ಮಾನವತಾವಾದಿ ಯಲಬುರ್ಗಾದ ಮೊಗ್ಗಿ ಬಸವೇಶ್ವರ

0
31

 

ವ್ಹಿ.ಎಸ್.ಶಿವಪ್ಪಯ್ಯನಮಠ
ಯಲಬುರ್ಗಾ: ಕಲೆ ಸಾಹಿತ್ಯ ಒಳಗೊಂಡಂತೆ ಐತಿಹಾಸಿಕ,ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಪ್ರಸಿದ್ದಿಯಾಗಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಚಾರಿತ್ರಿಕ ಹಿನ್ನಲೆಯನ್ನು ಪಡೆದಿರುವ ತಾಲೂಕಾಗಿದೆ.ಅದರಂತೆ ಕೂಡಾ ಯಲಬುರ್ಗಾ ಕೂಡಾ ತನ್ನದೇ ಆದಾ ಇತಿಹಾಸವನ್ನು ಹೊಂದಿದೆ.ಇಲ್ಲಿ ಕಲೆ ಸಾಹಿತ್ಯ,ಸಾಂಸ್ಕೃತಿಕ, ರಂಗಭೂಮಿ, ಸೇರಿದಂತೆ ಇನ್ನಿತರ ಕ್ಷೆÃತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದರೆ ನಿಜಕ್ಕೂ ತಪ್ಪಗಲಾರದು.

ಪಟ್ಟಣದಲ್ಲಿರುವ ಮೊಗ್ಗಿ ಬಸವೇಶ್ವರ ದೇವಸ್ಥಾನವು ಕೂಡಾ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ೧೨ನೇ ಶತಮಾನದಲ್ಲಿ ಆರ್ಥಿಕ,ಧಾರ್ಮಿಕ,ಸಾಮಾಜಕ ಮತ್ತು ಸಾಹಿತ್ಯ ಕ್ಷೆÃತ್ರದಲ್ಲಿ ಮಹತ್ತರ ಕ್ರಾಂತಿ ಮಾಡಿದ ಮಾನವತಾವಾದಿ ಬಸವಣ್ಣನವರು ಸಾಮಾಜಿಕ ಸಮಾನತರ ಮೂಲಕ ಧಾರ್ಮಿಕ ಕ್ರಾಂತಿಯನ್ನೆ ಮಾಡಿದವರು.ಅದರಂತೆ ದಶಕಗಳಿಂದಲೂ ಸರ್ವ ಧರ್ಮದವರು ಕೂಡಿ ಆಚರಿಸುತ್ತಾ ಬಂದಿರುವ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಈ ವರ್ಷ ಕುಡಾ ಬಸವ ಜಯಂತಿಯಂದು ನಡೆಯುವ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ಕೂಡಾ ವೈಭವದಿಂದ ಮಹಾ ರಥೋತ್ಸವವು ಇಂದು ಮೇ.೭ ರಿಂದ ೧೧ರ ವರೆಗೆ ಜರಗುವುದು.
ಪಟ್ಟಣದ ಆರಾಧ್ಯದೈವ ಮೊಗ್ಗಿಬಸವೇಶ್ವರ ಜಾತ್ರಾ ಮಹೋತ್ಸವವು ಮೇ ೭ ರಂದು

ನಡೆಯಲಿರುವ ಜಾತ್ರಾ ಮಹೋತ್ಸವವು ಸಂಸ್ಥಾನ ಹಿರೇಮಠದ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರಿÃಧರ ಮುರಡಿ ಹಿರೇಮಠದ ಷ.ಬ್ರ. ಬಸವಲಿಂಗೇಶ್ವರ ಮಹಾಸ್ವಾಮಿಗಳು,ಕೂಕನೂರಿನ ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು ದಿವ್ಯ ಸಾನಿಧ್ಯದಲ್ಲಿ ನಡೆಯುವ ಜಾತ್ರಾ ಮಹೋತ್ಸವವು ಬೆಳಿಗ್ಗೆ ೬.೩೦ ಕ್ಕೆ ಮೊಗ್ಗಿಬಸವೇಶ್ವರನಿಗೆ ರುದ್ರಾಬೀಷೇಕ,ಧ್ವಜಾರೋಹಣ,ಬಿಲ್ವಾರ್ಚನೆ ಹಾಗೂ ೧೧.೩೦ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿದೆ.ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಉಪನ್ಯಾಸ ನೀಡುವರು. ಸಂಜೆ ೫.೩೦ ಕ್ಕೆ ಮಹಾರಥೋತ್ಸವ ಜರುಗುವುದು,
ಮೇ.೮ ರಂದು ಯಲಬುರ್ಗಾ,ಹೊಸಳ್ಳಿ,ಚಿಕ್ಕೊÃಪ್ಪ,ಕುದರಿಕೋಟಗಿ,ಮಲ್ಕಸಮುದ್ರ,ಗ್ರಾಮದಿಂದ ಸಕಲ ವಾಧ್ಯ ಮೇಳದೊಂದಿಗೆ ಸಾಯಂಕಾಲ ೧೦೧ ಜೋಡೆತ್ತಿನ ಮೆರವಣಿಗೆ,ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರಗಲಿದೆ.

ಮೇ.೯ ರಂದು ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಹಾಲಪ್ಪ ಆಚಾರ ಕಾರ್ಯಕ್ರಮವನ್ನು ಉದ್ಘಾಟಿಸುವರು.ಸಂಸ್ಥಾನ ಹಿರೇಮಠದ ಷ.ಬ್ರ. ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು,ಸಂಸದ ಕರಡಿ ಸಂಗಣ್ಣ ಅಧ್ಯಕ್ಷತೆ ವಹಿಸುವರು.ಬಸವಲಿಂಗಪ್ಪ ಭೂತೆ,ಕಳಕನಗೌಡ ಜುಮ್ಲಾಪೂರು,ಸಿ.ಎಚ್.ಪೋಲೀಸ್ ಪಾಟೀಲ್,ನವೀನಕುಮಾರ ಗುಳಗಣ್ಣನವರ್ ಸೇರಿದಂತೆ ಮತ್ತಿತರರು ಭಾಗವಹಿಸುವರು.ನಂತರ ಕೊಪ್ಪಳದ ಸದಾಶೀವ ಪಾಟೀಲ್ ತಂಡದಿಂದ ಜಾಪದ ಮತ್ತು ರಸಮಂಜರಿ ಕಾರ್ಯಕ್ರಮ ಜರಗಲಿದೆ.
ಮೇ ೧೦ ರಂದು ಸಂಜೆ ೬.೩೦ಕ್ಕೆ ಜರಗುವ ಕಾರ್ಯಕ್ರಮದ ಸಾನಿಧ್ಯವನ್ನು ಶ್ರಿÃಧರ ಮುರಡಿ ಹಿರೇಮಠದ ಷ.ಬ್ರ. ಬಸವಲಿಂಗೇಶ್ವರ ಮಹಾಸ್ವಾಮಿಗಳು ವಹಿಸುವರು.ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು.ಸಮಾರಂಭದಲ್ಲಿ ಬಸವರಾಜ ಉಳ್ಳಾಗಡ್ಡಿ,ಶ್ರಿÃಪಾದಪ್ಪ ಅಧಿಕಾರಿ,ಡಾ,ಶರಣಪ್ಪ ಕೊಪ್ಪಳ,ಯಂಕಣ್ಣ ಯರಾಶಿ,ಬಿ.ಎಂ.ಶಿರೂರು ಮತ್ತಿತರರು ಉಪಸ್ಥಿತರಿರುವರು.

ಯಲಬುರ್ಗಾದ ನಾಟ್ಯವೇದ ಡ್ಯಾನ್ಸ್ ಆಕಾಡೆಮಿ ಇವರಿಂದ ಡ್ಯಾನ್ಸ,ರಸಮಂಜರಿ ಕಾರ್ಯಕ್ರಮ ಜರಗಲಿದೆ.
ಮೇ ೧೧ ರಂದು ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಯಲಬುರ್ಗಾದ ಪುಟ್ಟರಾಜ ಕರೋಕೆ ಸ್ಟುಡಿಯೋ ಆಶ್ರಯದಲ್ಲಿ ವಾಯ್ಸ್ ಆಫ್ ಯಲಬುರ್ಗಾ ಸೀಜನ್-೧ ಪಿನಾಲೆ ಕಾರ್ಯಕ್ರಮ

ಜರಗಲಿದೆ.ಒಟ್ಟು ಐದು ದಿನಗಳ ರ‍್ಯಾಂತ ನಡೆಯುವ ಧಾರ್ಮಿಕ,ಸಾಂಸ್ಕೃತಿಕ,ಕಾರ್ಯಕ್ರಮಗಳು ನಮ್ಮೂರಿನ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿಜೃಂಭಣೆಯಿಂದ ಜರಗಲಿದ್ದು,ಈ ಒಂದು ಜಾತ್ರಾ ಮಹೋತ್ಸವಕ್ಕೆ ತಾವು ಬನ್ನಿ,ಇತರರನ್ನು ಕರೆ ತನ್ನಿ.

loading...