ಸಾಹಿತ್ಯ ಪರಿಷತ್ತು ಜನರಲ್ಲಿ ವಿಶೇಷ ಜಾಗೃತಿ ತಂದಿದೆ: ಮೋಹನ

0
33

ನರಗುಂದ: ಇಡೀ ಜಗತ್ತಿಗೆ ಸವಾಲು ಹಾಕುವಂತ ಸಾಹಿತ್ಯ ಕನ್ನಡ ಭಾಷೆಯಲ್ಲಿದೆ. ಅಂತಹ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಾಭಿವೃದ್ಧಿಗೆ ಸೀಮಿತವಾಗಿರದೆ ಕನ್ನಡ ನಾಡಿನ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯ ಮಾಡುತ್ತಿರುವ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ-ಜಲದ ಬಗ್ಗೆ ಜನರಲ್ಲಿ ವಿಶೇಷ ಜಾಗೃತಿ ತಂದಿದೆ ಎಂದು ನರಗುಂದ ತಾಲೂಕು ಕ.ಸಾ.ಪ ಅದ್ಯಕ್ಷ ಮೋಹನ ಕಲಹಾಳ ಅಭಿಪ್ರಾಯಪಟ್ಟರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಭೈರನಹಟ್ಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೪ ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಅದು ದೇವ ಭಾಷೆ. ಅಂತಹ ಬಾಷೆ ಇವತ್ತು ಕನ್ನಡಿಗರಿಂದಲೇ ಮಾಯವಾಗುತ್ತಿರುವುದು ದುರ್ದೈವದ ಸಂಗತಿ. ಹೀಗಾಗಿ ಕನ್ನಡ ನಾಡಿನ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕೊಡಿಸಬೇಕು ಅಂದಾಗ ಮಾತ್ರ ಕನ್ನಡ ಬಾಷೆ ಉಳಿಯಲು ಸಾದ್ಯ ಎಂದು ಹೇಳಿದರು.
ಮೇ ೫, ೧೯೧೫ ರಂದು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೆ ೧೦೪ ವರ್ಷಗಳನ್ನು ಪೂರೈಸಿದೆ. ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು.ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರಿÃಗಳು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕರುನಾಡಿನ ಸಮಸ್ತ ಕನ್ನಡಾಭಿಮಾನಿಗಳ ಆತ್ಮವಿದ್ದಂತೆ. ಆಂಗ್ಲ ವ್ಯಾಮೋಹಕ್ಕೆ ತುತ್ತಾಗಿ ಕರ್ನಾಟಕದಲ್ಲೆÃ ಮಾಯವಾಗುತ್ತಿರುವ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಸಾಹಿತ್ಯ ಪರಿಷತ್ತಿನ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು ಎಂದರು.
ಚನ್ನಬಸಪ್ಪ ಕಂಠಿ ಮಾತನಾಡಿದರು. ಬಸವರಾಜ ಗುರೂಜಿ, ಸಿ.ಎಚ್.ಕೋರಿ, ವೀರಭದ್ರಪ್ಪ ಪುರಾಣಿ, ಪ್ರೊÃ, ಪಿ.ಎಸ್.ಅಣ್ಣಿಗೇರಿ, ಪ್ರೊÃ ಆರ್.ಬಿ.ಚಿನಿವಾಲರ, ಶಿವಾನಂದ ಶೇಬಣ್ಣವರ, ಮುರಗೇಶ ಪುರಾಣಿ ಇದ್ದರು. ಮಹಾಂತೇಶ ಹಿರೇಮಠ, ಕೆ.ಟಿ.ಪಾಟೀಲ ನಿರ್ವಹಿಸಿದರು.

loading...