ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಒತ್ತಾಯ

0
25

 

ಕಾರವಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ನಗರಸಭೆ ಈ ಬಗ್ಗೆ ಕೂಡಲೇ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿದೆ.
ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಯೋಗೇಶ್ವರ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ, ಈಗ ನಗರಸಭೆಯು ಜನತೆಗೆ ಪೂರೈಸುತ್ತಿರುವ ನೀರು ಶುದ್ಧವಾಗಿಲ್ಲ. ಜನತೆ ಈ ನೀರನ್ನು ಕುಡಿದರೇ ಅನಾರೋಗ್ಯದಿಂದ ಬಳಲುವುದು ನಿಶ್ವಿತ. ಈ ಕೂಡಲೇ ಪೌರಾಯುಕ್ತರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಗಟಾರ್ ಕ್ಲಿನಿಂಗ್: ಮಳೆಗಾಲ ಸಮೀಪಿಸುತ್ತಿದ್ದರೂ ೩೧ ವಾರ್ಡ್ಗಳ ಯಾವೊಂದು ಗಟಾರ್‌ಗಳನ್ನು ಸ್ವಚ್ಚಗೊಳಿಸಿಲ್ಲ. ಅಲ್ಲದೇ ನಗರದ ರಾಜ ಕಾಲುವೆಗಳನ್ನು ಸಹ ಸ್ವಚ್ಚಗೊಳಿಸದೇ ನಗರಸಭೆ ನಿರ್ಲಕ್ಷವಹಿಸಿದೆ. ಒಂದೊಮ್ಮೆ ಸ್ವಚ್ಛಗೊಳಿಸದೇ ಇದ್ದರೇ ಭಾರೀ ಮಳೆಗಾಲದಲ್ಲಿ ನೀರು ಸರಾಗವಾಗಿ ಗಟಾರ್‌ನಲ್ಲಿ ಹರಿಯದೇ ಅಲ್ಲಲ್ಲಿ ನಿಂತು ಕೃತಕ ಪ್ರವಾಹ ಸೃಷ್ಠಿಯಾಗುವ ಸಾಧ್ಯತೆಗಳು ಇಲ್ಲದಿಲ್ಲ. ಅಲ್ಲದೇ ನೀರು ನಿಂತಲ್ಲೆ ನಿಲ್ಲುವುದರಿಂದ ರೋಗ ರುಜಿನಗಳು ಹರಡುವ ಸಂಭವವಿದೆ. ಹೀಗಾಗಿ ರಾಜಕಾಲುವೆ ಸೇರಿದಂತೆ ಎಲ್ಲಾ ಗಟಾರ್‌ಗಳನ್ನು ಸ್ವಚ್ಚಗೊಳಿಸಲು ಪೌರಾಯುಕ್ತರು ಕ್ರಮ ಕೈಗೊಳ್ಳಬೇಕು.

ಅಸಮರ್ಪಕ ಯುಜಿಡಿ ವ್ಯವಸ್ಥೆ: ನಗರದಲ್ಲಿ ಈಗಾಗಲೇ ಕೈಗೊಂಡಿರುವ ಎಲ್ಲಾ ಯುಜಿಡಿ ವ್ಯವಸ್ಥೆಗಳು ಅಸಮರ್ಪಕವಾಗಿದೆ. ಈ ಯುಜಿಡಿಯಲ್ಲಿ ತ್ಯಾಜ್ಯಗಳು ಸರಾಗವಾಗಿ ಹರಿದು ಹೋಗದೇ ಅಲ್ಲಲ್ಲಿ ರಸ್ತೆಯ ಮೇಲೆ ಉಕ್ಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ರಸ್ತೆಯ ಮೇಲೆ ಸಾಗುವ ಈ ಕೊಳಚೆಯನ್ನು ದಾಟುವ ಹಾಗು ದುರ್ಗಂಧ ಸೇವನೆ ಮಾಡುವ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ. ಈಗಾಗಲೇ ಇಂಥ ಪರಿಸ್ಥಿತಿ ಇದೆ. ಇನ್ನೂ ಮಳೆಗಾಲದಲ್ಲಿ ಹೀಗಾದರೇ ಸಾರ್ವಜನಿಕರು ತೊಂದರೆ ಅನುಭವಿಸುವುದಂತು ನಿಶ್ಚಿತ. ಆದ್ದರಿಂದ ಕೂಡಲೇ ನಗರಸಭೆ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರವಾರ ನಗರಾಧ್ಯಕ್ಷ ಮನೋಜ ಭಟ್, ನಗರಸಭೆ ಸದಸ್ಯರಾದ ಡಾ. ನಿತೀನ ಪಿಕಳೆ, ರವಿರಾಜ ಅಂಕೋಲೆಕರ, ಉಲ್ಲಾಸ ಕೇಣಿ, ರೋಷನಿ ಮಾಳಸೆಕರ, ಅನುಶ್ರಿÃ ಕುಬಡೆ, ಪ್ರಕಾಶ ನಾಯ್ಕ, ಸುಜಾತಾ ತಾಮಸೆ, ಹನುಮಂತ ತಳವಾರ, ಪ್ರಧಾನ ಕಾರ್ಯದರ್ಶಿ ನಾಗೇಶ ಕುರಡೇಕರ, ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.

loading...