ಕನ್ನಡ ಮರಾಠಿಗರ ನಡುವೆ ವಾಗ್ವಾದ: ಲಘು ಲಾಠಿ ಪ್ರಹಾರ

0
31

ಬೆಳಗಾವಿ
ಧ್ವಜ ಅಳವಡಿಸುವುದಕ್ಕಾಗಿ ಕನ್ನಡ ಮತ್ತು ಮರಾಠಿಗರ ನಡುವೆ ವಾಗ್ವಾದ ನಡೆದಿಲ್ಲದೇ, ಪರಸ್ಪರ ಕಲ್ಲೂ ತೂರಾಟ ಎಸಗಿದ ಘಟನೆ ತಾಲೂಕಿನ ಹಲಗಾ- ಬಸ್ತವಾಡ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೆÇಲೀಸರು ಲಾಠಿ ಚಾರ್ಜ ಮಾಡಿದ್ದಾರೆ.
ಬಸ್ತವಾಡ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ ಜಾತ್ರೆ ಆರಂಭವಾಗಿದ್ದರಿಂದ ದೇವಿ ಪುತ್ಥಳಿಯನ್ನು ಸಾರ್ವಜನಿಕರು ದರ್ಶನಕ್ಕೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ದೇವಸ್ಥಾನದಿಂದ ಹೊರಗೆ ಪತ್ಯೇಕ ಮಂಟಪ ನಿರ್ಮಿಸಿ, ದೇವಿಯ ಪುತ್ಥಳಿಯನ್ನು ಗದ್ದುಗೆಗೊಸಿದ್ದಾರೆ. ಈ ವೇಳೆ ಕನ್ನಡಪರ ಸಂಘಟನೆಯವರು ಮಂಟಪದ ಮೇಲೆ ಕನ್ನಡ ಭಾವುಟ ಅಳವಡಿಸಿದ್ದರು. ಈ ವೇಳೆ ಮರಾಠಾ ಸಂಘಟನೆಯ ಯುವಕರು ತಮ್ಮ ಭಾಗವಾ ಧ್ವಜವನ್ನು ಮಂಟಪದ ಮೇಲೆ ಅಳವಡಿಸಲು ಮುಂದಾಗಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ.
ಮಂಟಪದ ಮೇಲೆ ಯಾವುದೇ ಕಾರಣಕ್ಕು ಭಾಗವಾ ಧ್ವಜ ಅಳವಡಿಸಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆ ಕಾರ್ಯಕರ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾವು ಅಳವಡಿಸಿಯೇ ತಿರುತ್ತೇವೆ ಎಂದು ಮಾರಾಠಾ ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದ್ದಾರೆ. ಇದಕ್ಕೆ ಒಪ್ಪದ ಕನ್ನಡಿಗರು ಯಾವುದೇ ಕಾರಣಕ್ಕು ಅಳವಡಿಸದಂತೆ ತಿಳಿಸಿದ್ದಾರೆ. ಅಲ್ಲದೇ ಲಕ್ಷ್ಮಿದೇವಿ ಯಾವುದೇ ಸಮುದಾಯ ಹಾಗೂ ಭಾಷೆಗೆ ಸಿಮೀತವಾಗಿಲ್ಲ. ಭಾಗವಾ ಧ್ವಜ ಹಿಂದೂತ್ವದ ಪ್ರತಿಕಾರ ಆದ್ದರಿಂದ ಅಳವಡಿಸುತÉೀವೆ ಎಂದು ಪಟ್ಟು ಹಿಡಿದು ಕೆಲ ಸಮಯ ಎರಡು ಗುಂಪುಗಳ ಮಧ್ಯ ವಾಗ್ವಾದ ನಡೆದಿದೆ.

loading...