ಮಳೆಗಾಲದಲ್ಲಿ ಕೈಗೊಳ್ಳಬೇಕಾದ ವಿವಿಧ ಪೂರ್ವಭಾವಿ ಕೆಲಸಗಳ ಬಗ್ಗೆ ಸಭೆ

0
25

 

ಹಳಿಯಾಳ: ಮಳೆಗಾಲದಲ್ಲಿ ಕೈಗೊಳ್ಳಬೇಕಾದ ವಿವಿಧ ಪೂರ್ವಭಾವಿ ಕೆಲಸಗಳ ಬಗ್ಗೆ ತಾಲೂಕಾಡಳಿತದ ಸಭೆಯು ಬುಧವಾರ ತಹಶೀಲ್ದಾರ ಕಚೇರಿಯಲ್ಲಿ ನೆರವೇರಿತು.
ತಹಶೀಲ್ದಾರ ಶಿವಾನಂದ ಉಳ್ಳೆÃಗಡ್ಡಿ ಇವರ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ದಾಂಡೇಲಿ ತಹಶೀಲ್ದಾರ ಚಾಮರಾಜ ಪಾಟೀಲ ಇವರ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಳೆಗಾಲದ ಆರಂಭದಲ್ಲಿ ಅಡ್ಡಮಳೆ ಹಾಗೂ ಗಾಳಿಯ ಪರಿಣಾಮ ಕೆಲ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಈ ಬಗ್ಗೆ ತಾಲೂಕಾ ಕಂಟ್ರೊÃಲ್ ರೂಂ ಗೆ ಮಾಹಿತಿ ನೀಡಿಬೇಕು. ಅರಣ್ಯ ಇಲಾಖೆಯವರು, ರಸ್ತೆ ಇಲಾಖೆಯವರು ಪ್ರಯಾಣಿಕರಿಗೆ ತೊಂದರೆಯಾಗುವುದಾದ ಮರಗಳನ್ನು ಹಾಗೂ ಟೊಂಗೆಗಳನ್ನು ತೆರವುಗೊಳಿಸಬೇಕು. ಮಳೆಗಾಲದ ಆರಂಭದಲ್ಲಿ ಬರಬಹುದಾದ ರೋಗರುಜಿನಗಳ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾವಹಿಸಬೇಕು ಎಂದು ತಹಶೀಲ್ದಾರರು ಸೂಚಿಸಿದರು.

ಬಿತ್ತನೆ ಹಂಗಾಮು ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಕೃಷಿ ಇಲಾಖೆಯವರು ಭತ್ತ ಹಾಗೂ ಗೋವಿನಜೋಳದ ಸಾಕಷ್ಟು ದಾಸ್ತಾನು ಮಾಡಿಕೊಂಡಿರಬೇಕು. ಅವಶ್ಯಕತೆ ಇದ್ದಷ್ಟು ರಸಗೊಬ್ಬರಗಳನ್ನು ಸಹ ಸಂಗ್ರಹಿಸಿ ಸೂಕ್ತ ಸಮಯದಲ್ಲಿ ರೈತರಿಗೆ ನಿಯಮದಂತೆ ವಿತರಿಸಬೇಕು ಎಂದು ತಿಳಿಸಿದರು.
ಅರಣ್ಯ, ಹೆಸ್ಕಾಂ, ಆರೋಗ್ಯ, ಪಿಡಬ್ಲೂö್ಯಡಿ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕಾ ಇಲಾಖೆ, ಪಂಚಾಯತರಾಜ, ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ, ಪುರಸಭೆ, ಶಿಕ್ಷಣ ಮೊದಲಾದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

loading...