ಬಸವೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ

0
34

 

ಹಳಿಯಾಳ: ಪೇಟೆಯ ಬಸವೇಶ್ವರ ದೇವಸ್ಥಾನದ ೪೯ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಶೃದ್ಧಾಭಕ್ತಿ ಹಾಗೂ ಸಂಭ್ರಮ-ಸಡಗರದಿಂದ ನೆರವೇರಿತು.
ಅಕ್ಷಯ ತೃತೀಯದಂದು ಮಂಗಳವಾರ ಆರಂಭಗೊಂಡ ಜಾತ್ರಾ ಮಹೋತ್ಸವದ ಅಂಗವಾಗಿ ಬಸವೇಶ್ವರ ಜನ್ಮದಿನೋತ್ಸವವನ್ನು ತೊಟ್ಟಿಲು ತೂಗಿ ಪರಂಪರೆಯಂತೆ ಬಸವಜಯಂತಿ ಆರಂಭಿಸಲಾಯಿತು. ಬೆಳಿಗ್ಗೆ ಜವಳಿಓಣಿಯ ಗುರುವೀರಕ್ತಮಠದಿಂದ ಪೂರ್ಣಕುಂಭ ಮೆರವಣಿಗೆ ಹೊರಟು ಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣ ದೇವರಿಗೆ ಕುಂಭಾಭಿಷೇಕ ಹಾಗೂ ಬಿಲ್ವಾರ್ಚನೆ ನೆರವೇರಿಸಲಾಯಿತು. ಹಾಗೂ ಮಧ್ಯಾಹ್ನ ನಾಮಕರಣ ಮಾಡಲಾಯಿತು. ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.

ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ಅಲಂಕೃತ ರಥದಲ್ಲಿ ಬೆಳ್ಳಿಯ ನಂದಿ ಸ್ವರೂಪಿ ಬಸವಮೂರ್ತಿಯನ್ನು ಇರಿಸಿ ಪೇಟೆ ರಸ್ತೆಯಲ್ಲಿ ರಥೋತ್ಸವ ಆರಂಭಿಸಲಾಯಿತು. ಕರಡಿಮಜಲು ವಾದ್ಯಮೇಳದೊಂದಿಗೆ ಭಕ್ತರು ‘ಹರಹರ ಮಹಾದೇವ’ ಎಂಬ ಉದ್ಘೊÃಷಗಳೊಂದಿಗೆ ರಥವನ್ನು ಎಳೆದರು. ಪೇಟೆಯ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ಹಾಗೂ ಕಾಣಿಕೆ ಸಮರ್ಪಿಸಿದರು. ಪುರಸಭೆ ಎದುರು ಬಂದ ರಥವನ್ನು ತಾಲೂಕಾ ಕಾರ್ಯಾಲಯದ ವತಿಯಿಂದ ನಡೆದು ಬಂದ ಪದ್ಧತಿಯಂತೆ ತಹಶೀಲ್ದಾರ ಶಿವಾನಂದ ಉಳ್ಳೆÃಗಡ್ಡಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ರಥವು ಜವಳಿಗಲ್ಲಿ ಮೂಲಕ ಸಾಗಿ ವೀರಕ್ತಮಠಕ್ಕೆ ತಲುಪಿ ಪೇಟೆ ಬಸವೇಶ್ವರ ದೇವಸ್ಥಾನದ ಬಳಿಯ ಸ್ವಸ್ಥಾನಕ್ಕೆ ಬಂದು ತಲುಪಿತು.

loading...