ಬಸವೇಶ್ವರ ಜಯಂತಿ: ಭವ್ಯ ಮೆರವಣಿಗೆ

0
29

ಕನ್ನಡಮ್ಮ ಸುದ್ದಿ-ತೇರದಾಳ: ನಗರದ ಬಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಸಂಜೆ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು. ಇದರ ನಿಮಿತ್ಯ ಪಲ್ಲಕ್ಕಿ ಹಾಗೂ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
೩೦ಕ್ಕೂ ಹೆಚ್ಚು ಜೋಡೆತ್ತುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ರಂಗು ತಂದವು. ಸ್ಥಳೀಯ ಹಿರೇಮಠದ ಬಾಲಗಂಗಾಧರ ದೇವರು ಸಾನಿಧ್ಯ ವಹಿಸಿ, ಮಾತನಾಡಿ `ಕ್ರಾಂತಿಯೋಗಿ ಬಸವೇಶ್ವರರು ಮಾನವ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದವರು. ಅವರ ಸರಳ, ಸುಂದರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಆ ವ್ಯಕ್ತಿ ಗೌರವದಿಂದ ಬಾಳಬಹುದು. ಇಂದಿನ ಅಧುನಿಕ ಕಾಲದಲ್ಲಿ ಅಣ್ಣನ ವಚನಗಳು ವಿಶ್ವದ ಬಹುತೇಕ ಭಾಷೆಗಳಲ್ಲಿ ತರ್ಜುಮೆಗೊಳ್ಳುತ್ತಿರುವುದು, ಹಾಗೂ ಎಲ್ಲೆಡೆ ಬಸವ ಮೂರ್ತಿ ಪ್ರತಿಷ್ಠಾಪಣೆಗೊಳ್ಳುತ್ತಿರುವುದು ಬಸವ ತತ್ವದ ಪ್ರಭಾವ’ ಎಂದರು. ಬಳಿಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಭವ್ಯ ಮೆರವಣಿಗೆ ಸಿದ್ಧೆÃಶ್ವರ ಗಲ್ಲಿಯಿಂದ ಹೊರಟು ಜವಳಿ ಬಜಾರ್, ಪೇಟೆಭಾಗದ ಮಾರುತಿ ಮಂದಿರ, ಗಣೇಶ ಮಂದಿರ, ಎಸ್‌ಬಿಐ ವೃತ್ತ, ಕಲ್ಲಟ್ಟಿ ಮೂಲಕ ಸಾಗಿ ಗಂಗಾಧರ ದೇವಸ್ಥಾನದಲ್ಲಿ ಆರುತಿ ಮಾಡಿ, ಮಹಾದ್ವಾರದ ಮೂಲಕ ಕ್ಷೆÃತ್ರಾಧಿಪತಿ ಅಲ್ಲಮ ಪ್ರಭುದೇವಸ್ಥಾನಕ್ಕೆ ತಲುಪಿತು. ಅಲ್ಲಿ ದೇವರಿಗೆ ಆರುತಿ ಮಾಡಿ, ರೈತ ಮಿತ್ರ ಎತ್ತುಗಳನ್ನು ತಂದ ರೈತರಿಗೆ ಸನ್ಮಾನಿಸಲಾಯಿತು. ಮೆರವಣಿಗೆಯುದ್ದಕ್ಕೂ ಸುಮಂಗಲೆಯರು ಬಸವೇಶ್ವರ ಭಾವಚಿತ್ರಕ್ಕೆ ಆರುತಿ ಮಾಡಿ, ನೈವೇದ್ಯ ಸಮರ್ಪಣೆ ಮಾಡಿದರು. ಕರಡಿ ಮಜಲು, ಡಾಲ್‌ಬಿಗಳು ಮೆರವಣಿಗೆ ಮೆರಗನ್ನು ಹೆಚ್ಚಿಸಿದವು. ಬಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮುಖಂಡರು, ಯುವಕರು ಸೇರಿದಂತೆ ಅಪಾರ ಜನ ಪಾಲ್ಗೊಂಡಿದ್ದರು.

loading...