್ಕಾರ ಎಲ್ಲಾ ಶಕ್ತಿ ಉಪಯೋಗಿಸಿಕೊಂಡು ಸಿಜ್ ಮಾಡಿಸಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಭೆಗೆ ಆಸಕ್ತಿ ಇರೋ ಶಾಸಕರು ಪಾಲ್ಗೊಳ್ತಾರೆ.ಇಲ್ಲದೇ ಇರೋವರು ಬರಲ್ಲ. ಮಾಜಿ ಸಚಿವ ರಮೇಶ ಜಾರಕಿಹೊಳಿ ಬಂಡಾಯ ಪ್ರಶ್ನೆಗೆ ಉತ್ತರಿಸದೆ ರಮೇಶ ಜಾರಕಿಹೊಳಿ ಹೆಸರು ತಗಿಯುತ್ತಿದ್ದಂತೆ ಮುಂದೆ ನಡೆದ ಡಿಕೆ ಶಿವಕುಮಾರ.

ಕೃಷ್ಣಾ ನದಿ ಬಿಡುಗಡೆ ಕುರಿತು ವಾಸ್ತವಾಂಶ ಎನಿದೆ ತಿಳಿಯಲು ಸಭೆ ಮಾಡುತ್ತಿದ್ದೇವೆ.ಸಭೆ ಕರೆಯುವುದು ವಿಳಂಬ ಆಗಿದೆ ಇನ್ನೂ ಕೂಡ ವಿಳಂಬ ಆಗಬಾರದು ಅಂತಾ ಸಭೆ. ಎಲ್ಲರ ಅಭಿಪ್ರಾಯ ಕೇಳುತ್ತೇನೆ ಎಂದರು.

ಪಕ್ಷಭೇದ ಮರೆತು ಸಭೆ ಮಾಡುತ್ತಿದ್ದೇವೆ. ಕಳಸಾಬಂಡೂರಿ ವಿಚಾರ. ನಮ್ಮ ಬಳಿ ಹಣ ಇದೆ ಎಲ್ಲವೂ ಇದೆ ಆದರೆ ನೋಟಿಫಿಕೇಶನ್ ಕೇಂದ್ರ ಸರ್ಕಾರ ಮಾಡಬೇಕು.ನೋಟಿಫಿಕೇಶ್ ಬಂದ ದಿನವೇ ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಆದರೆ ಕಳಸಾಬಂಡೂರಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

loading...