ಕುಂದಗೋಳ ಕದನ: ಕೈ ರಣತಂತ್ರಕ್ಕೆ ಕಮಲದ ಪ್ರತಿತಂತ್ರ

0
26

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಶತಗತಾಯು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಸಮರದ ಕದನದಲ್ಲಿ ಗೆಲುವು ಸಾಧಿಸಬೇಕೆಂಬ ಛಲದೊಂದಿಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ರಣತಂತ್ರ ರೂಪಿಸಿದ್ದ ಕಾಂಗ್ರೆಸ್‌ಗೆ ಪ್ರತಿತಂತ್ರ ಹೂಡಲು ಇಂದು ಬಿಜೆಪಿ ಮುಖಂಡರು ಸಭೆ ಸೇರಿ ಚರ್ಚಿಸಿ ಹೇಗಾದರೂ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುನ್ನುಡಿ ಬರೆಯಲೇಬೇಕೆಂದು ನಿರ್ಧಾರ ಮಾಡಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಗೋವಿಂದ ಕಾರಜೋಳ, ಬಿ.ಶ್ರಿÃರಾಮುಲು ನೇತೃತ್ವದಲ್ಲಿ ಮಹತ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೆÃತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಈಗಾಗಲೇ ಕೈಗೊಂಡಿರುವ ತಂತ್ರಕ್ಕೆ ಪ್ರತಿತಂತ್ರವನ್ನು ಹೆಣೆಯುವ ನಿಟ್ಟಿನಲ್ಲಿ ಮುಖಂಡರು ಚರ್ಚಿಸಿ ಸ್ಥಳೀಯ ಮುಖಂಡರಿಗೆ ಹಲವಾರು ಜವಾಬ್ದಾರಿಗಳನ್ನು ನೀಡಿದರು. ನೀಡಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಸೋಲನ್ನು ಅನುಭವಿಸಬಾರದು ಎಂಬ ಸಂದೇಶವನ್ನು ಸೇರಿದ ಎಲ್ಲ ಮುಖಂಡರಿಗೆ, ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೀಡಿದರೆನ್ನಲಾಗಿದೆ.
ಮುಖಂಡರ ಸಲಹೆ ಸೂಚನೆಗಳನ್ನು ಆಲಿಸಿದ ಸ್ಥಳೀಯ ಶಾಸಕರು, ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರೆನ್ನಲಾಗಿದೆ. ಈ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಟ್ಟಾರೆ ನಿರ್ಣಯಕ್ಕೆ ಬಂದ ಪಕ್ಷದ ವರಿಷ್ಠರು, ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡ ಎಂ.ಆರ್. ಪಾಟೀಲ ಅವರಿಗೆ ನೀಡಿ, ನೀವು ಕೈಗೂಡಿಸಿದರೆ ಗೌಡರ ಗೆಲುವು ಶತಸಿದ್ಧ, ಆ ನಿಟ್ಟಿನಲ್ಲಿ ಕೆಲಸ ಮಾಡಿ, ಮುಂದೆ ನಿಮ್ಮ ಬೇಡಿಕೆಯನ್ನು ಖಂಡಿತವಾಗಿ ಈಡೇರಿಸಲಾಗುವುದೆಂಬ ಭರವಸೆ ನೀಡಿದರೆನ್ನಲಾಗಿದೆ. ಕಾಂಗ್ರೆಸ್ ಯಾವುದೇ ರಣತಂತ್ರವನ್ನು ಬಳಸಿದರೂ ಅದಕ್ಕೆ ಪ್ರತಿತಂತ್ರ ನಮ್ಮ ಬಳಿ ಇರಲಿ. ಆ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸೋಣ, ಈ ಉಪಕದನ ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಆ ಹಿನ್ನೆಲೆಯಲ್ಲಿ ನಮ್ಮ ನಮ್ಮಲ್ಲಿರುವ ಅಸಮಾಧಾನ ಮರೆತು ಕೆಲಸ ಮಾಡೋಣ ಎಂದು ವರಿಷ್ಠ ಮುಖಂಡರು ಸೂಚನೆ ನೀಡಿದಾಗ ಸಭೆಯಲ್ಲಿ ಸೇರಿದ ಉಳಿದವರು ಒಕ್ಕೊÃರಲಿನ ಒಪ್ಪಿಗೆಯನ್ನು ನೀಡಿದರೆನ್ನಲಾಗಿದೆ.
ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಅಶೋಕ ಕಾಟವೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ, ಎಂ.ಆರ್. ಪಾಟೀಲ ಇದ್ದರು.

loading...